ವೀಳ್ಯದೆಲೆ ಮೇಲೆ ದೀಪವನ್ನು ಇಟ್ಟು ಬೆಳಗಿಸಿದ್ರೆ ಹೆಚ್ಚುವುದು ಧನಾತ್ಮಕ ಶಕ್ತಿ

ವೀಳ್ಯದೆಲೆ ಮೇಲೆ ದೀಪವನ್ನು ಇಟ್ಟು ಬೆಳಗಿಸಿದ್ರೆ ಹೆಚ್ಚುವುದು ಧನಾತ್ಮಕ ಶಕ್ತಿ

‘ವೀಳ್ಯದ ಎಲೆ’ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ವಿವಾಹ, ವ್ರತ, ಹೋಮ-ಹವನಗಳು ಮತ್ತು ದೇವತೆಗಳ ಆರಾಧನೆಯಂತಹ ಪ್ರತಿಯೊಂದು ಶುಭ ಸಮಾರಂಭಗಳಲ್ಲಿಯೂ ವೀಳ್ಯದ ಎಲೆ ಕಡ್ಡಾಯ. ಅದೇ ರೀತಿ, ವೀಳ್ಯದ ಎಲೆಯ ಮೇಲೆ ದೀಪವನ್ನು ಇಟ್ಟು ಬೆಳಗಿಸುವ ಪದ್ಧತಿಯು ಅತ್ಯಂತ ಪ್ರಾಚೀನ ಹಾಗೂ ಮಂಗಳಕರವಾದ ಆಚರಣೆಯಾಗಿದೆ.

ಸ್ವಚ್ಛವಾದ ಹಾಗೂ ಎಲ್ಲೂ ಹರಿಯದ  ವೀಳ್ಯದ ಎಲೆಯನ್ನು ಆರಿಸಿಕೊಳ್ಳಬೇಕು. ಎಲೆಯ ಮೇಲೆ ಸಣ್ಣ ಮಣ್ಣಿನ ದೀಪವನ್ನು ಇಟ್ಟು, ಶುದ್ಧ ಹಸುವಿನ ತುಪ್ಪ ಅಥವಾ ಎಳ್ಳೆಣ್ಣೆಯನ್ನು ಬಳಸಿ ದೀಪವನ್ನು ಬೆಳಗಿಸಲಾಗುತ್ತದೆ. ನಂತರ ಆ ದೀಪವನ್ನು ಪೂಜಾ ಮಂದಿರದಲ್ಲಿಟ್ಟು, ಇಷ್ಟದೇವತೆಯನ್ನು ಸಂಪೂರ್ಣ ಭಕ್ತಿಶ್ರದ್ಧೆಗಳಿಂದ ಪ್ರಾರ್ಥಿಸಬೇಕು.

ಇದನ್ನೂ ಓದಿ: ಹಳೇ ಬಟ್ಟೆ, ಒಡೆದ ಪಾತ್ರೆ ಸೇರಿ 5 ಈ ವಸ್ತುಗಳನ್ನ ಶುಕ್ರವಾರ ಮನೆಯಿಂದ ಹೊರ ಹಾಕಿ

ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ವೀಳ್ಯದ ಎಲೆಯ ಮೇಲೆ ದೀಪ ಹಚ್ಚುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗಿ, ಧನಾತ್ಮಕ ಅಥವಾ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ಮನೆಯವರಲ್ಲಿರುವ ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗಿ ಮಾನಸಿಕ ಪ್ರಶಾಂತತೆ ಲಭಿಸುತ್ತದೆ. ಅಷ್ಟೇ ಅಲ್ಲದೆ, ಕುಟುಂಬದ ಸದಸ್ಯರ ನಡುವೆ ಪ್ರೀತಿ, ವಾತ್ಸಲ್ಯ ಹಾಗೂ ಐಕ್ಯತೆ ಹೆಚ್ಚಿ, ಗೃಹಛಿದ್ರಗಳು ನಿವಾರಣೆಯಾಗುತ್ತವೆ. ಜೀವನದ ದಾರಿಯಲ್ಲಿ ಬರುವ ಅಡೆತಡೆಗಳು ತೊಲಗಿ, ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ವಿಶೇಷವಾಗಿ ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆ ಮತ್ತು ಪೌರ್ಣಮಿಯಂತಹ ಪವಿತ್ರ ದಿನಗಳಲ್ಲಿ ಈ ಪೂಜೆಯನ್ನು ಮಾಡುವುದು ಅತ್ಯಂತ ಫಲದಾಯಕ ಎಂದು ಹೇಳಲಾಗುತ್ತದೆ.

Kishor KV

Leave a Reply

Your email address will not be published. Required fields are marked *