ನೀರಲ್ಲಿ ಹುಚ್ಚಾಟ ತೋರಿ ಪ್ರಾಣ ಹೋದರೂ ಲೆಕ್ಕಕ್ಕಿಲ್ಲ – ಮೋಜು ಮಸ್ತಿ ನೆಪದಲ್ಲಿ ಜೀವ ಹೋಗಬಹುದು ಹುಷಾರ್..!

ನೀರಲ್ಲಿ ಹುಚ್ಚಾಟ ತೋರಿ ಪ್ರಾಣ ಹೋದರೂ ಲೆಕ್ಕಕ್ಕಿಲ್ಲ – ಮೋಜು ಮಸ್ತಿ ನೆಪದಲ್ಲಿ ಜೀವ ಹೋಗಬಹುದು ಹುಷಾರ್..!

ಮಳೆ ಬಂದಾಗ, ನೀರು ಕಂಡಾಗ, ಜಲಪಾತದ ಬಳಿ ಯುವಕರು ತೋರುವ ಹುಚ್ಚಾಟ ನಿಜಕ್ಕೂ ಗಾಬರಿಯಾಗುತ್ತದೆ. ಈಗಿನ ಯುವಕರು ನೀರೇ ನೋಡಿಲ್ವೇನೋ ಎಂಬಂತೆ ಹುಚ್ಚಾಟ ತೋರುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಉಡುಪಿಯ ಅರಿಶಿನ ಗುಂಡಿ ಜಲಪಾತದ ಬಳಿ ನಿಂತಿದ್ದ ಯುವಕ ಕಾಲು ಜಾರಿ ನೀರಿಗೆ ಬಿದ್ದಿದ್ದ. ಭೋರ್ಗೆರೆಯುವ ಜಲಪಾತದ ಗುಂಡಿಗೆ ಬಿದ್ದ ಶರತ್ ಶವ ಇದುವರೆಗೂ ಸಿಕ್ಕಿಲ್ಲ. ಅಪಾಯ ಇದೆ ಅಂತಾ ಗೊತ್ತಿದ್ದರೂ ಜಲಪಾತದ ಸನಿಹ ಹೋಗಿ ನಿಂತಿದ್ದಲ್ಲದೇ, ಕೊನೆಗೂ ಜೀವಕ್ಕೂ ಕಂಟಕವಾಗಿದೆ. ಈ ನಿದರ್ಶನ ಕಣ್ಣ ಮಂದೆ ಇದ್ದರೂ ಕೆಲವು ಯುವಕರು ಮತ್ತೆ ಮತ್ತೆ ನೀರಲ್ಲಿ ಹುಚ್ಚಾಟ ತೋರಿಸುತ್ತಿದ್ದಾರೆ. ಇದೀಗ ಶಿವಮೊಗ್ಗದಲ್ಲಿ ಯುವಕನೊಬ್ಬ ತುಂಬಿ ಹರಿಯುತ್ತಿರುವ ನದಿಗೆ ಹುಡುಗಾಟಕ್ಕೆ ಜಿಗಿದಿದ್ದಾನೆ.

ಇದನ್ನೂ ಓದಿ: ರೀಲ್ಸ್ ಮಾಡಲು ಹೋಗಿ ದುರಂತ..! -ಜಲಪಾತದಲ್ಲಿ ಜಾರಿ ಬಿದ್ದ ಯುವಕ..! – ನೀರಿನಲ್ಲಿ ಇಂಥಾ ಹುಚ್ಚಾಟ ಬೇಡವೇ ಬೇಡ..!

ಸೇತುವೆ ಮೇಲಿಂದ ಜಿಗಿದು ಸ್ವಲ್ಪ ಹೊತ್ತು ಈಜಿದ್ದಾನೆ. ರಭಸವಾಗಿ ಹರಿಯುತ್ತಿದ್ದ ನೀರಿನ ಹರಿವಿಗೆ ವಿರುದ್ಧ ದಿಕ್ಕಿನಲ್ಲಿ ಈಜುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಯುವಕ ಹಾರಿರುವ ವಿಡಿಯೋ ಸಾಮಾಜಿಕ ಚಾಲತಾಣದಲ್ಲಿ ವೈರಲ್ ಆಗಿದೆ. ಶಿವಮೊಗ್ಗ ನಗರದ ಬಸ್ ನಿಲ್ದಾಣದ ಬಳಿ ಇರುವ ಹೊಸ ಸೇತುವೆ ತಡಗೋಡೆ ಮೇಲೆ ನಿಂತು ಯುವಕನೊಬ್ಬ ನದಿಗೆ ಹಾರಿದ್ದಾನೆ. ಸೇತುವೆ ಮೇಲಿಂದ ಜಿಗಿದು ಸ್ವಲ್ಪ ಹೊತ್ತು ಈಜಿ ಬಳಿಕ ದಡಕ್ಕೆ ತಲುಪಿದ್ದಾನೆ. ಯುವಕ ನದಿಗೆ ಹಾರಿದ್ದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ನದಿಗೆ ಹಾರಿದ ಯುವಕನನ್ನು ಗಂಗಪ್ಪ ಎಂದು ಗುರುತಿಸಲಾಗಿದೆ. ಆದರೆ, ಈ ಯುವಕನ ಹುಚ್ಚಾಟ ಕೆಲ ಕಾಲ ಆತಂಕ ಮೂಡಿಸಿತ್ತು.

ಮತ್ತೊಂದೆಡೆ ಚಾರ್ಮಾಡಿ ಘಾಟ್‌ನಲ್ಲಿ ಗಸ್ತು ತಿರುಗುವ ಪೊಲೀಸರ ಕಣ್ಣುತಪ್ಪಿಸುವ ಪ್ರವಾಸಿಗರು ಹುಚ್ಚಾಟ ಮಾಡುತ್ತಿದ್ದಾರೆ. ಚಾರ್ಮಾಡಿ ಘಾಟ್ ಬಂಡೆಯ ಮೇಲೆ ಪ್ರವಾಸಿಗರು ಹುಚ್ಚಾಟ ಮಾಡುತ್ತಿರುವುದು ಪೊಲೀಸರಿಗೂ ಹೊಸ ತಲೆನೋವಾಗಿ ಪರಿಣಮಿಸಿದೆ. ಅಪಾಯದ ಸ್ಥಳದಲ್ಲಿ ಪ್ರವಾಸಿಗರು ಬಂಡೆಯನ್ನ ಏರುತ್ತಿದ್ದಾರೆ. ಮಳೆಯಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮಿನಿ ಜಲಪಾತಗಳು ಧುಮ್ಮಿಕ್ಕುತ್ತಿವೆ. ಆದರೆ, ಇವು ಅಪಾಯಕಾರಿ ಜಾಗವೂ ಹೌದು. ಇಂತಹ ಅಪಾಯ ಸ್ಥಳದಲ್ಲಿ ನಿಂತು ಪ್ರವಾಸಿಗರು ಹುಚ್ಚಾಟ ಮಾಡುತ್ತಿದ್ದಾರೆ. ನಾಮಫಲಕವಿದ್ದರೂ ಡೋಟ್ ಕೇರ್ ಎಂಬಂತೆ ವರ್ತಿಸುತ್ತಿದ್ದಾರೆ. ನೀರಲ್ಲಿ ಹುಚ್ಚಾಟ ತೋರಬಾರದು. ಅದು ಜೀವಕ್ಕೆ ಕಂಟಕ ಆಗಬಹುದು. ಜೀವ ಹೋಗಿರುವ ಉದಾಹರಣೆಗಳು ಕಣ್ಣಮುಂದೆ ಇದ್ದರೂ ಯುವಕರು ಯಾಕೋ ನಿರ್ಲಕ್ಷ್ಯ ತೋರುತ್ತಿದ್ದಾರೆ.

suddiyaana