ಶ್ರೇಷ್ಠಾ, ತಾಂಡವ್ ಮದುವೆ.. ತಾಳಿ ಕಿತ್ತೆಸೆದ ಭಾಗ್ಯ! – ಸುತ್ತಿ ಬಳಸಿ ಇದೇ ಕತೆನಾ?

ಆರಕ್ಕೆ ಎರ್ತಿಲ್ಲ.. ಮೂರಕ್ಕೆ ಇಳಿತಿಲ್ಲ ಅನ್ನೋ ತರ ಆಗಿದೆ ಭಾಗ್ಯಲಕ್ಷ್ಮೀ ಸಿರಿಯಲ್ ಕತೆ. ತಾಂಡವ್ ಮದುವೆ ಆದಾಗಿಂದ ಭಾಗ್ಯಗೆ ನೆಮ್ಮದಿಯೇ ಇಲ್ಲ ಅನ್ನೋತರ ಆಗಿದೆ. ತಾಂಡವ್ ಗೆ ಶ್ರೇಷ್ಠಾ ಬೆನ್ನು ಬಿಡದ ಬೇತಾಳ ಆಗಿದ್ದಾಳೆ. ಪ್ರೀತಿ ಪ್ರೀತಿ ಅಂತಾ ಹೇಳ್ಕೊಂಡು ಶ್ರೇಷ್ಠಾ ತಾಂಡವ್ ನ ಸೂತ್ರದ ಗೊಂಬೆ ಮಾಡ್ಕೊಂಡಿದ್ದಾಳೆ. ಇದೆಲ್ಲಾ ಗೊತ್ತಾಗಿ ತಾಂಡವ್ ಶ್ರೇಷ್ಠಾಳನ್ನ ಬಿಡ್ತಾನೆ.. ಭಾಗ್ಯ ಹಿಂದೆ ಬರ್ತಾನೆ ಅಂತಾ ವೀಕ್ಷಕರು ಅಂದ್ಕೊಂಡಿದ್ರು.. ಆದ್ರೀಗ ಸೀರಿಯಲ್ ಡೈರೆಕ್ಟರ್ ತಾಂಡವ್ ಶ್ರೇಷ್ಠಾ ಮದುವೆ ಮಾಡಿಸಿಬಿಟ್ಟಿದ್ದಾರೆ.. ಹಾಗಾದ್ರೆ ಶ್ರೇಷ್ಠಾ ತಾಂಡವ್ ಮದುವೆ ಆದ್ರೆ ಭಾಗ್ಯ ಕತೆ ಏನು? ಸೀರಿಯಲ್ ಮುಗಿದೇ ಬಿಡ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಆರ್‌ಸಿಬಿ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನ – ತವರಲ್ಲೇ ಮಂಧನಾ ಪಡೆಗೆ ವೀರೋಚಿತ ಸೋಲು
ಭಾಗ್ಯ ಹಾಗೂ ತಾಂಡವ್ ಮದುವೆಯಾಗಿ ಹದಿನೇಳು ವರ್ಷಗಳಾಗಿವೆ. ಭಾಗ್ಯ ಅಂದ್ರೆ ತಾಂಡವ್‌ಗೆ ಒಂಚೂರು ಇಷ್ಟವೇ ಇಲ್ಲ. ತಾಯಿ ಒತ್ತಾಯ ಮಾಡಿದಳು ಅಂತ ತಾಂಡವ್ ಈ ಮದುವೆ ಆಗಿದ್ದಾನೆ. ಮದುವೆ ಒತ್ತಾಯದ್‌ದೇ ಆಗಿದ್ರೂ ಇಬ್ರೂ ಮಕ್ಕಳು ಮಾಡ್ಕೊಂಡಿದ್ದಾನೆ.. ಆದ್ರೂ ನನ್ನ ಕನಸಿನ, ನನ್ನ ಇಷ್ಟದ ಪತ್ನಿ ಇವಳಲ್ಲ ಎಂದು ಅವನು ಶ್ರೇಷ್ಠಳನ್ನು ಮದುವೆ ಆಗಿದ್ದಾನೆ. ತನ್ನ ಗಂಡನನ್ನು ಕಾಪಾಡಿಕೊಳ್ಳಬೇಕು, ಉಳಿಸಿಕೊಳ್ಳಬೇಕು ಅಂತ ಭಾಗ್ಯ ಸಿಕ್ಕಾಪಟ್ಟೆ ಹರಸಾಹಸ ಪಡ್ತಿದ್ದಾಳೆ. ಆದರೆ ಪ್ರಯೋಜವೇ ಇಲ್ಲದಂತಾಗಿದೆ. ಇದೀಗ ತಾಂಡವ್ ಮನೆಯವರನ್ನ ತನ್ನ ಪರ ಮಾಡ್ಕೊಳ್ಬೇಕು.. ಭಾಗ್ಯನಾ ಮನೆಯವರಿಂದ ದೂರ ಮಾಡ್ಬೇಕು ಅಂತಾ ಪ್ಲ್ಯಾನ್ ಮಾಡಿದ್ದಾನೆ.. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತನ್ವಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದ. ಆದ್ರೆ ತನ್ವಿ ಮಾತ್ರ ಭಾಗ್ಯಳನ್ನೇ ಫಸ್ಟ್ ಚಾಯ್ಸ್ ಆಗಿ ಇಟ್ಕೊಂಡಿದ್ದಾಳೆ.. ಇದೀಗ ಈ ಪ್ಲ್ಯಾನ್ ಎಲ್ಲ ವರ್ಕ್ ಆಗಲ್ಲ ಅನ್ನೋದು ತಾಂಡವ್ ಗೆ ಗೊತ್ತಾಗಿದೆ.. ಇನ್ನುಮುಂದೆ ಬೇರೆಯೇ ಪ್ಲ್ಯಾನ್ ಮಾಡಿ ಮನೆಯವರನ್ನ ಒಲಿಸಿಕೊಳ್ತಾನೆ ಅಂತಾ ವೀಕ್ಷಕರು ಅಂದ್ಕೊಂಡಿದ್ರು.. ಆದ್ರೆ ಅಲ್ಲ ಆಗಿದ್ದೇ ಬೇರೆ.. ತಾಂಡವ್ ಶ್ರೇಷ್ಠಾಳನ್ನ ಮದುವೆ ಆಗಿದ್ರೆ, ಇಲ್ಲಿ ಭಾಗ್ಯ ತಾಳಿಯನ್ನೇ ಕಿತ್ತು ಬಿಸಾಕಿದ್ದಾಳೆ..
ತಾಂಡವ್ ಹಾಗೂ ಶ್ರೇಷ್ಠಾ ಅನೇಕ ಬಾರಿ ಮದುವೆ ಆಗ್ಬೇಕು ಅಂತಾ ಪ್ಲ್ಯಾನ್ ಮಾಡಿದ್ರು.. ಒಂದು ಸಲವಂತೂ ತಾಂಡವ್ ಇನ್ನೇನು ತಾಳಿ ಕಟ್ಬೇಕು ಅಂದ್ಕೊಳ್ತಿರುವಾಗ್ಲೇ ಮದುವೆ ನಿಂತು ಹೋಗಿತ್ತು. ಕುಸುಮಾ ಪೂಜಾ ಬಂದು ಮದುವೆ ನಿಲ್ಲಿಸಿದ್ರು.. ವಿಷ್ಯಾ ಗೊತ್ತಾದ ಭಾಗ್ಯ ಗಂಡ ಬದಲಾಗ್ತಾನೆ.. ಮಕ್ಕಳಿಗೋಸ್ಕರನಾದ್ರೂ ತನ್ನ ಜೊತೆ ಇರ್ತಾನೆ ಅಂತಾ ಕಾದ್ಲು.. ಆದ್ರೆ ಏನೂ ಪ್ರಯೋಜನ ಆಗಿಲ್ಲ.. ಆದ್ರೀಗ ತಾಂಡವ್ ಶ್ರೇಷ್ಠಾಳನ್ನ ಮದುವೆ ಆಗೇ ಬಿಟ್ಟಿದ್ದಾನೆ.. ಇತ್ತ ಭಾಗ್ಯ ತನಗೆ ಈ ತಾಳಿ ಬೇಡ ಅಂತಾ ಎಸೆದಿದ್ದಾಳೆ. ಇದ್ರ ಪೋಮೋ ರಿಲೀಸ್ ಆಗಿದೆ.
ಹೆಣ್ಣು ಮುತ್ತೈದೆ ಆಗ್ಬೇಕು ಅಂದ್ರೆ ಗಂಡ ಅವಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು. ಇವ್ರು ಯಾವತ್ತು ನನ್ನನ್ನ ಒಪ್ಪಿಕೊಳ್ಳಲೇ ಇಲ್ಲ. ಕಟ್ಟಿರೋ ತಾಳಿಗೆ ಗಂಡನೇ ಬೆಲೆ ಕೊಡಲ್ಲ ಅಂದ್ರೆ ಈ ತಾಳಿ ನನಗೆ ಭಾರವಾಗುತ್ತಿದೆ.. ನನಗೆ ಈ ತಾಳಿ ಬೇಡ. ಇದು ನನಗೆ ಬೇಡ ಎಂದು ಭಾಗ್ಯ ಕೊರಳಲ್ಲಿದ್ದ ತಾಳಿ ತೆಗೆದು ಎಸೆದಿದ್ದಾಳೆ.. ಈ ಮೂಲಕ ಗಂಡನ ದ್ರೋಹಕ್ಕೆ ಭಾಗ್ಯ ಸ್ವಾಭಿಮಾನದ ಉತ್ತರ ಕೊಟ್ಟಿದ್ದಾಳೆ.
ಇದೀಗ ಪ್ರೋಮೋ ನೋಡಿದ ಸೀರಿಯಲ್ ಫ್ಯಾನ್ಸ್ ನಾನಾ ಕಾಮೆಂಟ್ಸ್ ಮಾಡ್ತಿದ್ದಾರೆ.. ಇದು ನಿಜವಾಗಲೂ ಅದ್ರೆ ನಾವು ಮತ್ತೆ ಭಾಗ್ಯಲಕ್ಷ್ಮಿ ಧಾರಾವಾಹಿಯನ್ನು ನೋಡ್ತಿವಿ. ಶ್ರೇಷ್ಠಾಳನ್ನ ಮದುವೆಯಾದ ತಾಂಡವ್ ಗೆ ಒಂದೊಂದೇ ಸಂಕಷ್ಟ ಶುರುವಾಗುತ್ತೆ.. ಇನ್ನು ಮುಂದೆ ತಾಂಡವ್‌ಗೆ ಶನಿದೇಶೆ ಶುರುವಾಯಿತು. ತಾಂಡವ್ ಬೀದಿಗೆ ಬರುವುದು ಗ್ಯಾರಂಟಿ ಅಂತಾ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದೆ ತರ ಎಷ್ಟೋ ಹೆಣ್ಣುಮಕ್ಕಳ ಜೀವನ ಹಾಳಾಗ್ತಿದೆ.. ಭಾಗ್ಯ ನಿರ್ಧಾರ ಸರಿ ಇದೆ.. ಹೆಂಡತಿ ಬೇಡ ಅಂದ್ಮೇಲೆ ಗಂಡ ಕಟ್ಟಿರೋ ತಾಳಿಗೆ ಬೆಲೆ ಇಲ್ಲ.. ಒಳ್ಳೆ ನಿರ್ಧಾರ ಭಾಗ್ಯ.. ಇಂಥ ಗಂಡನ ಜೊತೆ ಬಾಳೋದಕ್ಕಿಂತ, ನಮ್ಮ ಜೀವನ ನಾವು ನೋಡ್ಕೊಳ್ಳೋದೇ ವಾಸಿ.. ಅಂದಿದ್ದಾರೆ.. ಮತ್ತೆ ಕೆಲವರು ಭಾಗ್ಯ ಅವತ್ತು ತಾಳಿ ಮಹತ್ವದ ಬಗ್ಗೆ ಅಷ್ಟು ಉದ್ದ ಉಪನ್ಯಾಸ ಕೊಟ್ಟಿದ್ಲು.. ಈಗ ನೋಡಿದ್ರೆ ತಾಳಿ ಬೇಡ ಅಂತಾ ಕಿತ್ತು ಬಿಸಾಕಿದ್ದಾಳೆ.. ಇದ್ರಿಂದ ಸಮಾಜಕ್ಕೆ ಹೇಳೋ ಪಾಠ ಆದ್ರೂ ಏನು ಅಂತಾ ಪ್ರಶ್ನೆ ಮಾಡಿದ್ದಾರೆ.
ಒಟ್ನಲ್ಲಿ ತಾಂಡವ್, ಶ್ರೇಷ್ಠ ಮದುವೆ ನಡೆದಾಯ್ತು. ಭಾಗ್ಯ ತಾಳಿ ಕಿತ್ತು ಎಸೆದಿದ್ದಾಯ್ತು.. ಭಾಗ್ಯ ಮುಂದೇನು ಮಾಡ್ತಾಳೆ.. ಆಕೆ ಹೊಸ ಜೀವನ ಕಟ್ಟಿಕೊಳ್ತಾಳಾ ಅಥವಾ ಅತ್ತೆ ಅತ್ತೆ ಅಂತಾ ಕುಸುಮಾ ಹಿಂದೆನೇ ಸುತ್ತಾತಾ ಇರ್ತಾಳಾ? ಶ್ರೇಷ್ಠಾಳನ್ನ ಮದುವೆಯಾದ ತಾಂಡವ್ ಬೀದಿಗೆ ಬೀಳ್ತಾನಾ ಅಂತಾ ಕಾದುನೋಡ್ಬೇಕು.