ಅಂಕಲ್ ತಾಂಡವ್ ಜೊತೆ ಶ್ರೇಷ್ಠ ರೋಮ್ಯಾನ್ಸ್.. ಸೊಂಟ ಮುರಿದುಕೊಂಡ ಭಾಗ್ಯ ಗಂಡ
ಉಳುಕಿದ ಸೊಂಟ ಸರಿಮಾಡ್ತಾಳಾ ಭಾಗ್ಯ?

ಅಂಕಲ್ ತಾಂಡವ್ ಜೊತೆ ಶ್ರೇಷ್ಠ ರೋಮ್ಯಾನ್ಸ್.. ಸೊಂಟ ಮುರಿದುಕೊಂಡ ಭಾಗ್ಯ ಗಂಡಉಳುಕಿದ ಸೊಂಟ ಸರಿಮಾಡ್ತಾಳಾ ಭಾಗ್ಯ?

ರಾಮ ಶ್ಯಾಮ ಭಾಮಾ ಸಿನಿಮಾದಲ್ಲಿ ಒಂದು ಸೀನ್ ಪ್ರೇಯಸಿಯನ್ನ ಎತ್ತಲು ಹೋಗಿ ಕಮಲ್ ಹಾಸನ್ ಸೊಂಟ ಉಳುಕುತ್ತೆ. ಇದೇ ಸೀನ್ ನೋಡಿ ಹಾಗೆ ಆಗಬೇಕು ಎಂದಿದ್ದು ವೀಕ್ಷಕರು. ಈಗ ಭಾಗ್ಯ ಲಕ್ಷ್ಮೀ ಸೀರಿಯಲ್‌ನಲ್ಲೂ ಇಂಥದ್ದೇ ಕಥೆಯ ಟಚ್ ನೀಡಲಾಗಿದೆ. ಇದೀಗ ಭಾಗ್ಯ ಲಕ್ಷ್ಮೀ ಸೀರಿಯಲ್‌ ವೀಕ್ಷಕರು ತಾಂಡವ್ ಸ್ಥಿತಿ ನೋಡಿ ನೋಡಿ ಖುಷಿ ಪಡ್ತಿದ್ದಾರೆ. ನಿಂಗಿದು ಬೇಕಿತ್ತಾ ಮಗನೆ, ವಾಪಸ್ ಹೊಂಟೋಗು ಶಿವನೇ ಅಂತಾ ಟ್ರೋಲ್ ಮಾಡ್ತಿದ್ದಾರೆ. ಅಷ್ಟಕ್ಕೂ ತಾಂಡವ್ ಈ ಸಿಚುಯೇಶನ್ ಹೇಗೆ ಫೇಸ್ ಮಾಡ್ತಾನೆ. ಭಾಗ್ಯನೇ ತಾಂಡವ್‌ಗೆ ಟ್ರೀಟ್ ಮೆಂಟ್ ಹೇಗೆ ಕೊಡಿಸ್ತಾಳೆ. ಅಂಕಲ್ ತಾಂಡವ್ ಜೊತೆ ಶ್ರೇಷ್ಠಾ ತಗ್ಲಾಕ್ಕೊಳ್ಳೋದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮೂಳೆಗೆ ಅಂಟಿಕೊಂಡ ಚರ್ಮ! – ಬಾಹ್ಯಾಕಾಶದಲ್ಲಿ ಬಾಡಿದ ಸುನೀತಾ

ಅಂಕಲ್‌ಗೆ ಲವ್ ಶುರುವಾಗಿದ್ದು ಓಕೆ. ಆದ್ರೆ, ಯಂಗ್ ಲೇಡಿ ಶ್ರೇಷ್ಠಾಗೆ ಅಂಕಲ್ ಜೊತೆ ರೋಮ್ಯಾನ್ಸ್ ಮಾಡೋ ಬುದ್ದಿ ಯಾಕ್ ಬಂತೋ. ಇದೀಗ ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ ಭಾಗ್ಯಗೆ ಶ್ರೇಷ್ಠಾಳಿಂದ ನ್ಯಾಯ ಸಿಗುತ್ತೋ ಇಲ್ವೋ.. ಆದ್ರೆ, ತಾಂಡವ್‌ಗೆ ಮಾತ್ರ ಪದೇ ಪದೇ ಅವಮಾನವಂತೂ ಆಗ್ತಾನೇ ಇರುತ್ತೆ. ಇದೀಗ ಶ್ರೇಷ್ಠಾ ತಾಂಡವ್ ಕಪಲ್ ಟ್ರಿಪ್ ಕಥೆಗೆ ಬರೋಣ. ಶ್ರೇಷ್ಠಾಗೆ ತಾಂಡವ್ ಜೊತೆ ಡಿಂಗ್ ಡಾಂಗ್ ಮಾಡೋ ಆಸೆ. ತಾಂಡವ್‌ಗೂ ಶ್ರೇಷ್ಠಾ ಜೊತೆ ರೋಮ್ಯಾಂಟಿಕ್ ಟೈಮ್ ಸ್ಪೆಂಡ್ ಮಾಡೋ ದುರಾಸೆ. ಇದೇ ದುರಾಸೆಗೆ ಈಗ ತಾಂಡವ್ ಸೊಂಟವೇ ಬಿದ್ದು ಹೋಗಿದೆ. ಹೌದು. ಶ್ರೇಷ್ಠಾ ಭಾರಕ್ಕೆ ತಾಂಡವ್ ಸೊಂಟ ಉಳುಕಿಸಿಕೊಂಡಿದ್ದಾನೆ.

ಕಪಲ್ ಟ್ರಿಪ್ ಗೆ ಬಂದ ಶ್ರೇಷ್ಠಾ ಬೇರೆ ಬೇರೆ ಜೋಡಿಗಳನ್ನ ನೋಡಿ ತಾಂಡವ್ ಕೂಡಾ ನನ್ನ ಜೊತೆ ಹಾಗೆ ಇರ್ಬೇಕು ಅಂತಾ ಹೇಳ್ತಾಳೆ. ಪಾಪ. ತಾಂಡವ್. ಯಂಗ್ ಲೇಡಿ ಪಕ್ಕದಲ್ಲಿ ಇದ್ರೆ ಬಿಲ್ಡಪ್ ಕೊಡದೇ ಇರ್ತಾನಾ. ಶ್ರೇಷ್ಠಾಳನ್ನು ಎತ್ತಲು ಹೋಗುತ್ತಾನೆ. ಆದರೆ ಅವಳ ಭಾರಕ್ಕೆ ತಾಂಡವ್ ಸೊಂಟವೇ ಉಳುಕುತ್ತೆ. ಶ್ರೇಷ್ಠಾ ಕೂಡಾ ದೊಪ್….ಅಂತಾ  ಕೆಳಗೆ ಬೀಳುತ್ತಾಳೆ. ಅವರಿಬ್ಬರನ್ನೂ ನೋಡಿ ಸಹನಾ ನಗುತ್ತಾಳೆ. ಈ ಅಂಕಲ್‌ ಆಂಟಿಗೆ ಇದೆಲ್ಲಾ ಬೇಕಿತ್ತಾ ಎಂದುಕೊಳ್ಳುತ್ತಾಳೆ. ಕೊನೆಗೆ ಅವಳೇ ಬಂದು ಶ್ರೇಷ್ಠಾಳನ್ನು ಮೇಲೆ ಎತ್ತುತ್ತಾಳೆ. ಮೇಡಂ ದಯವಿಟ್ಟು ನನಗೆ ಸಹಾಯ ಮಾಡಿ, ಸೊಂಟ ನೋವಿಗೆ ಏನಾದರೂ ಟ್ರೀಟ್‌ಮೆಂಟ್‌ ಬೇಕಿತ್ತು ಎಂದು ತಾಂಡವ್‌ ಮನವಿ ಮಾಡುತ್ತಾನೆ. ಈ ವಿಚಾರವನ್ನು ಸಹನಾ ಭಾಗ್ಯಾ ಬಳಿ ಬಂದು ಹೇಳುತ್ತಾಳೆ. ಹೋಟೆಲ್‌ಗೆ ಬಂದಿರುವ ಆ ಅತಿಥಿಗಳು ಯಾರು? ಸಹನಾ ಯಾರ ಬಗ್ಗೆ ಹೇಳುತ್ತಿದ್ದಾಳೆ ಎಂದು ಅರಿಯದ ಭಾಗ್ಯಾ ಅವರಿಗಾಗಿ ಬಿಸಿ ನೀರು, ಉಪ್ಪು ತಯಾರಿ ಮಾಡಿಕೊಡುತ್ತಾಳೆ. ಸಹನಾ, ಉಪ್ಪು ಬಿಸಿನೀರು ಹಿಡಿದು ಶ್ರೇಷ್ಠಾ-ತಾಂಡವ್‌ ಉಳಿದುಕೊಂಡ ರೂಮ್‌ಗೆ ಬರುತ್ತಾಳೆ. ಉಪ್ಪು ಬಿಸಿ ನೀರು ನೋಡಿ ತಾಂಡವ್‌ ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ನನ್ನ ಅಮ್ಮ ಕೂಡಾ ನನಗೆ ಇದೇ ಚಿಕಿತ್ಸೆ ಕೊಡುತ್ತಿದ್ದರು. ಆಗ ನನಗೆ ಬೇಗ ಗುಣಮುಖವಾಗುತ್ತಿತ್ತು ಎನ್ನುತ್ತಾನೆ. ನೀವು ಥ್ಯಾಂಕ್ಸ್‌ ಹೇಳಬೇಕಾಗಿದ್ದು ನನಗಲ್ಲ, ನಮ್ಮ ಬಾಸ್‌ಗೆ ಎಂದು ಸಹನಾ ಹೇಳುತ್ತಾಳೆ.

ಶ್ರೇಷ್ಠಾ, ತಾಂಡವ್‌ಗೆ ಉಪ್ಪು ಬಿಸಿನೀರಿನಿಂದ ಶಾಖ ಕೊಡುತ್ತಾಳೆ. ಇದರಿಂದ ತಾಂಡವ್‌ ರಿಲೀಫ್‌ ಆಗುತ್ತಾನೆ. ಅದನ್ನು ಹೆಂಡತಿ ಭಾಗ್ಯಾ ಕಳಿಸಿದ್ದು ಅನ್ನೋದು ಗೊತ್ತಿಲ್ಲದೆ, ಯಾರೋ ಆ ಪುಣ್ಯಾತ್ಮರು ಅವರಿಂದ ನನಗೆ ನೋವು ಕಡಿಮೆ ಆಯ್ತು ಎನ್ನುತ್ತಾನೆ. ಲ್ಯಾಪ್‌ಟಾಪ್‌ ತೆಗೆದುಕೊಂಡು ಆಫೀಸ್‌ ಮೀಟಿಂಗ್‌ಗೆ ಹೊರಡುವ ತಾಂಡವ್‌ನನ್ನು ಶ್ರೇಷ್ಠಾ ತಡೆಯುತ್ತಾಳೆ. ಆಫೀಸ್‌ ಕೆಲಸ ಬಿಟ್ಟು ನೀನು ನನ್ನ ಜೊತೆ ಸಮಯ ಕಳೆಯಬೇಕು ಎಂದು ಶ್ರೇಷ್ಠಾ ತಾಕೀತು ಮಾಡುತ್ತಾಳೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗುತ್ತದೆ. ಆದ್ರೂ ದಡ್ಡ ತಾಂಡವ್ ಗೆ ಭಾಗ್ಯ ಪ್ರೀತಿಯ ಬೆಲೆ ಗೊತ್ತಾಗೋದೇ ಇಲ್ಲ. ಜಗಳ ಗಂಟಿ ಶ್ರೇಷ್ಠಾಳೇ ಇಷ್ಟವಾಗ್ತಾಳೆ. ಅದೇನೇ ಇರಲಿ, ಸೊಂಟದ ವಿಷ್ಯಾ ಬ್ಯಾಡವೋ ಶಿಷ್ಯಾ ಅಂತಾ ತಾಂಡವ್ ನ ಸೊಂಟದ ಬಗ್ಗೆ ನಾನಾ ಕಾಮೆಂಟ್ಸ್ ಅಂತೂ ಬರ್ತಿದೆ. ಇದನ್ನ ನೋಡಿ ಭಾಗ್ಯ ಫ್ಯಾನ್ಸ್ ಖುಷಿ ಪಡ್ತಿದ್ದಾರೆ.

Shwetha M

Leave a Reply

Your email address will not be published. Required fields are marked *