ಶ್ರೇಷ್ಠಾ ಮದುವೆ ಸತ್ಯ ರಿವೀಲ್‌ – ತಾಂಡವ್‌ ಕಳ್ಳಾಟ.. ಭಾಗ್ಯ ಸೈಲೆಂಟ್‌

ಶ್ರೇಷ್ಠಾ ಮದುವೆ ಸತ್ಯ ರಿವೀಲ್‌ – ತಾಂಡವ್‌ ಕಳ್ಳಾಟ.. ಭಾಗ್ಯ ಸೈಲೆಂಟ್‌

ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಆಗ್ತಾ ಇರೋ ಭಾಗ್ಯ ಲಕ್ಷ್ಮೀ ಸೀರಿಯಲ್‌ ಕುತೂಹಲ ಘಟ್ಟ ತಲುಪಿದೆ.. ಶ್ರೇಷ್ಠಾಳ ಸಹವಾಸ ಮಾಡಿರುವ ತಾಂಡವ್‌ ಈಗ ಅಡಕತ್ತರಿಯಲ್ಲಿ ಸಿಲುಕಿದ್ದಾನೆ. ಮನೆಯವರಿಂದ ಮುಚ್ಚಿಟ್ಟಿರುವ ಸತ್ಯ ಹೊರಬೀಳುವ ಕಾಲ ಹತ್ತಿರವಾಗಿದ್ದು, ಭಯದಿಂದಲೇ ಕಾಲ ಕಳಿತಾ ಇದ್ದಾನೆ.. ಇದೀಗ ಶ್ರೇಷ್ಠಾ ಎಲ್ಲಾ ಸತ್ಯ ಹೇಳ್ತೆನೆ ಅಂತಾ ಭಾಗ್ಯಳನ್ನ ಕರೆದುಕೊಂಡು ತಾಂಡವ್‌ ಮನೆಗೆ ಬಂದಿದ್ದಾಳೆ. ವೀಕ್ಷಕರು ಕೂಡ ಕುತೂಹಲದಿಂದ ನೋಡಲು ಕಾಯ್ತಾ ಇದ್ದಾರೆ. ಆದ್ರೆ ವೀಕ್ಷಕರು ಭಾಗ್ಯಳ ಮೇಲೆ ಸಿಟ್ಟಾಗಿದ್ದಾರೆ. ಪೆದ್ದು ತನ ಇರ್ಬೇಕು.. ಆದ್ರೆ ಇಷ್ಟರ ಮಟ್ಟಿಗೆ ಪೆದ್ದುತನ ಇರ್ಬಾರ್ದು.. ಅಂತಾ ಹೇಳ್ತಿದ್ದಾರೆ..

ಇದನ್ನೂ ಓದಿ: ರಾಹುಲ್ ಕರಿಯರ್​ಗೆ ಗಂಭೀರ್ ಕಲ್ಲು? – IPL, T-20ಯಂತೆ ODIಗೂ ಬೇಕಿತ್ತಾ?

ಭಾಗ್ಯ ಲಕ್ಷ್ಮೀ ಸೀರಿಯನ್‌ ಸದ್ಯ ರೋಚಕ ಘಟ್ಟ ತಲುಪಿದೆ.. ತಾಂಡವ್‌ ಶೇಷ್ಠಾ ಕಳ್ಳಾಟ ಬಯಲಾಗುವ ಕಾಲ ಹತ್ತಿರವಾಗಿದೆ.. ಗಂಡನನ್ನ ಉಳಿಸಿಕೊಳ್ಳುವ ಹೋರಾಟದಲ್ಲಿ ಭಾಗ್ಯ ಇದ್ದಾಳೆ.. ಇನ್ನೇನಿದ್ರೂ ಸೀರಿಯಲ್​ನಲ್ಲಿ  ಭಾಗ್ಯಳದ್ದೇ ಹವಾ ಇರಲಿದೆ. ಈಗಾಗ್ಲೇ ಪೂಜಾ, ಸುಂದರಿ ಮತ್ತು ಹಿತಾ ಪ್ಲ್ಯಾನ್​ ಮಾಡಿ, ಭಾಗ್ಯಳಿಗೆ ಅಸಲಿಯತ್ತು ಗೊತ್ತು ಮಾಡಲು ಪಣ ತೊಟ್ಟಿದ್ದಾರೆ. ಅದರಂತೆ  ಯಶಸ್ವಿ ಕೂಡ ಆಗಿದ್ದಾರೆ. ಶ್ರೇಷ್ಠಾ ಇಬ್ಬರು ಮಕ್ಕಳ ತಂದೆಯನ್ನು ಮದುವೆಯಾಗುತ್ತಿರುವ ವಿಷಯ ಭಾಗ್ಯಳಿಗೆ ಗೊತ್ತಾಗಿದೆ.. ಆದರೆ ಅದು ತನ್ನದೇ ಗಂಡ ಎಂದು ಗೊತ್ತಾಗಿಲ್ಲ.  ಆದ್ರೂ ಕೂಡ ಭಾಗ್ಯ ಶ್ರೇಷ್ಠಾಳಿಗೆ ಸರಿಯಾಗೇ ಕ್ಲಾಸ್‌ ತೆಗೆದುಕೊಂಡಿದ್ದಾಳೆ. ಬೇರೆಯವರ ಸಂಸಾರ ಯಾಕೆ ಹಾಳು ಮಾಡ್ತಿದ್ಯಾ ಅಂತಾ ಚೆನ್ನಾಗೆ ಬೈದಿದ್ದಾಳೆ.. ಆಗಿದ್ದು ಆಗಿ ಹೋಗಲಿ ಅಂತಾ ಶ್ರೇಷ್ಠಾ ಭಾಗ್ಯಳ ಮನೆಗೇ ಬಂದು ಎಲ್ಲಾ ವಿಷಯ ಹೇಳುವ ತಯಾರಿ ನಡೆಸಿದ್ದಾಳೆ. ತಾಂಡವ್‌ಗೆ ಈ ವಿಚಾರ ಗೊತ್ತಾಗುತ್ತಿದ್ದಂತೆ ಆತನಿಗೆ ತಲೆ ಕೆಟ್ಟು ಹೋಗಿದೆ.. ತನ್ನ ಗುಟ್ಟು ಮನೆಯವರ ಮುಂದೆ ರಿವೀಲ್‌ ಆಗುತ್ತೆ ಅಂತಾ ಒಳಗೊಳಗೆ ಒದ್ದಾಡುತ್ತಿದ್ದಾನೆ.. ಸತ್ಯ ಗೊತ್ತಾದ ಮೇಲೆ ಭಾಗ್ಯ ಮುಂದೇನು ಮಾಡ್ತಾಳೆ ಅಂತಾ ವೀಕ್ಷಕರು ಕೂಡ ಕಾಯ್ತಾ ಇದ್ದಾರೆ.. ಮತ್ತೊಂದ್ಕಡೆ ಭಾಗ್ಯಳ ಪೆದ್ದುತನಕ್ಕೆ ಬೈಯ್ತಾ ಇದ್ದಾರೆ..

ಹೌದು, ಶ್ರೇಷ್ಠಾ ಮದುವೆಯ ಅರ್ಧ ಸತ್ಯ ಭಾಗ್ಯಗೆ ಗೊತ್ತಾಗಿದೆ.. ಇಬ್ಬರು ಮಕ್ಕಳ ತಂದೆಯನ್ನ ಮದುವೆಯಾಗುತ್ತಿರುವುದು ಅನ್ನೋದು ಗೊತ್ತಾಗಿದೆ. ಈಗ ಶ್ರೇಷ್ಠಾ ತನ್ನ ಮನೆಗೆ ಕರೆದುಕೊಂಡು ಬಂದಾಗಲು ಭಾಗ್ಯಗೆ ತನ್ನ ಗಂಡನನ್ನೇ ಮದುವೆಯಾಗುತ್ತಿರೋದು ಅಂತಾ ಗೊತ್ತಾಗಲಿಲ್ವಾ?  ಅದಕ್ಕಾಗಿಯೇ ನೆಟ್ಟಿಗರು ಭಾಗ್ಯಳ ಪೆದ್ದುತನಕ್ಕೆ ಟೀಕೆ ಮಾಡುತ್ತಿದ್ದಾರೆ. ಪೆದ್ದು ಭಾಗ್ಯ, ನಿನಗೂ ಇಬ್ಬರು ಮಕ್ಕಳು ಎನ್ನೋದು ಮರೆತು ಹೋಯ್ತಾ. ನಿನ್ನ ಗಂಡ ಶ್ರೇಷ್ಠಾಳ ಹಿಂದೆ ಮುಂದೆ ಓಡಾಡ್ತಿರೋದು ಗೊತ್ತಿದ್ರೂ, ಮಂತ್ರವಾದಿ ಮಾತು ಅರ್ಥವಾಗ್ತಿಲ್ವಲ್ಲಾ?  ಛೇ… ಇಷ್ಟು ಪೆದ್ದುನಾ ನೀನು ಎಂದು ಬೈಯುತ್ತಿದ್ದಾರೆ. ಸೀರಿಯಲ್‌ ಟೀಮ್‌ ಕೂಡ ಭಾಗ್ಯಳನ್ನ ಪದೇ ಪದೇ ಪೆದ್ದಿ ಅನ್ನೋ ತರ ತೋರಿಸ್ತಾ ಇರೋದು ಯಾಕೆ ಅಂತಾ ಪ್ರಶ್ನೆ ಮಾಡ್ತಾ ಇದ್ದಾರೆ..

Shwetha M

Leave a Reply

Your email address will not be published. Required fields are marked *