ಮುದ್ದಿನ ಶ್ವಾನಕ್ಕೆ ಸೀಮಂತ ಸಂಭ್ರಮ – ಗರ್ಭಿಣಿ ನಾಯಿಗೆ ನೆಟ್ಟಿಗರಿಂದ ಶುಭ ಹಾರೈಕೆ

ಮುದ್ದಿನ ಶ್ವಾನಕ್ಕೆ ಸೀಮಂತ ಸಂಭ್ರಮ –  ಗರ್ಭಿಣಿ ನಾಯಿಗೆ ನೆಟ್ಟಿಗರಿಂದ ಶುಭ ಹಾರೈಕೆ

ಕೆಲವರು ಸಾಕುಪ್ರಾಣಿಗಳನ್ನ ಬರೀ ಸಾಕುವುದಷ್ಟೇ ಅಲ್ಲ. ತಮ್ಮ ಮನೆಯ ಸದಸ್ಯನಂತೆಯೇ ಪ್ರೀತಿಯಿಂದ ಕಾಣುತ್ತಾರೆ. ಮನೆ ಮಕ್ಕಳಂತೆ ಕಾಳಜಿ ಮಾಡ್ತಾರೆ. ಇನ್ನು ಶ್ವಾನ ಪ್ರಿಯರ ಕಥೆಯಂತೂ ಕೇಳುವುದೇ ಬೇಡ. ಅವ್ರಿಗೆ ಮುದ್ದು ಮಾಡಲು ಶ್ವಾನ ಬೇಕು. ತಾವು ಸಾಕಿದ ಮುದ್ದಾದ ನಾಯಿ ಜೊತೆಯಲ್ಲೇ ಇರಬೇಕು.  ಪ್ರೀತಿಯ ಪಪ್ಪಿ ಏನ್ ಮಾಡಿದರೂ ಚೆಂದವೇ. ಹಾಗೆಯೇ ಇಲ್ಲೊಬ್ಬರು ಹೆಣ್ಣು ಶ್ವಾನವನ್ನು ಸಾಕಿದ್ದರು. ಅವರ ಪ್ರೀತಿಯ ಶ್ವಾನ ಗರ್ಭ ಧರಿಸಿದೆ. ಹೀಗಾಗಿ ತುಂಬಾ ಮುತುವರ್ಜಿ ವಹಿಸಿ ಗರ್ಭಿಣಿ ಶ್ವಾನದ ಆರೈಕೆ ಮಾಡಿದ್ದಲ್ಲದೇ, ಈಗ ಸೀಮಂತ ಮಾಡಿ ಬೆರಗು ಮೂಡಿಸಿದ್ದಾರೆ.

ಇದನ್ನೂ ಓದಿ :   ಮಕ್ಕಳಿಂದ ಮೊಬೈಲ್ ದೂರವಿರಿಸಲು ಪೋಷಕರಿಂದ ಲಿಖಿತ ಆಶ್ವಾಸನೆ -ಶಾಲೆಗಳ ಕ್ರಮಕ್ಕೆ ಉತ್ತಮ ಸ್ಪಂದನೆ

ಸುಜಾ ಹೌಸ್‌ಮೇಟ್ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಹಿಳೆಯೊಬ್ಬರು ತನ್ನ ಮುದ್ದಿನ ನಾಯಿಗೆ ಸೀಮಂತ ಮಾಡಿರುವ ವೀಡಿಯೋವನ್ನ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಮಹಿಳೆ ಶ್ವಾನಕ್ಕೆ ಹಾರ ಹಾಕಿದ್ದಾರೆ. ಹಣೆಗೆ ಸಿಂಧೂರವಿಟ್ಟಿದ್ದಾರೆ. ಚೆಂದನೆಯ ಬಟ್ಟೆ ತೊಡಿಸಿ ಖುಷಿಪಟ್ಟಿದ್ದಾರೆ. ಗರ್ಭಿಣಿ ಶ್ವಾನಕ್ಕೆ ಇಷ್ಟವಾದ ಅಡುಗೆ ಮಾಡಿ ಬಳಸಿದ್ದಾರೆ. ಈ ಮೂಲಕ ಮುದ್ದು ನಾಯಿಗೆ ಬಯಕೆ ತೀರಿಸುವ ಪ್ರಯತ್ನ ಮಾಡಿದ್ದಾರೆ. ಶ್ವಾನಕ್ಕೆ ಮಾಡಿರುವ ಸೀಮಂತದ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಗರ್ಭಿಣಿ ನಾಯಿಗೆ ಶುಭಾಶಯ ಕೋರುತ್ತಿದ್ದಾರೆ.

suddiyaana