ರಜತ್ ರೀ ಎಂಟ್ರಿ.. ಶೆಫರ್ಡ್ ಬೇಕಾ? – ಕೊಹ್ಲಿ ಜೊತೆ ಓಪನರ್ ಯಾರು?
SRH ಬೇಟೆಗೆ ಹೀಗಿದೆ ಪ್ಲೇಯಿಂಗ್ 11

ರಜತ್ ರೀ ಎಂಟ್ರಿ.. ಶೆಫರ್ಡ್ ಬೇಕಾ? – ಕೊಹ್ಲಿ ಜೊತೆ ಓಪನರ್ ಯಾರು?SRH ಬೇಟೆಗೆ ಹೀಗಿದೆ ಪ್ಲೇಯಿಂಗ್ 11

ಪ್ಲೇ ಆಫ್ಸ್​ ಫೈಟ್ ಟಿಕೆಟ್ ಗಿಟ್ಟಿಸಿಕೊಂಡಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳು ಶುಕ್ರವಾರ ಮುಖಾಮುಖಿ ಆಗಲಿವೆ. ಲೀಗ್ ಹಂತದಲ್ಲಿ ಎರಡೂ ತಂಡಗಳಿಗೂ ಇದು ಕೊನೇ ಮ್ಯಾಚ್. ಹೈದ್ರಾಬಾದ್ ವಿರುದ್ಧ ಗೆದ್ದು ಟಾಪ್-1ನಲ್ಲೇ ಕಂಟಿನ್ಯೂ ಆಗೋದ್ರ ಜೊತೆಗೆ ಕ್ವಾಲಿಫೈಯರ್ 1 ಟಾರ್ಗೆಟ್ ಇಟ್ಕೊಂಡಿರೋ ಆರ್​ಸಿಬಿ ಈ ಪಂದ್ಯವನ್ನ ಗೆಲ್ಲಲೇಬೇಕಿದೆ.

ಇದನ್ನೂ ಓದಿ : 14ನೇ ಪಂದ್ಯಕ್ಕೆ RCBಗೆ ಹೊಸ ಬೌಲರ್ ಎಂಟ್ರಿ – ಪ್ಲೇಯಿಂಗ್ 11ನಲ್ಲಿ ಸಿಗುತ್ತಾ ಚಾನ್ಸ್‌?

2026ರ ಐಪಿಎಲ್ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದ್ದು ಉಳಿದಿರೋದು ಇನ್ನು ಐದೇ ಮ್ಯಾಚ್. ಪ್ರತೀ ತಂಡಗಳು 13 ಪಂದ್ಯಗಳನ್ನ ಕಂಪ್ಲೀಟ್ ಮಾಡಿದ್ದು ಗುರುವಾರದಿಂದ ಲೀಗ್ ಹಂತದ ತಮ್ಮ ಕೊನೇ ಪಂದ್ಯಗಳನ್ನ ಆಡಲಿವೆ. ಈ ಪೈಕಿ ಶುಕ್ರವಾರ ಬೆಂಗಳೂರು ಹಾಗೂ ಹೈದ್ರಾಬಾದ್ ತಂಡಗಳು ಮುಖಾಮುಖಿ ಆಗಲಿವೆ. ಪ್ಲೇ ಆಫ್ಸ್ ಸುತ್ತಿಗೆ ಸೆಲೆಕ್ಟ್ ಆಗಿದ್ರೂ ಈ ಬ್ಯಾಟಲ್ ಗೆಲ್ಲೋದು ಇಬ್ಬರಿಗೂ ತುಂಬಾನೇ ಮುಖ್ಯ. ಹೀಗಾಗಿ ಈ ಪಂದ್ಯಕ್ಕೆ ಬಲಿಷ್ಠ ಪಡೆಯನ್ನೇ ಎರಡೂ ಕಡೆ ಕಣಕ್ಕಿಳಿಸ್ತಾರೆ. ಅದ್ರಲ್ಲೂ ಆರ್​ಸಿಬಿಯಲ್ಲಿ ಮೇಜರ್ ಸರ್ಜರಿ ಆಗೋದು ಪಕ್ಕಾ ಇದೆ.

ಹೈದ್ರಾಬಾದ್ ವಿರುದ್ಧವೂ ಆಡಲ್ಲ ಸಾಲ್ಟ್.. ಕೊಹ್ಲಿ ಜೊತೆಗಾರ ಯಾರು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮೊದಲ 6 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಸ್ಪೋಟಕ ಓಪನರ್ ಫಿಲ್ ಸಾಲ್ಟ್ ಆ ನಂತ್ರ ಇಂಜುರಿಗೆ ಒಳಗಾಗಿದ್ರು. ಆರು ಪಂದ್ಯಗಳಲ್ಲಿ, ಸಾಲ್ಟ್ 33.67 ರ ಸರಾಸರಿಯಲ್ಲಿ 202 ರನ್ ಗಳಿಸಿ ಪವರ್ ಪ್ಲೇನಲ್ಲಿ ಬಿಗ್ ಇಂಪ್ಯಾಕ್ಟ್ ಮಾಡಿದ್ರು. ಆ ನಂತ್ರ ಫೀಲ್ಡಿಂಗ್ ವೇಳೆ ಬೆರಳಿನ ಗಾಯಕ್ಕೆ ತುತ್ತಾಗಿ ಟ್ರೀಟ್ಮೆಂಟ್​ಗೆಂದು ಇಂಗ್ಲೆಂಡ್​ಗೆ ತೆರಳಿದ್ರು. ಒಂದು ತಿಂಗಳಿಂದ ಮೈದಾನದಿಂದ ಹೊರಗಿರೋ ಸಾಲ್ಟ್ ನೆಕ್ಸ್​ಟ್ ವೀಕ್ ಸಾಲ್ಟ್ ಆರ್​ಸಿಬಿ ಕ್ಯಾಂಪ್ ಸೇರಿಕೊಳ್ಳುವ ಬಗ್ಗೆ ವರದಿಯಾಗಿದೆ. ಆದ್ರೆ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ನಾಳೆ ಆಡಲ್ಲ. ಸೋ ಸಾಲ್ಟ್ ಆಡಲ್ಲ ಅಂದ್ರೆ ಮತ್ತೆ ಇಲ್ಲಿ ಆರ್​ಸಿಬಿ ಕೊಹ್ಲಿ ಜೊತೆ ಬೆಥೆಲ್​ರನ್ನೇ ಕಂಟಿನ್ಯೂ ಮಾಡುತ್ತಾ ಅನ್ನೋ ಪ್ರಶ್ನೆಗಳಿವೆ. ಯಾಕಂದ್ರೆ ಬೆಥೆಲ್​ಗೆ ಅವಕಾಶ ಕೊಟ್ರೂ ಬಳಸಿಕೊಳ್ತಿಲ್ಲ. ಏಳು ಪಂದ್ಯಗಳಲ್ಲಿ 13.71 ರ ಸರಾಸರಿಯಲ್ಲಿ ಕೇವಲ 96 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಇದು ತಂಡಕ್ಕೆ ದೊಡ್ಡ ಹೊಡೆತ ನೀಡ್ತಿದೆ. ಹೀಗಾಗಿ ಹೈದ್ರಾಬಾದ್ ವಿರುದ್ಧ ಮಸ್ಟ್ ವಿನ್ ಗೇಮ್ ಆಗಿರೋದ್ರಿಂದ ಓಪನಿಂಗ್ ಪೇರ್ ಚೇಂಜ್ ಮಾಡೋ ಅವಕಾಶವೂ ಇದೆ. ಅದೂ ಅಲ್ದೇ ಕಳೆದ ಪಂದ್ಯದಲ್ಲಿ ಅಂದ್ರೆ ಪಂಜಾಬ್ ವಿರುದ್ಧದ ಮ್ಯಾಚಲ್ಲಿ ನಾಯಕ ರಜತ್ ಪಾಟಿದಾರ್ ಕೂಡ ಆಡಿರಲಿಲ್ಲ. ಈಗ ಪಾಟಿದಾರ್ ಹೈದ್ರಾಬಾದ್ ವಿರುದ್ಧ ರೀ ಎಂಟ್ರಿ ಕೊಡ್ತಾರೆ. ಹೀಗಾಗಿ ಪ್ಲೇಯಿಂಗ್ 11ನಲ್ಲಿ ಬದಲಾವಣೆ ಅಂತೂ ಪಕ್ಕಾ.

ಹೀಗಿರುತ್ತಾ ಪ್ಲೇಯಿಂಗ್ 11?

ವೆಂಕಟೇಶ್ ಅಯ್ಯರ್

ವಿರಾಟ್ ಕೊಹ್ಲಿ

ದೇವದತ್ ಪಡಿಕ್ಕಲ್

ರಜತ್ ಪಾಟಿದಾರ್

ಜಿತೇಶ್ ಶರ್ಮಾ

ಟಿಮ್ ಡೇವಿಡ್

ಕೃನಾಲ್ ಪಾಂಡ್ಯ

ಜೋಶ್ ಹೇಜಲ್ ವುಡ್

ಜೇಕಬ್ ಡಫಿ

ಭುವನೇಶ್ವರ್ ಕುಮಾರ್

ರಸಿಕ್ ಸಲಾಂ ದಾರ್

ರೊಮ್ಯಾರಿಯೋ ಶೆಫರ್ಡ್

ಇಲ್ಲಿ ನಾಲ್ವರು ಫಾರಿನರ್ಸ್ ಆಡಲೇಬೇಕು ಅನ್ನೋ ರೂಲ್ ಇರೋದ್ರಿಂದ ಟಿಮ್ ಡೇವಿಡ್, ಡಫಿ, ಹೇಜಲ್​ವುಡ್ ಹಾಗೇ ಶೆಫರ್ಡ್​ನ ಆಡಿಸಬಹುದು. ಡಫಿಯನ್ನ ಬೌಲಿಂಗ್​ಗೆ ಬಳಸಿಕೊಂಡು ದೇವದತ್ ಪಡಿಕ್ಕಲ್​ರನ್ನ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ ಆಡಿಸಬಹುದು. ಌಂಡ್ ಡಫಿ ಮತ್ತು ಶೆಫರ್ಡ್ ಈಗಾಗ್ಲೇ ಹೈದ್ರಾಬಾದ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಬಿಗ್ ಇಂಪ್ಯಾಕ್ಟ್ ಮಾಡಿದ್ರು. ಡಫಿ 4 ಓವರ್​ನಲ್ಲಿ ಕೇವಲ 22 ರನ್ ನೀಡಿ 3 ಬಿಗ್ ವಿಕೆಟ್ ತೆಗೆದಿದ್ರು. ಶೆಫರ್ಡ್ ಸ್ವಲ್ಪ ಎಕ್ಸ್​ಪೆನ್ಸಿವ್ ಆಗಿದ್ರೂ ಅವ್ರೂ ಕೂಡ 3 ವಿಕೆಟ್ ತಗೊಂಡಿದ್ರು. ಹೀಗಾಗಿ ಇವ್ರಿಬ್ಬರು ಮತ್ತೆ ಇಂಪ್ಯಾಕ್ಟ್ ಮಾಡ್ಬೋದು. ಌಕ್ಚುಲಿ ಇಲ್ಲಿ ಪ್ಲೇಯಿಂಗ್ 11ನಲ್ಲಿ ಜೇಕಬ್ ಬೆಥೆಲ್ ಸಮಸ್ಯೆ ಆಗ್ತಿರುವಂಥದ್ದು. ಸೋ ಅದಕ್ಕೆ ಸಲ್ಯೂಷನ್ ಹುಡುಕ್ಬೇಕು ಅಷ್ಟೇ. ಇಲ್ಲ ಬೆಥೆಲ್ ಅಥವಾ ಕಾಕ್ಸ್ ಆಡಿಸ್ತೀವಿ ಅಂದ್ರೆ ಆಗ ಶೆಫರ್ಡ್​​ರನ್ನ ಹೊರಗಿಡಬಹುದು. ವೆಂಕಿ ಚೆನ್ನಾಗಿ ಆಡ್ತಿರೋದ್ರಿಂದ ಅವ್ರನ್ನ ಹೊರಗಿಡೋದು ಸ್ವಲ್ಪ ರಿಸ್ಕ್ ಆಗ್ಬೋದು. ಸೋ ಆರ್​ಸಿಬಿಗೆ ಆಪ್ಶನ್ಸ್ ಅಂತೂ ಇದೆ. ಬಟ್ ಫೈನಲ್ ಡಿಸಿಷನ್ ಲೆಕ್ಕಾಚಾರ ಹೇಗಿರುತ್ತೆ ಅನ್ನೋದೇ ಈಗಿರೋ ಕುತೂಹಲ. ಅದೂ ಅಲ್ದೇ ಈ ಪಂದ್ಯ ಎರಡೂ ತಂಡಗಳ ಪಾಲಿಗೆ ಮಸ್ಟ್ ವಿನ್ ಮ್ಯಾಚ್ ಆಗುತ್ತೆ.

ಪ್ಲೇ ಆಫ್ಸ್ ಗೇರಿದ್ರೂ ಮಸ್ಟ್ ವಿನ್ ಮ್ಯಾಚ್!

ಲೀಗ್ ಹಂತದ ಕೊನೇ ಪಂದ್ಯ ಗೆದ್ದು ಫಿನಿಶ್ ಮಾಡೋ ಟಾರ್ಗೆಟ್

ಪ್ಲೇ ಆಫ್ಸ್ ಪಂದ್ಯಗಳಿಗೂ ಮುನ್ನ ಗೆದ್ದರೆ ಕಾನ್ಫಿಡೆನ್ಸ್ ಲೆವೆಲ್ ಜಾಸ್ತಿ

ಕ್ವಾಲಿಫೈಯರ್ 1 ಟಿಕೆಟ್ ಗಿಟ್ಟಿಸಿಕೊಳ್ಳೋಕೆ ಗೆಲುವು ಅನಿವಾರ್ಯ

ಆರ್ ಸಿಬಿಗೆ ಲೀಗ್ ಹಂತದಲ್ಲಿ ಅತೀ ಹೆಚ್ಚು ಪಂದ್ಯಗಳನ್ನ ಗೆಲ್ಲಬೇಕು

ಉದ್ಘಾಟನಾ ಪಂದ್ಯದ ಸೋಲಿನ ಸೇಡಿಗಾಗಿ ಕಾಯ್ತಿರೋ ಹೈದ್ರಾಬಾದ್

Shantha Kumari

Leave a Reply

Your email address will not be published. Required fields are marked *