‌ಕುಸುಮಾ ಹಠ ಭಾಗ್ಯಗೆ ಸಂಕಟ – ಹೆಂಡ್ತಿ ಮೇಲೆ ತಾಂಡವ್‌ ಗೆ LOVE
ಭಾಗ್ಯಲಕ್ಷ್ಮೀ ಕತೆ ಚೇಂಜ್‌

‌ಕುಸುಮಾ ಹಠ ಭಾಗ್ಯಗೆ ಸಂಕಟ – ಹೆಂಡ್ತಿ ಮೇಲೆ ತಾಂಡವ್‌ ಗೆ LOVEಭಾಗ್ಯಲಕ್ಷ್ಮೀ ಕತೆ ಚೇಂಜ್‌

ಭಾಗ್ಯಗೆ ಸತ್ಯ ಗೊತ್ತಾಲ್ಲ.. ತಾಂಡವ್‌ ಯಾವತ್ತು ಬದಲಾಗಲ್ಲ.. ಇದು ಭಾಗ್ಯ ಲಕ್ಷ್ಮೀ ಸೀರಿಯಲ್‌ ವೀಕ್ಷಕರ ಕಾಮನ್‌ ಡೈಲಾಗ್..‌ ಹೌದು.. ಭಾಗ್ಯ ಲಕ್ಷ್ಮೀ ಸೀರಿಯಲ್‌ ನಲ್ಲಿ ತಿಂಗಳಾನುಗಟ್ಟಲೆಯಿಂದ ಇದನ್ನೇ ತೋರಿಸಲಾಗ್ತಿದೆ.. ಸೀರಿಯಲ್‌ ಅನ್ನ ರಬ್ಬರ್‌ ತರ ಎಳಿತಾ ಇದ್ದಾರೆ.. ಇದೀಗ ವೀಕ್ಷಕರಿಗೂ ಕತೆ ಫುಲ್‌ ಬೋರ್‌ ಹೊಡಿತಾ ಇದೆ.. ಇದೀಗ ಭಾಗ್ಯಳನ್ನ ಒಂದು ತಿಂಗಳಲ್ಲೇ ಬದಲಾಯಿಸಿ, ನೀನೇ ಅವಳ ಹಿಂದೆ ಬರುವಂತೆ ಮಾಡ್ತೇನೆ ಅಂತಾ ಕುಸುಮಾ ತಾಂಡವ್‌ ಗೆ ಸವಾಲ್‌ ಹಾಕಿದ್ದಾಳೆ.. ಇದೀಗ ಇಷ್ಟು ವರ್ಷದಲ್ಲಿ ಬದಲಾಗದ ತಾಂಡವ್‌ ಈಗ ಬದಲಾಗ್ತಾನಾ? ಸೀರಿಯಲ್‌ ಸ್ಕ್ರಿಪ್ಟ್‌ ಬರೆಯುವವರು ಯಾಕೆ ತಲೆ ಓಡ್ಸಲ್ಲ ಅಂತ ವೀಕ್ಷಕರು ಅಸಮಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ:  ಮೈತ್ರಿಗೆ ‘ಕೈ’ ಕೊಟ್ಟ ಸಿಪಿ ಯೋಗೇಶ್ವರ್ – ಕಾಂಗ್ರೆಸ್ ಅಭ್ಯರ್ಥಿಯಾಗಿ ಸೈನಿಕ ಕಣಕ್ಕೆ?

ಭಾಗ್ಯಲಕ್ಷ್ಮೀ ಸೀರಿಯಲ್‌ ಕತೆ ಸದ್ಯ ಅದೇ ಹಾಡು.. ಅದೇ  ರಾಗ ಅನ್ನೋ ತರ ಆಗಿದೆ.. ಏನಾದರೂ ಮಾಡಿಯಾದರೂ ಸರಿ. ಸೊಸೆಯನ್ನು ಬದಲಾಯಿಸಬೇಕು, ತನ್ನ ಮಗ ಅವಳನ್ನು ಒಪ್ಪಿಕೊಳ್ಳಬೇಕು, ಶ್ರೇಷ್ಠಳನ್ನು ಬಿಡಬೇಕು… ಇದು ಭಾಗ್ಯಲಕ್ಷ್ಮಿಯ ಅತ್ತೆ ಕುಸುಮಾಳ ಹಠ. ಇದೇ ಕಾರಣಕ್ಕೆ ಸೊಸೆ ಭಾಗ್ಯಳನ್ನು ಬದಲಾಯಿಸುವ ಪಣ ತೊಟ್ಟಿದ್ದಾಳೆ. ಅವಳಿಗೆ ಮನೆಯವರು ಕೂಡ ಸಾಥ್​  ನೀಡಿದ್ದಾರೆ. ಯಾಕೆಂದ್ರೆ ಎಲ್ಲರಿಗೂ ತಾಂಡವ್​ ಮತ್ತು ಶ್ರೇಷ್ಠಾಳ ಅಸಲಿಯತ್ತು ಗೊತ್ತು. ಆದರೆ ವಿಚಿತ್ರ ಎಂದ್ರೆ ಇದುವರೆಗೂ ಭಾಗ್ಯಳಿಗೆ ಮಾತ್ರ ತನ್ನ ಗಂಡನ ಬಗ್ಗೆ ಗೊತ್ತಾಗಲಿಲ್ಲ.  ಮನೆಯವರೆಲ್ಲರೂ ಏಕಿಷ್ಟು ವಿಚಿತ್ರವಾಗಿ ಆಡುತ್ತಿದ್ದಾರೆ ಎಂದು ಭಾಗ್ಯ ಸತ್ಯ ತಿಳಿಯಲು ಇನ್ನಿಲ್ಲದ ಕಸರತ್ತು ಮಾಡಿದ್ದಾಳೆ.  ಆದರೂ ಆಕೆಗೆ ಗೊತ್ತಾಗಲೇ ಇಲ್ಲ.  ಅತ್ತ ಶ್ರೇಷ್ಠಾಳನ್ನು ಕಟ್ಟಿ ಹಾಕಿ ಕುಸುಮಾ, ಪೂಜಾ ಎಲ್ಲರೂ ಸೇರಿ ಹಿಂಸೆ ಕೊಡುತ್ತಿರುವ ವಿಷಯ ತಾಂಡವ್​ಗೆ ಗೊತ್ತಾಗಿದೆ. ಎಲ್ಲರ ವಿರುದ್ಧ ಸೇಡು ತೀರಿಸಿಕೊಳ್ಳಲು ಶ್ರೇಷ್ಠಾ ಹವಣಿಸುತ್ತಿದ್ದಾಳೆ. ಆದರೆ ಇನ್ನೊಂದು ತಿಂಗಳು ತಡೆದುಕೋ. ಅಷ್ಟರಲ್ಲಿ ಅಮ್ಮ ತನ್ನ ಕೈಯಾರೇ ಡಿವೋರ್ಸ್​ ಕೊಡಿಸುತ್ತಾಳೆ ಎಂದು ಶ್ರೇಷ್ಠಾಳನ್ನು ಸಮಾಧಾನಪಡಿಸಿದ್ದಾನೆ ತಾಂಡವ್​.

ಅಷ್ಟಕ್ಕೂ  ಕುಸುಮಾ ಒಂದು ತಿಂಗಳಿನಲ್ಲಿ ಭಾಗ್ಯಳನ್ನು ಬದಲಾಯಿಸುವ ಪಣ ತೊಟ್ಟಿದ್ದಾಳೆ.  ಭಾಗ್ಯ ನಿನಗೆ ಹೇಗೆ ಬೇಕೋ ಹಾಗೆ ಇರ್ತಾಳೆ. ಇವಳೇ ನನ್ನ ಹೆಂಡತಿ ಅನ್ನೋ ರೀತಿಯಲ್ಲಿ ಭಾಗ್ಯ ಬದಲಾಗ್ತಾಳೆ. ಭಾಗ್ಯಳನ್ನು ಬಿಟ್ಟು ಯಾರನ್ನೂ ನೀನು ನೋಡಲ್ಲ ಹಾಗೆ ಇರ್ತಾಳೆ ಎಂದೆಲ್ಲಾ ಹೇಳಿದ್ದಾಳೆ. ಅದೇ ರೀತಿ ಭಾಗ್ಯಳನ್ನು ಚೆನ್ನಾಗಿ ರೆಡಿ ಮಾಡಿದ್ದಳು. ಅರೆ ಕ್ಷಣ ಭಾಗ್ಯಳ ಸೌಂದರ್ಯ ನೋಡಿ ತಾಂಡವ್​ ಖುಷಿ ಪಟ್ಟರೂ ಕೊನೆಗೆ ಇನ್ನಿಲ್ಲದ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದ. ಗೂಬೆ, ಕತ್ತೆ ಎಂದಿದ್ದ. ಗೂಬೆಗೆ ಸೌಂದರ್ಯ ಮಾಡಿದರೆ ನವಿಲು ಆಗಲ್ಲ. ಮಾಡುವ ನಾಲ್ಕು ದೋಸೆ, ಚಪಾತಿಗೆ ಏಪ್ರಾನ್​ ಸಾಕು, ಇದೆಲ್ಲಾ ಯಾಕೆ ಎಂದು ನಿಂದಿಸಿದ್ದ.

ಆದರೂ ಈಗ ತಾಂಡವ್​ ಭಾಗ್ಯಳನ್ನು ಒಪ್ಪಿಕೊಳ್ಳುವಂತೆ ಮಾಡುವ ಪಣ ಬಿಡಲಿಲ್ಲ ಕುಸುಮಾ. ಭಾಗ್ಯಳಿಗೆ ಈಗ ಮಾವ ಸಾಥ್​ ನೀಡಿದ್ದು, ಕಾರು ಕಲಿಸಲು ಹೊರಟಿದ್ದಾನೆ. ಅಡುಗೆ ಮಾಡ್ತಿರೋ ಭಾಗ್ಯಳನ್ನು ಅರ್ಧಕ್ಕೆ ಕರೆದು ಕಾರು ಕಲಿಸಲು ಕರೆದುಕೊಂಡು ಹೋಗಿದ್ದಾನೆ ಮಾವ. ಆದರೆ ಇನ್ನೂ ಭಾಗ್ಯಳಿಗೆ ಯಾಕೆ ಇವರೆಲ್ಲಾ ಹೀಗೆ ಮಾಡ್ತಾ ಇದ್ದಾರೆ ಎನ್ನುವುದೇ ತಿಳಿದಿಲ್ಲ. ಒಂದು ವೇಳೆ ನಿನ್ನ ಗಂಡನೇ ಹೀಗೆ ಮಾಡಿದ್ರೆ ಎಂದು ಬಾಯಿಬಿಟ್ಟು ಅತ್ತೆ ಕೇಳಿದಾಗಲೂ ಭಾಗ್ಯಳಿಗೆ ವಿಷಯ ತಿಳಿದಿಲ್ಲ. ಇಂಥ ವಿಚಿತ್ರ ರೀತಿಯಿಂದಲೇ ಸೀರಿಯಲ್​  ಮುಂದೆ ಸಾಗಿದೆ.

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಪಾಸಾಗಿದ್ದು ಮಾತ್ರವಲ್ಲದೇ, ಇಂಗ್ಲಿಷ್​ ಕಲಿತಿದ್ದಾಳೆ ಭಾಗ್ಯ. ಅದೂ ಸಾಲದು ಎನ್ನುವುದಕ್ಕೆ ಸ್ಟಾರ್ ಹೋಟೆಲ್​ನಲ್ಲಿ ಷೆಫ್​ ಆಗಿ ಲಕ್ಷ ಸಂಬಳ ಪಡೆಯುತ್ತಿದ್ದಾಳೆ. ಅತ್ತೆಯಿಂದಾಗಿ ಮೇಕಪ್​ ಮಾಡಿಕೊಂಡು ಸುಂದರಿಯಾಗಿ ಕಂಡಿದ್ದಾಳೆ. ಇಷ್ಟೆಲ್ಲಾ ಆದರೂ ತಾಂಡವ್​ಗೆ ಭಾಗ್ಯಳ ಮೇಲೆ ಪ್ರೀತಿ ಹುಟ್ಟಿಲ್ಲ. ಕತ್ತೆ, ಗೂಬೆ ಅಂತೆಲ್ಲಾಕೆಟ್ಟ ಕೆಟ್ಟ ಶಬ್ದಗಳಿಂದ ಬೈಯುತ್ತಲೇ ಇದ್ದಾನೆ. ಇಷ್ಟೆಲ್ಲಾ ಮಾಡಿದವ ಭಾಗ್ಯ ಕಾರು ಕಲಿತ ಮಾತ್ರಕ್ಕೆ ಒಪ್ಪಿಕೊಳ್ತಾನಾ? ಇದೆಂಥ ಹುಚ್ಚುತನ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ವೀಕ್ಷಕರೇನು ಹುಚ್ಚರು ಅಂತ ತಿಳಿದುಕೊಂಡಿದ್ದೀರಾ ಎಂದು ಕೇಳುತ್ತಿದ್ದಾರೆ. ಇನ್ನೊಂದ್ಕಡೆ,  ಭಾಗ್ಯಳ ಮೇಲೆ ಆಗುತ್ತಿರುವ ಅನ್ಯಾಯವನ್ನು ಕಣ್ಣಾರೆ ನೋಡುತ್ತಿರುವ  ನೆಟ್ಟಿಗರು ಗಂಡನನ್ನು ಬಿಟ್ಟು ಬಾ.. ಗಂಡ ಹೆಂಡ್ತಿಗೆ ಗೌರವ ಕೊಟ್ಟು ಮಾತನಾಡ್ಬೇಕು..   ಇಂಥ ಗಂಡ ನಿನಗೆ ಬೇಡ.. ಅಂತ ಸಲಹೆ ಕೊಡುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *