ಕುಸುಮಾಗೆ ಭಾಗ್ಯ ಬೇಡವಾದ್ಲಾ? – ಮಗನ ವ್ಯಾಮೋಹಕ್ಕೆ ಡ್ರಾಮಾ ಬೇಕಿತ್ತಾ?
ಟ್ವಿಸ್ಟ್ ಪಡೆದುಕೊಂಡ ಭಾಗ್ಯಲಕ್ಷ್ಮೀ!
ಭಾಗ್ಯ ಲಕ್ಷ್ಮೀ ಸೀರಿಯಲ್ ವೀಕ್ಷಕರು ಕಾಯ್ತಾ ಇದ್ದ ದಿನ ಬಂದೇ ಬಿಟ್ಟಿದೆ. ಕಡೆಗೂ ಭಾಗ್ಯ ಗೆ ತಾಂಡವ್ ಕಳ್ಳಾಟ ಗೊತ್ತಾಗಿದೆ. ಗಂಡನ ಕಳ್ಳಾಟ ಗೊತ್ತಾದ ಭಾಗ್ಯ ಈಗ ಕಣ್ಣೀರ ಕೋಡಿ ಹರಿಸುತ್ತಿದ್ದಾಳೆ.. ನಂಬಿದ ದೇವರನ್ನ ಶಪಿಸುತ್ತಾ ಇದ್ದಾಳೆ.. ಅಷ್ಟೇ ಅಲ್ಲ ಮೂರ್ಹೊತ್ತು ಸೊಸೆ ಸೊಸೆ ಅಂತಿದ್ದ ಕುಸುಮಾ ಮುಖವಾಡ ಕೂಡ ರಿವೀಲ್ ಆಗಿದೆ.. ಇದೀಗ ಭಾಗ್ಯ ಆಕ್ಟಿಂಗ್ ನೋಡಿ ವೀಕ್ಷಕರು ನಟಿ ಕಲ್ಪನಾರನ್ನೇ ನೆನಪಿಸಿಕೊಂಡಿದ್ದಾರೆ. ಇದೀಗ ಸತ್ಯ ಗೊತ್ತಾದ ಭಾಗ್ಯ ತಾಂಡವ್ ನ ಬಿಟ್ಟು ಹೋಗ್ತಾಳಾ? ಕುಸುಮಾಗೆ ತನ್ನ ಸೊಸೆ ಭಾಗ್ಯ ಮುಖ್ಯ ಅಲ್ವಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ‘ಪುಷ್ಪ 2’ ಸಿನಿಮಾ ಟಿಕೆಟ್ ದರ ಹೆಚ್ಚಳ ಸಾಧ್ಯತೆ – ಅಲ್ಲು ಅರ್ಜುನ್ ಅಭಿಮಾನಿಗಳ ಅಸಮಾಧಾನ
ಭಾಗ್ಯಗೇ ನಿಜ ವಿಚಾರ ತಿಳಿದರೆ ಎಲ್ಲಿ ನನ್ನ ಮಗನನ್ನು ಬಿಟ್ಟು ಹೋಗುತ್ತಾಳೆ ಎನ್ನುವ ಭಯ ಕುಸುಮಾಗೆ. ಆದ್ರೆ ಭಾಗ್ಯ ಬುದ್ಧಿವಂತೆಯಂತಿರೋ ಪೆದ್ದಿ.. ಇಷ್ಟು ದಿನಗಳಿಂದ ಭಾಗ್ಯಾಳ ಕಣ್ಣ ಮುಂದೆ ಎಲ್ಲಾ ನಡೆಯುತ್ತಿದ್ದರೂ ಆಕೆಗೆ ಮಾತ್ರ ಏನು ಗೊತ್ತಾಗೋದೇ ಇಲ್ಲ.. ಭಾಗ್ಯ ಅಮಾಯಕಳಂತೆ ತನ್ನ ಗಂಡ ತನಗೆ ಆ ರೀತಿ ಮೋಸ ಮಾಡೋದಕ್ಕೆ ಸಾಧ್ಯಾನೆ ಇಲ್ಲ ಎನ್ನುವ ನಂಬಿಕೆಯಿಂದ.. ತಾಂಡವ್ ಅದೆಷ್ಟೇ ಕೆಟ್ಟ ರೀತಿಯಲ್ಲಿ ತನ್ನನ್ನು ನಡೆಸಿಕೊಂಡರೂ, ಆತನನ್ನು ಅತಿಯಾಗಿ ನಂಬಿದ್ದಳು. ಆದ್ರೀಗ ತಾಂಡವ್ ನ ನಿಜ ಬಣ್ಣ ಭಾಗ್ಯ ಮುಂದೆ ಬಯಲಾಗಿದೆ.
ಹೌದು, ಭಾಗ್ಯಾಗೆ ಸಿಕ್ಕ ಕಪಲ್ ಟ್ರಾವೆಲ್ ಪ್ಯಾಕೇಜ್ ಹಿಡಿದು ಕೊಂಡ ಶ್ರೇಷ್ಠಾ ಜೊತೆ ತಾಂಡವ್ ಎಂಜಾಯ್ ಮಾಡುತ್ತಿದ್ದ. ಆದ್ರೆ ತಾಂಡವ್ ಇಷ್ಟೆಲ್ಲಾ ಎಂಜಾಯ್ ಮಾಡಲು ಭಾಗ್ಯನೇ ಕಾರಣ.. ಆಕೆಯೇ ತಾಂಡವ್ ಹಾಗೂ ಶ್ರೇಷ್ಠಾ ಉಳಿದುಕೊಂಡಿದ್ದ ಹೊಟೇಲ್ ನಲ್ಲಿ ಎಲ್ಲಾ ಅರೇಂಜ್ ಮೆಂಟ್ ಮಾಡಿದ್ದು.. ಅಷ್ಟೇ ಅಲ್ಲ ತಾಂಡವ್ ಶ್ರೇಷ್ಠ ಮದುವೆ ಆಗಲು ಭಾಗ್ಯ ಅರಶಿನ ಕೊಂಬು ಕೂಡ ರೆಡಿ ಮಾಡಿದ್ಲು.. ಇನ್ನೇನು ಕೊಡ್ಬೇಕು ಅನ್ನೋವಷ್ಟರಲ್ಲಿ ಭಾಗ್ಯಗೆ ಗೊತ್ತಾಗಿ ಬಿಡುತ್ತೆ.. ಕಂಠಪೂರ್ತಿ ಕುಡಿದಿದ್ದ ತಾಂಡವ್, ಶ್ರೇಷ್ಠಾಗೆ ಮೈಮೇಲೆ ಗೋಚರವೇ ಇರೋದಿಲ್ಲ.. ಶ್ರೇಷ್ಠ ಮಾತಿನಂತೆ ತಾಂಡವ್ I LOVE YOU ಎಂದಿದ್ದಾನೆ. ಭಾಗ್ಯಳನ್ನು ತನ್ನ ಜೀವನದಿಂದ ಆದಷ್ಟು ಬೇಗ ದೂರ ಮಾಡೊದಾಗಿ ಹೇಳಿದ್ದಾನೆ, ಅಷ್ಟೇ ಅಲ್ಲ ಭಾಗ್ಯಳಂತ ಎಮ್ಮೆಯ ಜೊತೆ ಸಂಸಾರ ಮಾಡೋಕೆ ತನಗೆ ಸಾಧ್ಯವೇ ಇಲ್ಲ ಅನ್ನೋದನ್ನು ಸಹ ಹೇಳಿದ್ದಾನೆ ತಾಂಡವ್.
ಇಲ್ಲಿವರೆ ಏನು ಆಗಬಾರದು ಎಂದು ಕುಸುಮಾ ಮತ್ತು ಮನೆಯವರು ಅಂದುಕೊಂಡಿದ್ರೋ ಅದೆಲ್ಲಾ ಈಗ ಆಗಿಯೇ ಹೋಗಿದೆ. ತನ್ನ ಗಂಡನ ನಿಜ ರೂಪ ಕಂಡು, ತಾನು ಇಲ್ಲಿವರೆಗೆ ಕಟ್ಟಿಕೊಂಡು ಬಂದಿದ್ದ ನಂಬಿಕೆ ಸೌದ ಮುರಿದು ಹೋಗುತ್ತದೆ. ಜೋರಾದ ಮಳೆಯಲ್ಲಿ ಭಾಗ್ಯ, ಅಳುತ್ತಾ, ತಾನು ಎಡವಿದ್ದೆಲ್ಲಿ ಎಂದು ಯೋಚನೆ ಮಾಡುತ್ತಾ, ತನ್ನ ಹೆಡ್ಡತನವನ್ನು ದೂಷಿಸುತ್ತಾಳೆ. ನಾನು ಕಣ್ಣಿಗೆ ಬಟ್ಟೆ ಕಟ್ಟಿರೋ ಭಾಗ್ಯ, ಜೀವನದಲ್ಲಿ ಎಡವದೇ ಇರೋದಕ್ಕೆ ಸಾಧ್ಯಾನ? ನನ್ನ ಕಣ್ಣಿಗೆ ಕಟ್ಟಿರೋದೆ ಅಂತಿಂತ ಪರದೆ ಅಲ್ಲ, ದಪ್ಪ ಪರದೆ, ನನ್ನ ಕಣ್ಣು ಮುಂದೆ ಇಷ್ಟೆಲ್ಲಾ ನಡೆತಾ ಇದ್ದರೂ ಕೂಡ, ಏನೂ ಕಾಣದೇ ಇರೋವಷ್ತು ದಪ್ಪದ ಪರದೇ ಕಟ್ಟಿಕೊಂಡಿರೋ ದಡ್ಡಿ ನಾನು ಎನ್ನುತ್ತಾ, ಮಳೆಯಲ್ಲಿ ನೆನೆಯುತ್ತಾ ಹಣೆ ಚಚ್ಚಿಕೊಳ್ಳುತ್ತಿದ್ದಾಳೆ ಭಾಗ್ಯ. ಅಷ್ಟೇ ಅಲ್ಲ ದೇವರ ಗುಡಿಗೆ ಹೋಗಿ ದೇವರನ್ನೇ ಭಾಗ್ಯ ಶಪಿಸುತ್ತಾ ಇದ್ದಾಳೆ..
ಇದೀಗ ಭಾಗ್ಯ ಗೋಳು ನೋಡಿದ ಜನರು, ಭಾಗ್ಯ ನೀನು ಹೀಗೆ ಇದ್ರೆ ಆಗೋಲ್ಲ ಬದಲಾಗಬೇಕು ಎಂದಿದ್ದಾರೆ.. ಇನ್ನೂ ಕೆಲವರು, ಅಮ್ಮ ಭಾಗ್ಯ.. ಈಗಲಾದರು ಸಿಡಿದೇಳು.. ಅವರಿಬ್ಬರನ್ನ ಮಟ್ಟಾಹಾಕು ಅಂತಾ ಹೇಳಿದ್ದಾರೆ. ಜೊತೆಗೆ ಇಷ್ಟೆಲ್ಲಾ ಆದ ಮೇಲೆ ಮತ್ತೆ ತಾಂಡವ ಬೇಕು, ಅವನ ಜೊತೆ ಜೀವನ ನಡೆಸಿದರೆ ಸೆಲ್ಫ್ ರೆಸ್ಪೆಕ್ಟ್ ಇರೋದಿಲ್ಲ ಬದಲಾಗು ಎಂದು ಬುದ್ದಿ ಮಾತು ಹೇಳಿದ್ದಾರೆ. ಇನ್ನೂ ಕೆಲವರು ಭಾಗ್ಯ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಆಕೆಯ ನಟನೆ ನೋಡಿ ಶರಪಂಜರ ಸಿನಿಮಾ ನಾಯಕಿ ಕಲ್ಪನಾ ಅವರನ್ನ ನೆನಪಿಸಿಕೊಂಡಿದ್ದಾರೆ..
ಇನ್ನು ಭಾಗ್ಯ ತನ್ನ ಸೊಸೆ ಅಂತಾ ಹೇಳಿಕೊಂಡು ಓಡಾಡುತ್ತಿದ್ದ ಕುಸುಮಾ ಬಣ್ಣ ಕೂಡ ಬಯಲಾಗಿದೆ.. ಹೌದು, ಕುಸುಮಾ ಯಾವತ್ತೂ ತಾಂಡವ್ ಜೀವನ ಚೆನ್ನಾಗಿ ಇರ್ಬೇಕು.. ಅದಕ್ಕಾಗಿ ಭಾಗ್ಯ ತನ್ನ ಮನೆಯಲ್ಲಿ ಉಳಿಬೇಕು ಅಂತಾ ಮಾತ್ರ ಯೋಚಿಸುತ್ತಾಳೆ.. ಅದಕ್ಕಾಗೇ ಭಾಗ್ಯಗೆ ತಾಂಡವ್ ಸತ್ಯ ಗೊತ್ತಾಗ್ಬಾರ್ದು ಅಂತಾ ಇಷ್ಟೆಲ್ಲಾ ಪ್ರಯತ್ನ ಪಟ್ಟಿದ್ಲು.. ಭಾಗ್ಯಳನ್ನ ತನ್ನ ಹಿಡಿತದಲ್ಲಿ ಇಟ್ಕೊಳ್ಳುತ್ತಾ ಬಂದಿದ್ಲು.. ಆದ್ರೀಗ ಕುಸುಮಾ ಮಾಡಿದ ವ್ರತ ಫಲಿಸಲಿಲ್ಲ ಆಕೆಯ ಮುಖವಾಡ ರಿವೀಕ್ ಆಗಿದೆ. ಆಕೆಗೆ ತನ್ನ ಮಗ ಚೆನ್ನಾಗಿರಬೇಕು ಎನ್ನುವ ಸ್ವಾರ್ಥದ ಆಲೋಚನೆ ಮಾತ್ರ ಇದೆ ಅನ್ನೋದನ್ನ ಸುಂದ್ರಿ ಬಿಡಿಸಿಹೇಳಿದ್ದಾಳೆ. ಆಗ ಕುಸುಮಾ ಗಂಡ ಕೂಡ ಆಕೆಗೆ ಮನವರಿಗೆ ಮಾಡಿದ್ದಾರೆ.. ಒಟ್ಟಾರೆ ಭಾಗ್ಯಲಕ್ಷ್ಮೀ ಸೀರಿಯಲ್ ಟರ್ನ್ ಆಂಡ್ ಟ್ವಿಸ್ಟ್ ನಿಂದ ಕೂಡಿದೆ..