ಭಾಗ್ಯಗೆ ಕೈ ಕೊಟ್ಟ ಕುಸುಮಾ! – ಶ್ರೇಷ್ಠಾ ಮೇಲೆ ತಾಂಡವ್‌ಗೆ ಪ್ರೀತಿಯಿಲ್ವಾ? 
ದೃಷ್ಟಿಯಿಂದ ಭಾಗ್ಯ ಅದೃಷ್ಟ ಬದಲು!

ಭಾಗ್ಯಗೆ ಕೈ ಕೊಟ್ಟ ಕುಸುಮಾ! – ಶ್ರೇಷ್ಠಾ ಮೇಲೆ ತಾಂಡವ್‌ಗೆ ಪ್ರೀತಿಯಿಲ್ವಾ? ದೃಷ್ಟಿಯಿಂದ ಭಾಗ್ಯ ಅದೃಷ್ಟ ಬದಲು!

ತಾಂಡವ್‌ ನಿಂದಾಗಿ ಭಾಗ್ಯಗೆ ಸಂಕಷ್ಟ ತಪ್ಪಿದ್ದಲ್ಲ.. ಭಾಗ್ಯ ರಿವೇಂಜ್‌ ತೀರಿಸಿಕೊಳ್ಬೇಕು ಅಂತಾ ಮನೆ ಸಾಲ ಕಟ್ಟದೇ ಆಟ ಆಡಿಸ್ತಿದ್ದಾನೆ. ಇದೀಗ ಭಾಗ್ಯ, ಹೇಗಾದ್ರೂ ಮಾಡಿ ಮನೆ ಸಾಲ ತೀರಿಸ್ಬೇಕು.. ಮನೆನ ಉಳಿಸಿಕೊಳ್ಬೇಕು ಅಂತಾ ಒಡವೆ ಅಡವಿಡ್ಬೇಕು ಅಂದ್ಕೊಂಡ್ಲು.. ಆದ್ರೆ ಶ್ರೇಷ್ಠಾ ತಾಂಡವ್‌ ಅದಕ್ಕೂ ಕಲ್ಲು ಹಾಕಿದ್ರು. ಇದೀಗ ಭಾಗ್ಯಗೆ ಕೆಲಸ ಮಾಡೋ ಅನಿವಾರ್ಯ.. ದುಡ್ಡಿಗಾಗಿ ಅತ್ತೆಯನ್ನ ನಂಬಿ ಅಡುಗೆ ಕೆಲಸ ಒಪ್ಪಿಕೊಂಡಿದ್ದಾಳೆ.. ಆದ್ರೆ ಕುಸುಮಾ ಭಾಗ್ಯಗೆ ಅರ್ಧದಲ್ಲೇ ಕೈಕೊಟ್ಟು ಹೋಗಿದ್ದಾಳೆ. ಮತ್ತೊಂದ್ಕಡೆ ತಾಂಡವ್‌ ಗೆ ಶ್ರೇಷ್ಠಾ ಮೇಲೆ ಪ್ರೀತಿ ಇಲ್ವಾ ಅನ್ನೋ ಅನುಮಾನ ವೀಕ್ಷಕರನ್ನ ಕಾಡ್ತಿದೆ. ಹಾಗಾದ್ರೆ ತಾಂಡವ್‌ ಗೆ ಶ್ರೇಷ್ಠಾ ಮೇಲೆ ಲವ್‌  ಇಲ್ವಾ? ಭಾಗ್ಯ ಸಾಲ ತೀರಿಸ್ತಾಳಾ? ಕುಸುಮಾ ಅರ್ಧದಲ್ಲೇ ಕೈಕೊಟ್ಟಿದ್ದು ಯಾಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪಾಕ್‌ನಲ್ಲಿ ಉ*ಗ್ರರ ಅಟ್ಟಹಾಸ! ಸ್ಫೋಟಕ ತುಂಬಿದ ಕಾರಿನಿಂದ ಬ್ಲಾಸ್ಟ್!!

ತಾಂಡವ್‌ ಗೆ ಭಾಗ್ಯಾಳನ್ನು ಕಂಡರೆ ಆಗಲ್ಲ.. ಶತ ದಡ್ಡಿಯನ್ನ ಕುಸುಮಾ ತನ್ನ ತಲೆಗೆ ಕಟ್ಟಿದ್ದಾಳೆ ಅನ್ನೋದು ತಾಂಡವ್‌ ವಾದ.. ಹೀಗಾಗಿ ಭಾಗ್ಯಗೆ ಬಾಯಿಗೆ ಬಂದಂತೆ ಬೈತಾನೆ.. ಆಕೆಗೆ ಎಷ್ಟು ಕಾಟ ಕೊಡೋದಿಕ್ಕೆ ಆಗುತ್ತೋ ಅಷ್ಟು ಕಾಟ ಕೊಡ್ತಾನೆ.. ತಾಂಡವ್‌ ಶ್ರೇಷ್ಠಾಳನ್ನ ಮದುವೆ ಆಗ್ತಿದ್ದಂತೆ ಭಾಗ್ಯ ತಾಳಿ ಕಿತ್ತುಕೊಟ್ಟಿದ್ದಾಳೆ. ತಾಳಿ ಬಿಚ್ಚಿ ಕೊಡುವಷ್ಟು ಧೈರ್ಯ ಭಾಗ್ಯಗೆ ಹೇಗೆ ಬಂತು ಅಂತಾ ತಾಂಡವ್‌ ಗೆ ಶಾಕ್‌ ಆಗ್ತಿದೆ.  ಹೇಗಾದ್ರೂ ಮಾಡಿ ಆಕೆಯನ್ನ ಸೋಲಿಸ್ಬೇಕು ಅಂತಾ ತಾಂಡವ್‌ ಪ್ರಯತ್ನಿಸ್ತಿದ್ದಾನೆ. ಭಾಗ್ಯಗೆ ಪಾಠ ಕಲಿಸ್ಬೇಕು ಅಂತಾ ತಾಂಡವ್‌ ಕಳೆದ ಐದು ತಿಂಗಳಿನಿಂದ  ಮನೆ ಸಾಲ ಕಟ್ಟಿಲ್ಲ.. ಸಾಲ ಕಟ್ಟಿಲ್ಲ ಅಂದ್ರೆ ಮನೆ ಸೀಸ್‌ ಮಾಡ್ತಾರೆ. ಭಾಗ್ಯಗೆ ಹಣದ ಅವಶ್ಯಕತೆ ಇದೆ. ಹೀಗಾಗಿ ದೇವಸ್ಥಾನವೊಂದರಲ್ಲಿ ಭಾಗ್ಯ ಅಡುಗೆ ಕೆಲಸಕ್ಕೆ ಒಪ್ಪಿಕೊಂಡಿದ್ದಾಳೆ. ಅತ್ತೆಯನ್ನ ನಂಬಿ ಕೆಲಸ ಬೇರೆ ಶುರು ಮಾಡ್ಕೊಂಡಿದ್ದಾಳೆ. ಆದ್ರೀಗ ಕುಸುಮಾ ಅರ್ಧಕ್ಕೆ ಕೈಕೊಟ್ಟು ಹೋಗಿದ್ದಾಳೆ.

ಹೌದು, ಭಾಗ್ಯ ಕಾಲ್‌ ಮಾಡ್ತಿದ್ದಂತೆ ಕುಸುಮಾ ಪೂಜಾಳನ್ನ ಕರ್ಕೊಂಡು ಬಂದಿದ್ಲು.. ಅತ್ತೆ ಸೊಸೆ ಅಡುಗೆ ಮಾಡಲು ಶುರುಮಾಡಿದ್ರು.. ನೀರು ಬಿಸಿಯಾಗ್ತಿದ್ದಂತೆ ಅದನ್ನ ಒಲೆ ಮೇಲಿಂದ ಕುಸುಮಾ ಇಳಿಸುತ್ತಿದ್ದಂತೆ ಬಿಸಿನೀರು ಆಕೆಯ ಕಾಲಿನ ಮೇಲೆ ಬಿದ್ದಿದೆ. ಇದ್ರಿಂದಾಗಿ ಆಕೆಗೆ ಕೆಲಸ ಮಾಡಲು ಆಗಿಲ್ಲ.. ಇನ್ನು ಪೂಜಾ ಕೂಡ ಕುಸುಮಾ ಜೊತೆ ಹೋಗಿದ್ದಾಳೆ. ಭಾಗ್ಯ ಒಬ್ಬಳೇ ಅಡುಗೆ ಮಾಡೋ ಸನ್ನಿವೇಶ ಎದುರಾಗಿತ್ತು. ಇದೀಗ ಭಾಗ್ಯಳ ಸಹಾಯಕ್ಕೆ ದೃಷ್ಠಿ, ರಾಮಾಚಾರಿ ತಾಯಿ, ವಧು, ಸುಪ್ರಿತಾ ಬಂದಿದ್ದಾರೆ. ಭಾಗ್ಯ ಸೋಲೋ ಮಾತೇ ಇಲ್ಲ ಅಂತಾ ಹೇಳಿದ್ದಾರೆ. ಈಗ ಇವ್ರ ಸಹಾಯದಿಂದ ಭಾಗ್ಯ ಅಡುಗೆ ಕೆಲಸ ಮುಗಿಸ್ತಾಳೆ.. ಸಾಲನೂ ತೀರಿಸೋದಿಕ್ಕೆ ಆಗುತ್ತೆ. ಆದ್ರೆ ತಾಂಡವ್‌ ಮಾತ್ರ ಭಾಗ್ಯ ಮನೆಗೆ ಬೇಗನೇ ಬಂದಿದ್ದಾನೆ. ಮನೆ ಉಳಿಸೋದಿಕ್ಕಿಂತ ಮನೆಯವರು ಬೀದಿಗೆ ಬೀಳೋದನ್ನ ನೋಡೋದಿಕ್ಕೆ ಕಾಯ್ತಾ ಇದ್ದಾನೆ..

ಆದ್ರೀಗ ತಾಂಡವ್‌ ವರ್ತನೆ ನೋಡ್ತಿದ್ರೆ ಆತ ಶ್ರೇಷ್ಠಾಳನ್ನ ಮದುವೆ ಆಗಿರೋದು ಭಾಗ್ಯ ಮೇಲಿನ ಸೇಡಿನಿಂದ ಅಂತಾ ಹೊತ್ತಾಗುತ್ತೆ. ಹೌದು, ತಾಂಡವ್‌ಗೆ ಶ್ರೇಷ್ಠಾ ಮೇಲೆ ಪ್ರೀತಿ ಇದೋ ಇಲ್ವೋ ಗೊತ್ತಿಲ್ಲ. ಭಾಗ್ಯಳನ್ನ ಸೋಲಿಸ್ಬೇಕು.. ಆಕೆ ಕಷ್ಟಪಡ್ಬೇಕು ಅಂತಾ ಹೀಗೆಲ್ಲಾ ಮಾಡಿದ್ದಾನೆ.. ಆದ್ರೆ ಈ ಸತ್ಯಾಂಶ ಶ್ರೇಷ್ಠಾಗೆ ಗೊತ್ತಾಗ್ತಾನೇ ಇಲ್ಲ. ಭಾಗ್ಯ ಕಾನ್ಫಿಡೆನ್ಸ್‌ ನೋಡಿ ತಾಂಡವ್‌ ಶಾಕ್‌ ಆಗಿದ್ದಾನೆ. ಅದಕ್ಕಾಗೇ ತನಗೆ ಬೇಕಾಗಿರೋದು ಆಗದೇ ಇದ್ದಾಗ ತಾಂಡವ್, ಶ್ರೇಷ್ಠಾಳನ್ನು ದೂರ ತಳ್ಳಿ ಹೋಗಿದ್ದ.. ಆದರೂ ಮೊಂಡು ಹಠ ತಾಂಡವ್‌ದು. ಜವಾಬ್ದಾರಿಯುತ ಹೆಂಡತಿ ಬಿಟ್ಟು ಶೋಕಿ ಮಾಡೋ ಶ್ರೇಷ್ಠಾ ಹಿಂದೆ ಹೋಗಿದ್ದಾನೆ.. ಆದ್ರೆ ಶ್ರೇಷ್ಠಾ ಸಹವಾಸ ಮಾಡಿರೋ ತಾಂಡವ್ ಮುಂದೆ ಕಷ್ಟದ ಸರಮಾಲೆಯಲ್ಲಿ ಸಿಕಾಕೋಳೋದು ಫಿಕ್ಸ್‌.. ಭಾಗ್ಯ ಯಾವತ್ತಿಗೂ ಸ್ಟ್ರಾಂಗ್..‌ ಏನೇ ಕಷ್ಟ ಬಂದ್ರೂ ಫೇಸ್‌ ಮಾಡೋ ಶಕ್ತಿಆಕೆಗಿದೆ.. ಆದ್ರೆ ತಾಂಡವ್‌ ಗೆ ಇದೆಲ್ಲ ಗೊತ್ತಿಲ್ಲ.. ಶ್ರೇಷ್ಠಾ ನಂಬಿ ಹೋದ ತಾಂಡವ್‌ ಗೆ ಮುಂದೆ ಭಾಗ್ಯಳೇ ಗತಿ  ಅಂತಾ ವೀಕ್ಷಕರು ಹೇಳ್ತಿದ್ದಾರೆ.

Shwetha M

Leave a Reply

Your email address will not be published. Required fields are marked *