ತಾಂಡವ್ ಗೆ ಭಾಗ್ಯ ಚಿಂತೆ.. ಶ್ರೇಷ್ಠಾ ಸಹವಾಸ ಬೇಡವಾಯ್ತಾ?
ಭಾಗ್ಯ ಹಿಂದೆ ಬಿದ್ದಿದ್ದು ಇದಕ್ಕಾ?

ಶೇಷ್ಠಾಳನ್ನ ಮದುವೆ ಆಗಿದ್ದು ಆಯ್ತು.. ಭಾಗ್ಯ ತಾಳಿ ಕಿತ್ತು ಕೊಟ್ಟಿದ್ದು ಆಯ್ತು.. ಆದ್ರೂ ತಾಂಡವ್ ಗೆ ಭಾಗ್ಯಳದ್ದೇ ಚಿಂತೆ. ಈಗ ತಾಂಡವ್ ಭಾಗ್ಯಗೆ ಪದೇ ಪದೇ ಫೋನ್ ಮಾಡ್ತಾನೆ.. ಅವ್ಳು ಏನ್ ಮಾಡ್ತಿದ್ದಾಳೆ ಅನ್ನೋದು ಆತನಿಗೆ ಕಾಡ್ತಿದೆ. ಇದೀಗ ತಾಂಡವ್ ವರ್ತನೆ ಶ್ರೇಷ್ಠಾಗೆ ಸಿಟ್ಟು ತರಿಸಿದೆ. ಅಷ್ಟಕ್ಕೂ ತಾಂಡವ್ ಭಾಗ್ಯ ಜಪ ಮಾಡ್ತಿರೋದೇಕೆ? ಆತನಿಗೆ ಶ್ರೇಷ್ಠಾ ಸಹವಾಸ ಸಾಕಾಯ್ತಾ? ಸೀರಿಯಲ್ ಸ್ಟೋರಿ ಮುಂದೇನಾಗುತ್ತೆ? ಈ ಡಿಟೇಲ್ಸ್ ಇಲ್ಲಿದೆ.
ಇದನ್ನೂ ಓದಿ: ನ್ಯೂಝಿಲೆಂಡ್ ವಿರುದ್ಧ ಭಾರತ ಜಯ- 25 ವರ್ಷದ ಹಳೆಯ ಲೆಕ್ಕ ಚುಕ್ತಾ
ಭಾಗ್ಯಲಕ್ಷ್ಮೀ ಸಿರಿಯಲ್ ಈಗ ರೋಚಕ ತಿರುವು ಪಡೆದುಕೊಂಡಿದೆ. ಭಾಗ್ಯಳನ್ನ ತಾಂಡವ್ ನಿಂದ ದೂರ ಮಾಡೋ ಶ್ರೇಷ್ಠಾ ಪ್ಲ್ಯಾನ್ ವರ್ಕೌಟ್ ಆಗಿದೆ. ಇದೀಗ ಶ್ರೇಷ್ಠಾ ತನ್ನ ಕನಸಿನಂತೆ ತಾಂಡವ್ ನ ಮದುವೆ ಆಗಿದ್ದಾಳೆ. ಅನೇಕ ಸಲ ಇವರಿಬ್ರು ಮದುವೆಯಾಗೋಕೆ ಮುಂದಾಗಿದ್ರು.. ಆದ್ರೆ ಮದುವೆ ಅರ್ಧದಲ್ಲೇ ನಿಂತುಹೋಗ್ತಿತ್ತು. ಈ ಬಾರಿಯೂ ಹಾಗೇ ಆಗುತ್ತೆ, ಭಾಗ್ಯ ಮದುವೆಯನ್ನ ತಡೆಯುತ್ತಾಳೆ. ಅವರ ಮುಂದೆ ಬಂದು ಅಂಗಲಾಚುತ್ತಾಳೆ ಅಂದ್ಕೊಂಡಿದ್ದ ವೀಕ್ಷಕರಿಗೆ ಭಾಗ್ಯಾ ಶಾಕ್ ನೀಡಿದ್ದಳು. ಏಕಾಏಕಿ ತಾಳಿ ಕಿತ್ತು ತಾಂಡವ್ ಕೈಗಿಟ್ಟು ಬಂದಿದ್ದಳು. ಇದು ಭಾಗ್ಯಾಗೆ ಬಿಡುಗಡೆ ಭಾಗ್ಯವಾದ್ರೆ ತಾಂಡವ್ ಗೆ ಸಹಿಸಲಾಗದ ಅವಮಾನ.
ಭಾಗ್ಯ ಕೂಡ ತನಗೆ ಈ ಸಂಬಂಧ ಬೇಡ ಅಂತ ಸಿಟ್ಟಿನಿಂದ ತಾಳಿಯನ್ನ ತಾಂಡವ್ ಕೈಗೆ ಕೊಡ್ತಿದ್ರೆ, ತಾಂಡವ್ ನ ಮದುವೆಯಾದ ಖುಷಿಯಲ್ಲಿ ಶ್ರೇಷ್ಠಾ ತೇಲಾಡ್ತಿದ್ದಾಳೆ. ಫಸ್ಟ್‌ನೈಟ್ ಗೆ ಎಲ್ಲಾ ತಯಾರಿಮಾಡಿಕೊಂಡಿದ್ದಾಳೆ. ಆದ್ರೆ ತಾಂಡವ್ ಮಾತ್ರ ಭಾಗ್ಯಾಳನ್ನು ಮರೀತಾನೇ ಇಲ್ಲ. ಪ್ರತಿ ಕ್ಷಣ ಭಾಗ್ಯ ಜಪ ಮಾಡ್ತಿದ್ದಾನೆ ತಾಂಡವ್. ಭಾಗ್ಯ ಕಾನ್ಫಿಡೆನ್ಸ್ ನೋಡಿ ಶಾಕ್ ಆಗಿದ್ದಾನೆ. ಅದ್ಹೇಗೆ ಭಾಗ್ಯ ತಾಳಿ ಬಿಚ್ಚಿ ಕೊಟ್ಲು.. ಅಷ್ಟು ಧೈರ್ಯ ಅವಳಿಗೆ ಹೇಗೆ ಬಂತು.. ಆಕೆಗೆ ಸರಿಯಾಗೇ ಬುದ್ದಿ ಕಲಿಸ್ಬೇಕು ಅನ್ನೋ ಯೋಚನೆಯಲ್ಲಿ ಮುಳುಗಿದ್ದಾನೆ. ಹೀಗಾಗಿ ಭಾಗ್ಯ ಹೋದಲ್ಲೆಲ್ಲಾ ಹೋಗಿ ತೊಂದರೆ ಕೊಡಲು ಶುರು ಮಾಡಿದ್ದಾನೆ. ಪದೇ ಪದೇ ಫೋನ್ ಮಾಡಿದ್ರೂ ಆಕೆ ಕಾಲ್ ರಿಸೀವ್ ಮಾಡ್ತಿಲ್ಲ.. ಇದ್ರಿಂದ ಆತನ ಸಿಟ್ಟು ಇನ್ನೂ ಜಾಸ್ತಿಯಾಗಿದೆ. ಇದೆಲ್ಲ ಗೊತ್ತಿಲ್ಲದ ಶ್ರೇಷ್ಠಾ ಚೆನ್ನಾಗಿ ರೆಡಿ ಆಗಿ, ಹಾಲು ಹಿಡ್ಕೊಂಡು ರೂಮ್ ಗೆ ಬಂದಿದ್ದಾಳೆ. ತಾಂಡವ್ ತನ್ನನ್ನು ಹೊಗಳ್ತಾನೆ, ತನ್ನನ್ನು ಮುದ್ದಾಡ್ತಾನೆ, ಕೊನೆಗೂ ಪ್ರೀತಿ ಮದುವೆಗೆ ತಿರುಗ್ತಲ್ಲ ಅಂತ ಖುಷಿಯಾಗ್ತಾನೆ ಅಂದ್ಕೊಂಡಿರ್ತಾಳೆ. ಆದ್ರೆ ಎಲ್ಲ ಉಲ್ಟಾ ಆಗಿದೆ. ಸುಂದರವಾಗಿ ಅಲಂಕರಿಸಿರೋ ಬೆಡ್ ರೂಮ್, ಹಾಲು ಹಿಡಿದು ಬಂದ ಶ್ರೇಷ್ಠಾ ಬಗ್ಗೆ ತಾಂಡವ್ ಗೆ ಕಿಂಚಿತ್ತೂ ಗಮನ ಇಲ್ಲ. ತಾಂಡವ್ ಸಂಪೂರ್ಣವಾಗಿ ಕಳೆದು ಹೋಗಿದ್ದಾನೆ. ನಿನಗೆ ಏಕೆ ಕಾಯಬೇಕು, ಆ ಭಾಗ್ಯಾ ಬಗ್ಗೆ ಆಲೋಚನೆ ಮಾಡ್ತಿದ್ದೆ ಅಂತ ಹೇಳಿದ್ದಾನೆ. ಭಾಗ್ಯಾ ಹೆಸರು ಹೇಳ್ತಿದ್ದಂತೆ ಶ್ರೇಷ್ಠಾ ಉಗ್ರ ರೂಪ ತಾಳಿದ್ದಾಳೆ. ಹಾಲಿನ ಲೋಟವನ್ನು ಬಿಸಾಕ್ತಾಳೆ. ಅಷ್ಟೇ ಅಲ್ಲ, ತಾಂಡವ್ ಮೇಲೆ ಕಿರುಚಾಡ್ತಾಳೆ. ಈಗ ನಮ್ಮಿಬ್ಬರ ಮದುವೆ ಆಗಿದೆ. ಈಗ್ಲೂ ಕ್ಷಣ ಕ್ಷಣಕ್ಕೂ ಭಾಗ್ಯಾ ಬಗ್ಗೆ ಆಲೋಚನೆ ಮಾಡೋದು ಏಕೆ. ಅವಳು ಮುಗಿದಿರೋ ಚಾಪ್ಟರ್ ಎನ್ನುತ್ತಿದ್ದಾಳೆ. ಶ್ರೇಷ್ಠಾಗೆ ಅದು ಮುಗಿದ ಚಾಪ್ಟರ್ ಆದ್ರೆ ತಾಂಡವ್ ಗೆ ಅಲ್ಲ. ಯಾಕಂದ್ರೆ ತಾಂಡವ್ ಗೆ ಭಾಗ್ಯ ಮೇಲೆ ದ್ವೇಷ ಇದೆ. ಆಕೆಯನ್ನ ಹೇಗಾದ್ರೂ ಮಾಡಿ ಸೋಲಿಸ್ಬೇಕು ಅಂತಾ ಪಣ ತೊಟ್ಟಿದ್ದಾನೆ. ಇದೀಗ ಒಂದ್ಕಡೆ ಬಿಟ್ಟು ಹೋದ ಹೆಂಡ್ತಿ, ಇನ್ನೊಂದು ಕಡೆ ಕಟ್ಕೊಂಡಿರೋ ಹೊಸ ಹೆಂಡ್ತಿ. ಇಬ್ಬರ ಮಧ್ಯೆ ತಾಂಡವ್ ಏನಾಗ್ತಾನೆ ಕಾದುನೋಡ್ಬೇಕು.
ಇತ್ತ ಭಾಗ್ಯಾ ಹೋರಾಟ ಶುರುವಾಗಿದೆ. ಐದು ತಿಂಗಳಿಂದ ಮನೆ ಇಎಂಐ ಕಟ್ಟಿಲ್ಲ ತಾಂಡವ್. ಅದ್ರ ಹೊಣೆ ಭಾಗ್ಯಾ ಮೇಲಿದೆ. ಭಾಗ್ಯಾ ಜೊತೆ ತಾಂಡವ್ ಅಪ್ಪ – ಅಮ್ಮ ಕೂಡ ತಮ್ಮ ಬಂಗಾರ ನೀಡಿ, ಸಾಲ ತೀರಿಸೋ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನೂ ಸೀರಿಯಲ್ ನೋಡಿದ ವೀಕ್ಷಕರು ನಾನಾ ಕಾಮೆಂಟ್ ಮಾಡ್ತಿದ್ದಾರೆ. ತಾಂಡವ್, ಶ್ರೇಷ್ಠಾಗೆ ಇದು ಬೇಕಿತ್ತಾ? ಆತುರದಲ್ಲಿ ಮದುವೆಯಾಗಿದ್ದೀರಿ, ಇನ್ಮುಂದೆ ಇಬ್ಬರಿಗೂ ಮಾರಿಹಬ್ಬ ಗ್ಯಾರಂಟಿ.. ಭಾಗ್ಯ ಯಾವಾಗ್ಲೂ ಸ್ಟ್ರಾಂಗ್.. ಆಕೆ ಮನೆ ಮೇಲಿನ ಸಾಲ ತೀರಿಸ್ತಾಳೆ. ಒಳ್ಳೆ ಕಡೆ ಕೆಲಸ ತಗೊಳ್ತಾಳೆ.. ಆಕೆಗೆ ಎಂತಹ ಕಷ್ಟ ಬಂದ್ರೂ ಎದುರಿಸುವ ಶಕ್ತಿ.. ಭಾಗ್ಯ ಏಳಿಗೆ ನೋಡಿ ತಾಂಡವ್ ಬಂದೇ ಬರ್ತಾನೆ ಅಂತಾ ವೀಕ್ಷಕರು ಕಾಮೆಂಟ್ ಮಾಡ್ತಿದ್ದಾರೆ.