ಅತ್ತೆ ಕೈಚಳಕ ಭಾಗ್ಯ ಲಕಲಕ! -ಹೆಂಡ್ತಿ ನೋಡಿ ಕಳೆದು ಹೋದ ತಾಂಡವ್
ಗಂಡನಿಗಾಗಿ ಹೆಂಡ್ತಿಯೇ ಬದಲಾಗ್ಬೇಕಾ?  

ಅತ್ತೆ ಕೈಚಳಕ ಭಾಗ್ಯ ಲಕಲಕ! -ಹೆಂಡ್ತಿ ನೋಡಿ ಕಳೆದು ಹೋದ ತಾಂಡವ್ಗಂಡನಿಗಾಗಿ ಹೆಂಡ್ತಿಯೇ ಬದಲಾಗ್ಬೇಕಾ?  

ಭಾಗ್ಯ ಲಕ್ಷ್ಮೀ ಸೀರಿಯಲ್‌ ನಲ್ಲಿ ಸದ್ಯ ಅದೇ ಹಾಡು.. ಅದೇ ರಾಗ.. ಭಾಗ್ಯಗೆ ಸತ್ಯ ಗೊತ್ತಾಗಲ್ಲ.. ತಾಂಡವ್‌ ಯಾವತ್ತು ಬದಲಾಗಲ್ಲ.. ಆದ್ರೆ ತನ್ನ ಸೊಸೆಯನ್ನ ಉಳಿಸಿಕೊಳ್ಳಲು ಕುಸುಮಾ ಪಡೋ ಪಾಡು ಅಷ್ಟಿಷ್ಟಲ್ಲ.. ಇದೀಗ ತಾಂಡವ್‌ ಭಾಗ್ಯ ಕಡೆ ವಾಲಲು ಕುಸುಮಾ ಹೊಸ ಪ್ಲಾನ್‌ ಮಾಡಿದ್ದಾಳೆ.. ಹೀಗಾಗಿ ಭಾಗ್ಯಳನ್ನು ಫುಲ್‌ ಮಾರ್ಡನ್‌ ಮಾಡ್ಬೇಕು ಅಂತಾ ಹೊರ್ಟಿದ್ದಾಳೆ.. ಆದ್ರೀಗ ಕುಸುಮಾ ವಿರುದ್ದ ವೀಕ್ಷಕರು ಕಿಡಿಕಾರುತ್ತಿದ್ದಾರೆ.. ಅಷ್ಟಕ್ಕೂ ಕುಸುಮಾ ನಡೆ ವೀಕ್ಷಕರಿಗೆ ಸಿಟ್ಟು ತರಿಸಿದ್ಯಾಕೆ? ತಾಂಡವ್‌ ಶ್ರೇಷ್ಠಾ ಸಹವಾಸ ಬಿಟ್ಟು ಇನ್ನಾದ್ರೂ ಬದಲಾಗ್ತಾನಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ದರ್ಶನ್‌ ಬೆನ್ನು ನೋವಿನಿಂದ ವಿಲವಿಲ.. – ಕೊನೆಗೂ ಸಿಕ್ತು ಬಿಗ್‌ ರಿಲೀಫ್‌

ಭಾಗ್ಯ ಲಕ್ಷ್ಮೀ ಸೀರಿಯಲ್‌ ಕತೆ ಈಗ ಫುಲ್‌ ಬೋರ್‌ ಹೊಡಿತಾ ಇದೆ.. ಯಾಕಂದ್ರೆ, ಶ್ರೇಷ್ಠಾ ಮದ್ವೆಯಾಗ್ತಿರೋ ಹುಡುಗ ಯಾರು ಅಂತ ಕಂಡುಹಿಡಿಯಲು ಭಾಗ್ಯ ಎಷ್ಟು ಹರಸಾಹಸ ಪಟ್ಟರೂ  ಗೊತ್ತಾಗಿಲ್ಲ.. ಇಡೀ ಮನೆಯವರಿಗೆ ಸತ್ಯ ಗೊತ್ತಾಗಿದ್ರು.. ಆ ಹುಡುಗ ತನ್ನ ಗಂಡನೇ ಇರಬೇಕು ಎಂಬ ಸಂದೇಹ ಕೂಡ ಬಂದಿಲ್ಲ.. ಈ ಪೆದ್ದಿ ಭಾಗ್ಯಗೆ ತನ್ನ ಗಂಡನ ಕಳ್ಳಾಟ ಯಾವಾಗ ಗೊತ್ತಾಗುತ್ತೋ ಆ ದೇವರಿಗೇ ಗೊತ್ತು ಅಂತಾ ವೀಕ್ಷಕರು ಹೇಳ್ತಿದ್ದಾರೆ..

ಇದ್ರ ಮಧ್ಯೆ ಶ್ರೇಷ್ಠಾ ತಾಂಡವ್‌ ನಿಂದ ದೂರ ಉಳಿಬೇಕು ಅಂತಾ ಆಕೆಯನ್ನೇ ಕಿಡ್ನ್ಯಾಪ್‌ ಮಾಡಿದ್ದಾರೆ.. ಶ್ರೇಷ್ಠಾಳನ್ನು ಕಟ್ಟಿ ಹಾಕಿ ಕುಸುಮಾ, ಪೂಜಾ ಎಲ್ಲರೂ ಸೇರಿ ಹಿಂಸೆ ಕೊಡುತ್ತಿದ್ರು.. ಆದ್ರೀಗ ಈ ವಿಚಾರ ತಾಂಡವ್​ಗೆ ಗೊತ್ತಾಗಿದೆ. ಎಲ್ಲರ ವಿರುದ್ಧ ಸೇಡು ತೀರಿಸಿಕೊಳ್ಳಲು ಶ್ರೇಷ್ಠಾ ಹವಣಿಸುತ್ತಿದ್ದಾಳೆ. ಆದರೆ ಇನ್ನೊಂದು ತಿಂಗಳು ತಡೆದುಕೋ. ಅಷ್ಟರಲ್ಲಿ ಅಮ್ಮ ತನ್ನ ಕೈಯಾರೇ ಡಿವೋರ್ಸ್​ ಕೊಡಿಸುತ್ತಾಳೆ ಎಂದು ಶ್ರೇಷ್ಠಾಳನ್ನು ಸಮಾಧಾನಪಡಿಸಿದ್ದಾನೆ ತಾಂಡವ್​.

ಅಷ್ಟಕ್ಕೂ ಆತ ಹಾಗೆ ಹೇಳಲು ಕಾರಣವೂ ಇದೆ. ಅದೇನೆಂದರೆ, ಮದುವೆ ಮಂಟಪದಿಂದ  ತಾಂಡವ್​ನನ್ನು   ಎಳೆದುಕೊಂಡು ಬಂದಾಗ, ತಾಂಡವ್​ಗೆ ಭಾಗ್ಯ ನಿನಗೆ ಹೇಗೆ ಬೇಕೋ ಹಾಗೆ ಇರ್ತಾಳೆ. ಇವಳೇ ನನ್ನ ಹೆಂಡತಿ ಅನ್ನೋ ರೀತಿಯಲ್ಲಿ ಭಾಗ್ಯ ಬದಲಾಗ್ತಾಳೆ. ಭಾಗ್ಯಳನ್ನು ಬಿಟ್ಟು ಯಾರನ್ನೂ ನೀನು ನೋಡಲ್ಲ ಹಾಗೆ ಇರ್ತಾಳೆ ಎಂದೆಲ್ಲಾ ಹೇಳಿದ್ದಳು. ಭಾಗ್ಯ ಈಗಾಗಲೇ, ಎಸ್​ಎಸ್​ಎಲ್​ಸಿ ಪಾಸ್‌ ಆಗಿದ್ದಾಳೆ, ಇಂಗ್ಲಿಷ್​ ಕಲಿತಿದ್ದಾಳೆ..  ಲಕ್ಷಗಟ್ಟಲೆ ದುಡಿಯೋ ಕೆಲಸನೂ ಗಿಟ್ಟಿಸಿಕೊಂಡಾಯ್ತು. ಈಗ ಏನಿದ್ದರೂ ಆಕೆಯನ್ನು ಸುಂದರಿಯಾಗಿ ಮಾಡುವುದು ಅಷ್ಟೇ. ಕುಸುಮಾ ಮಾತನ್ನ ಕೇಳಿದ ಸೀರಿಯಲ್‌ ವೀಕ್ಷಕರು ಭಾಗ್ಯಗೆ ಸೀರೆ ಬದಲು ಶಾರ್ಟ್‌ ಡ್ರೆಸ್‌ ಬರತ್ತೆ, ಜಡೆ ಹೋಗಿ ಬಾಬ್​ಕಟ್​ ಬರತ್ತೆ ಅಂತ ಅಂದುಕೊಂಡಿದ್ದರು. ಆದ್ರೆ ಆತರ ಏನೂ ಆಗಿಲ್ಲ.. ಭಾಗ್ಯ ಸೀರೆಯಲ್ಲಿಯೇ ಇನ್ನಷ್ಟು ಸುಂದರಿಯಾಗಿ ಕಾಣುವ ಹಾಗೆ ಕುಸುಮಾ ಮಾಡಿದ್ದಾಳೆ. ಈತರ ಮೇಕಪ್‌ ನಿಂದ ಭಾಗ್ಯ ಹೆಚ್ಚಿಗೆ ಏನೂ ವ್ಯತ್ಯಾಸ ಕಾಣದಿದ್ದರೂ ಬಿಟ್ಟ ಕೂದಲಿನಿಂದಾಗಿ ಚೆನ್ನಾಗಿ ಕಾಣಿಸಿದ್ದಾಳೆ.. ಭಾಗ್ಯಳನ್ನ ನೋಡಿ ತಾಂಡವ್‌ ನಿಂತಲ್ಲೇ ಕಳೆದು ಹೋಗಿದ್ದಾನೆ.. ಈ ವೇಳೆ ಪೂಜಾ ಏನ್‌ ಭಾವ ಅಕ್ಕನ ನೋಡಿ ಕಳೆದು ಹೋದ್ರಿ ಅಂತಾ ಹೇಳಿದ್ದಾಳೆ.. ಎಚ್ಚೆತ್ತುಕೊಂಡ ತಾಂಡವ್‌ ಮತ್ತೆ ಭಾಗ್ಯಳನ್ನ ಮನಬಂದಂತೆ ನಿಂದಿಸಿದ್ದಾನೆ..

ಇದೀಗ ಸೀರಿಯಲ್‌ ವೀಕ್ಷಕರು ಸೀರಿಯಲ್‌ ಟೀಮ್‌ ವಿರುದ್ದ ಸಿಟ್ಟಾಗಿದ್ದಾರೆ.. ಇದಕ್ಕೆ  ಕಾರಣ ಕೂಡ ಇದೆ.. ಅದೇನಂದ್ರೆ  ಶ್ರೇಷ್ಠಾಳ ಎದುರು ಭಾಗ್ಯಳನ್ನು ಎಮ್ಮೆ ಅಂತಾ ತಾಂಡವ್‌ ಹೇಳಿದ್ದಾನೆ​. ಪತ್ನಿಯನ್ನು ಈ ರೀತಿ ಸೀರಿಯಲ್​ಗಳಲ್ಲಿ ಸಂಬೋಧಿಸಿ ಅದನ್ನೇ ಮಾದರಿ ಮಾಡಿಕೊಳ್ಳುವ ಹಾಗೆ ಮಾಡುವುದು ಎಷ್ಟು ಸರಿ ಎಂದು ವೀಕ್ಷಕರು ಪ್ರಶ್ನೆ ಮಾಡಿದ್ದಾರೆ.. ಮತ್ತೊಂದು ವಿಚಾರ ಏನಂದ್ರೆ, ಗಂಡನಿಗಾಗಿ ಅದೂ ತಾಂಡವ್​ನಂಥ ಗಂಡನಿಗಾಗಿ ಹೆಣ್ಣು ಬದಲಾಗಬೇಕಾ ಎನ್ನುವ ಪ್ರಶ್ನೆ ವೀಕ್ಷಕರದ್ದು..  ಗಂಡನಿಗಾಗಿ ಹೆಂಡತಿ ತನ್ನತನವನ್ನೇ ಮರೆಯಬೇಕಾ? ಇಷ್ಟು ಬದಲಾಗಬೇಕಾ? ಹೆಣ್ಣಿನ ಹಣೆಬರಹವೇ ಇಷ್ಟಾ, ಹೆಣ್ಣಿನ ಜನ್ಮ ಗಂಡ, ಅತ್ತೆಯ ಅಣತಿಯಂತೆ ನಡೆಯುವುದಾ? ಅದೇ ಅವಳ ಜೀವನನಾ… ಎಂದೆಲ್ಲಾ  ಹಲವು ಪ್ರಶ್ನೆಗಳನ್ನು ಮಾಡುತ್ತಿದ್ದಾರೆ ಸೀರಿಯಲ್​ ಪ್ರೇಮಿಗಳು. ಇಂಥ ದೃಶ್ಯಗಳನ್ನು ತೋರಿಸಿ ಏನು ಹೇಳಲು ಹೊರಟಿದ್ದೀರಿ ಅಂತಾ ವೀಕ್ಷಕರು ಕೇಳುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *