ಭಾರತಕ್ಕೆ ಮತ್ತೆ ಕಾಲಿಡುತ್ತಿದೆ ಡೆಡ್ಲಿ ಗೇಮ್‌! – ಮಕ್ಕಳ‌ ಬಗ್ಗೆ ಇರಲಿ‌ ಎಚ್ಚರ

ಭಾರತಕ್ಕೆ ಮತ್ತೆ ಕಾಲಿಡುತ್ತಿದೆ ಡೆಡ್ಲಿ ಗೇಮ್‌! – ಮಕ್ಕಳ‌ ಬಗ್ಗೆ ಇರಲಿ‌ ಎಚ್ಚರ

ನವದೆಹಲಿ: ಪ್ರಪಂಚದಾದ್ಯಂತ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಹುಚ್ಚು ಹಿಡಿಸಿದ್ದ, ಅನೇಕರ ಜೀವಕ್ಕೆ ಕುತ್ತುತಂದ ಪಬ್‌ ಜಿ ಗೇಮ್‌ ಅನ್ನು ಭಾರತದಲ್ಲಿ ಬ್ಯಾನ್‌ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ಈ ಡೆಡ್ಲಿ ಗೇಮ್‌ ದೇಶಕ್ಕೆ ಕಾಲಿಡುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ‘ಚಾಟ್‌ಜಿಪಿಟಿ’ ಎಡವಟ್ಟು – ಇಡೀ ತರಗತಿಯನ್ನೇ ಫೇಲ್‌ ಮಾಡಿದ ಪ್ರಾಧ್ಯಾಪಕ!

ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ(BGMI) ಗೇಮ್ ಅಪ್ಲಿಕೇಶನ್‌ನ ತಯಾರಕರಾದ ಕ್ರಾಫ್ಟಾನ್ ತನ್ನ ಜನಪ್ರಿಯ ಆಟವಾದ BGMI ಯನ್ನು ಭಾರತದಲ್ಲಿ ಮತ್ತೆ ಪುನರಾರಂಭಿಸಲು ಭಾರತೀಯ ಅಧಿಕಾರಿಗಳಿಂದ ಅನುಮೋದನೆಯನ್ನು ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ BGMI ಪುನರಾರಂಭಿಸಲು ನಮಗೆ ಅವಕಾಶ ಮಾಡಿಕೊಟ್ಟ ಭಾರತೀಯ ಅಧಿಕಾರಿಗಳಿಗೆ ನಾವು ಹೆಚ್ಚು ಕೃತಜ್ಞರಾಗಿರುತ್ತೇವೆ. BGMI ಶೀಘ್ರದಲ್ಲೇ ಡೌನ್‌ಲೋಡ್‌ಗೆ ಲಭ್ಯವಾಗಲಿದ್ದು, ಭಾರತೀಯ ಗೇಮಿಂಗ್ ಸಮುದಾಯದಕ್ಕೆ ನಾವು ನಮ್ಮ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇವೆ ಎಂದು ಕ್ರಾಫ್ಟನ್ ಇಂಕ್ ಇಂಡಿಯಾದ ಸಿಇಒ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ವರ್ಷ ಜುಲೈನಲ್ಲಿ ಸರ್ಕಾರದ ಆದೇಶದ ನಂತರ BGMI ಅಪ್ಲಿಕೇಶನ್​ನ್ನು ಗೂಗಲ್ ಪ್ಲೇ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ತೆಗೆದು ಹಾಕಲಾಗಿತ್ತು. ಜೊತೆಗೆ ಕಳೆದ ಎರಡು ವರ್ಷಗಳಲ್ಲಿ ಸರ್ಕಾರವು 300ಕ್ಕೂ ಅಪ್ಲಿಕೇಶನ್​ಗಳನ್ನು ಬ್ಯಾನ್​ ಮಾಡಿತ್ತು. ಈ ಪೈಕಿ BGMI ಭಾರತಕ್ಕೆ ಪುನರಾಗಮನ ಮಾಡುವ ಮೊದಲ ಅಪ್ಲಿಕೇಶನ್ ಆಗಲಿದೆ.

suddiyaana