ನಮ್ಮ ಮೆಟ್ರೋದಲ್ಲಿ ಅಸಭ್ಯ ವರ್ತನೆ ತೋರಿದ್ರೆ ಹುಷಾರ್! – ಇನ್ನುಮುಂದೆ 500 ರೂ ಅಲ್ಲ, 10 ಸಾವಿರ ರೂಪಾಯಿ ದಂಡ!
ನಮ್ಮ ಮೆಟ್ರೋದಲ್ಲಿದಲ್ಲಿ ಅಸಭ್ಯ ವರ್ತನೆ, ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಲೇ ಇದೆ. ಇದೀಗ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋದಲ್ಲಿ ಅಸಭ್ಯ ವರ್ತನೆಗೆ ಕಡಿವಾಣ ಹಾಕಲು ಹೊಸ ಪ್ಲಾನ್ ವೊಂದನ್ನ ಮಾಡಿದೆ. ಪ್ರಯಾಣಿಕರ ಜೊತೆ ಅಸಭ್ಯ ವರ್ತನೆ ಮಾಡಿದವರಿಗೆ ಭಾರಿ ದಂಡ ವಿಧಿಸಲು ಮುಂದಾಗಿದೆ.
ಇದನ್ನೂ ಓದಿ: ತೋಷಖಾನಾ ಪ್ರಕರಣದಲ್ಲಿ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ದಂಪತಿಗೆ 14 ವರ್ಷ ಜೈಲು!
ಹೌದು, ಮೆಟ್ರೋದಲ್ಲಿ ಮಹಿಳೆಯರಿಗೆ ಸಾಲು ಸಾಲು ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಬಳಿಕ BMRCL ಎಚ್ಚೆತ್ತಕೊಂಡಿದೆ. ಲೈಂಗಿಕ ಕಿರುಕುಳ ನೀಡಿದವರಿಗೆ ದಂಡ ಪರಿಷ್ಕರಣೆ ಮಾಡಲು ಆದೇಶ ಹೊರಡಿಸಿದೆ. ಇನ್ಮೇಲೆ ಮಹಿಳೆಯರ ಮೇಲೆ ಅನುಚಿತ ವರ್ತನೆ ತೋರಿದ್ರೆ 500 ಅಲ್ಲ ಬರೋಬ್ಬರಿ 10000 ದಂಡ ಕಟ್ಬೇಕು ಅಂತಾ ಬಿಎಂಆರ್‌ಸಿಎಲ್ ಆದೇಶ ಹೊರಡಿಸಿದೆ.
ಈ ಹಿಂದೆ ಅನುಚಿತ ವರ್ತನೆ ತೋರಿದ್ರೆ ಮೆಟ್ರೋ ಆಕ್ಟ್ ಪ್ರಕಾರ 500 ರೂಪಾಯಿ ದಂಡ ಹಾಕಲಾಗ್ತಿತ್ತು. ಆದ್ರೆ ಇದೀಗ BMRCL ದಂಡದ ಮೊತ್ತವನ್ನ 10,000 ಕ್ಕೆ ಏರಿಕೆ ಮಾಡಿದೆ.