ಬೆಟ್ಟಿಂಗ್‌ಗೆ ಗೋಲಿ ಹೊಡೆದ್ರಾ CPY? – ಏರುಪೇರಾಗಿದ್ದೇಗೆ ಬೊಂಬೆನಾಡ ಲೆಕ್ಕ?
ಚನ್ನಪಟ್ಟಣ ಗೆಲ್ಲೋದ್ಯಾರು?

ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಭರಾಟೆ ಮುಗಿದಿದೆ. ಈಗ ಎಲ್ಲರೂ ರಿಸಲ್ಟ್ಗಾಗಿ ಕಾಯುತ್ತಿದ್ದಾರೆ. ಈ ನಡುವೆ ಗೆಲ್ಲುವ ಕುದುರೆ ಯಾರೆಂಬ ಲೆಕ್ಕಾಚಾರ ತೀವ್ರಗೊಂಡಿದೆ. ಅದ್ರಲ್ಲೂ 3 ಕ್ಷೇತ್ರಗಳಲ್ಲಿ ಬೆಟ್ಟಿಂಗ್ ಭರ್ಜರಿಯಾಗಿ ನಡೆಯುತ್ತಿದ್ದು, ಚನ್ನಪಟ್ಟಣ ಕ್ಷೇತ್ರದಲ್ಲಂತೂ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ. ಅದ್ರಲ್ಲೂ ಸಿಪಿ ಯೋಗೇಶ್ವರ್ಗೆ ಗೆಲುವು ಫಿಕ್ಸ್ ಎನ್ನುತ್ತಿದ್ದಾಗಲೇ ನಡೆದ ಎರಡು ಬೆಳವಣಿಗೆ ಜನರ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದೆ. ಒಂದು ಜಮೀರ್ ಮಾತು ಇನ್ನೊಂದು ಸಿಪಿ ಯೋಗೇಶ್ವರ್ ಅವರ ಮಾತು.. ಹಾಗಿದ್ರೆ 3 ಕ್ಷೇತ್ರದಲ್ಲಿ ಹೇಗೆಲ್ಲಾ ಬೆಟ್ಟಿಂಗ್ ನಡೆಯುತ್ತಿದೆ? ಸಿಪಿ ಯೋಗೇಶ್ವರ್ ಒಂದು ಸೋಲಿನ ಹೇಳಿಕೆ ಏನಾಲ್ಲಾ ಉಲ್ಟಾಪಲ್ಟಾ ಮಾಡಿದೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: AUSನಲ್ಲಿ ಟೀಂ ಇಂಡಿಯಾ ಲಾಕ್ ಡೌನ್! – ಕ್ರೀಡಾಂಗಣ ಬಂದ್.. ಫೋನ್ ಬ್ಯಾನ್
ಮತದಾನ ಮುಗಿದ ಬೆನ್ನಲ್ಲೇ ರಿಸಲ್ಟ್ ಲೆಕ್ಕಾಚಾರಗಳು ನಡೆಯುತ್ತಿದ್ದು, ಎಲ್ಲರ ಚಿತ್ತ ಚನ್ನಪಟ್ಟಣ ಬೈಎಲೆಕ್ಷನ್ ರಿಸಲ್ಟ್ ಕಡೆ ನೆಟ್ಟಿದೆ. ಅದ್ರಲ್ಲೂ ಗೊಂಬೆನಾಡಿನಲ್ಲಿ ಈ ಬಾರಿ ದಾಖಲೆ ಪ್ರಮಾಣದ 88.81% ಮತದಾನ ಆಗಿದ್ದು, ಕಳೆದ ಬಾರಿ 85.86% ಮತದಾನ ಆಗಿತ್ತು. ಕಳೆದ ಬಾರಿಗಿಂತ ಈ ಬಾರಿ 3 % ಮತದಾನ ಹೆಚ್ಚಳವಾಗಿದೆ. ಅದ್ರಲ್ಲೂ ಯಾರಿಗೆ ಗೆಲುವು, ಗೆಲ್ಲುವ ಅಂತರ ಎಷ್ಟು? ಇತ್ಯಾದಿ ಆಧಾರದಲ್ಲಿ ಬೆಟ್ಟಿಂಗ್ ನಡೆಯುತ್ತಿದೆ. ಕುತೂಹಲ ಎಂದರೆ ಈ ಮೂರು ಕ್ಷೇತ್ರಗಳಲ್ಲಿ ಮಾತ್ರ ಬೆಟ್ಟಿಂಗ್ ಭರಾಟೆ ನಡೆಯುತ್ತಿಲ್ಲ, ಈ ಚುನಾವಣೆಯ ಬಗ್ಗೆ ಆಸಕ್ತಿ ಹೊಂದಿದ ಇತರ ಜಿಲ್ಲೆಗಳ ಬೆಟ್ಟಿಂಗ್ ದಂದೆಕೋರರು ಬಾಜಿ ಕಟ್ಟಿದ್ದಾರೆ ಎನ್ನಲಾಗುತ್ತಿದೆ..
ಚನ್ನಪಟ್ಟಣದಲ್ಲಿ ಭರ್ಜರಿ ಬಾಜಿ
ಶಿಗ್ಗಾಂವಿ, ಸಂಡೂರು ಕ್ಷೇತ್ರಕ್ಕಿಂತ ಚನ್ನಪಟ್ಟಣವೇ ಎಲ್ಲರ ಫೇವರೆಟ್ ಆಗಿದೆ. ಚನ್ನಪಟ್ಟಣ ಕ್ಷೇತ್ರದ ಬಗ್ಗೆ ಇತರ ಜಿಲ್ಲೆಯ ಜನರೂ ಆಸಕ್ತರಾಗಿದ್ದಾರೆ. ಹೀಗಾಗಿ ಬೆಟ್ಟಿಂಗ್ ನಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ದೊಡ್ಡ ಮಟ್ಟದಲ್ಲೇ ಬಾಜಿ ಕಟ್ಟಲಾಗುತ್ತಿದೆ. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಸಿಪಿ ಯೋಗೇಶ್ವರ್ ಅಖಾಡಲ್ಲಿದ್ದಾರೆ.
ನಿಖಿಲ್ ಹಾಗೂ ಸಿಪಿವೈ ಮೇಲೆ ಕೋಟ್ಯಾಂತರ ರೂಪಾಯಿ ಬೆಟ್ಟಿಂಗ್ ನಡೆಯುತ್ತಿದ್ದು, ಎರಡೂ ಕಡೆಯಿಂದ ಚುನಾವಣೆಯಲ್ಲಿ ಹಣದ ಹೊಳೆಯೇ ಹರದಿದೆ. ಪ್ರತಿ ವೋಟ್ಗೆ 4 ರಿಂದ 6 ಸಾವಿರ ಕೊಟ್ಟಿದ್ದಾರೆಂಬ ಸುದ್ದಿಯೂ ಹರಿದಾಡುತ್ತಿದೆ .ಈ ಹಿನ್ನೆಲೆಯಲ್ಲಿ ಚನ್ನಪಟ್ಟಣದತ್ತ ಬೆಟ್ಟಿಂಗ್ ದಾರರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.
ಚನ್ನಪಟ್ಟಣದ ಲೆಕ್ಕಾಚಾರ ಉಲ್ಟಾಪಲ್ಟಾ
ಚನ್ನಪಟ್ಟಣದಲ್ಲಿ ಎನ್‌ಡಿಎ ವರ್ಸಸ್ ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ. ಹೀಗಾಗಿ ಬೆಟ್ಟಿಂಗ್ ದಾರರು ಗೊಂದಲದಲ್ಲಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವು 50-50 ಆಧಾರದಲ್ಲೇ ಇರುವುದರಿಂದ ಬೆಟ್ಟಿಂಗ್ ನಲ್ಲೂ ಇದೇ ನಂಬರ್ ನಡಿಯುತ್ತಿದೆ ಎನ್ನಲಾಗುತ್ತಿದೆ. ಮೊದ ಮೊದಲು ಈ ಬಾರಿ ಸಿಪಿ ಯೋಗೇಶ್ವರ್ಗೆ ಗೆಲುವು ಎನ್ನಲಾಗುತಿತ್ತು. ಆದ್ರೆ ಕಾಂಗ್ರೆಸ್ ಸಚಿವರ ಜಮೀರ್ ಅಹ್ಮದ್ ಖಾನ್ ಹೇಳಿಕೆಯಿಂದ ಒಕ್ಕಲಿಗ ಬೆಲ್ಟ್ ಫುಲ್ ಟರ್ನ್ ಆಗಿದ್ದು, ನಿಖಿಲ್ಗೆ ಪ್ಲಸ್ ಆಗಿದೆ ಅನ್ನೋ ಮಾತು ಕೇಳಿ ಬರ್ತಿದೆ. ಈ ಲೆಕ್ಕಾಚಾರದಿಂದ ನಿಖಿಲ್ ಕುಮಾರಸ್ವಾಮಿಗೆ ಸಾಧರಣ ಗೆಲುವು ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನು ಸ್ವತಃ ಸಿಪಿವೈ ಒಪ್ಪಿಕೊಂಡಿದ್ದಾರೆ. ಇನ್ನು ಚನ್ನಪಟ್ಟಣದಲ್ಲಿ ಗೆಲ್ಲುವ ಬಗ್ಗೆ ಪೂರ್ತಿ ವಿಶ್ವಾಸವನ್ನು ಅವರು ವ್ಯಕ್ತಪಡಿಸಿಲ್ಲ, ಸಿಪಿವೈ ಈ ಹೇಳಿಕೆ ಬೆಟ್ಟಿಂಗ್ ಮೇಲೂ ಪ್ರಭಾವ ಬೀರಿದೆ ಎನ್ನಲಾಗುತ್ತಿದೆ.
ಸಂಡೂರು, ಶಿಗ್ಗಾಂವಿಯಲ್ಲಿ ಯಾರ ಪರ ಒಲವು
ಇನ್ನು ಕಾಂಗ್ರೆಸ್ ಭದ್ರಕೋಟೆಯಾಗಿರುವ ಸಂಡೂರಿನಲ್ಲಿ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯತ್ತ ಬೆಟ್ಟಿಂಗ್ ವಲವು ವ್ಯಕ್ತವಾಗುತ್ತಿದೆ. ಅನ್ನಪೂರ್ಣ ಅವರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಹೆಚ್ಚಿನ ಬೆಟ್ಟಿಂಗ್ ನಡೆಯುತ್ತಿದೆ. 70% ಬೆಟ್ಟಿಂಗ್ ಅನ್ನಪೂರ್ಣ ಪರವಾಗಿ ಇದೆ ಎನ್ನಲಾಗುತ್ತಿದೆ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇದ್ದರೂ, ಕಾಂಗ್ರೆಸ್ ಆಂತರಿಕ ಜಗಳ, ಕಿತ್ತಾಟ ಬಿಜೆಪಿಗೆ ಲಾಭವಾಗಿದೆ ಎಂಬ ಅಭಿಪ್ರಾಯ ಇದೆ. ಭರತ್ ಬೊಮ್ಮಾಯಿ ಅವರ ಪರವಾಗಿ ಬೆಟ್ಟಿಂಗ್ ಒಲವು ಕಾಣಿಸುತ್ತಿದೆ ಎಂಬ ಮಾಹಿತಿ ಇದೆ.
ಬೆಟ್ಟಿಂಗ್ ಕಾನೂನು ಬಾಹಿರವಾದರೂ ಚುನಾವಣೆಯ ಸಂದರ್ಭದಲ್ಲಿ ಗೌಪ್ಯವಾಗಿ ನಡೆಯುತ್ತಿದೆ. ಕೆಲವು ಕಾರ್ಯಕರ್ತರ ಮಟ್ಟದಲ್ಲಿ ಬೆಟ್ಟಿಂಗ್ ನಡೆದರೆ, ಮತ್ತೆ ಕೆಲವರು ತಮ್ಮ ವೈಯಕ್ತಿಕ ಆಸಕ್ತಿಯ ಮೇಲೆ ಬೆಟ್ಟಿಂಗ್ ನಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಚುನಾವಣಾ ಸಮೀಕ್ಷೆಗಳು, ಆಂತರಿಕ ವರದಿಗಳು ಹಾಗೂ ಮಾಧ್ಯಮಗಳ ವರದಿಗಳು ಬೆಟ್ಟಿಂಗ್ ಮೇಲೆ ಪರಿಣಾಮ ಬೀರುತ್ತಿದ್ದು, ಒಂದು ಸಾವಿರಿದಿಂದ 1 ಲಕ್ಷದ ತನಕ ಬೆಟ್ಟಿಂಗ್ ನಡೆಯುತ್ತಿದೆ.