ವೈಟ್, ಬ್ರೌನ್ ರೈಸ್ ಅಲ್ಲ.. ಮಧುಮೇಹ ರೋಗಿಗಳಿಗೆ ಈ ರೈಸ್ ಬೆಸ್ಟ್!

diabetes control rice:
ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಹೆಚ್ಚಾಗಲು ಆರಂಭವಾಗಿದ್ದರಿಂದ ಎಲ್ಲರೂ ಪೌಷ್ಟಿಕ ಆಹಾರಗಳನ್ನು ಹುಡುಕುತ್ತಿದ್ದಾರೆ ಹಾಗೂ ಖರೀದಿಸುತ್ತಿದ್ದಾರೆ. ಅದರಲ್ಲಿ ಅಕ್ಕಿಯು ಮುಂಚೂಣಿಯಲ್ಲಿದೆ. ನಿಯಮಿತವಾಗಿ ಬಿಳಿ ಅಕ್ಕಿಯನ್ನು ಬೇಯಿಸಿ ತಿನ್ನುತ್ತಿದ್ದ ಜನರು, ಈಗ ತಮ್ಮ ಆರೋಗ್ಯವನ್ನು ಪರಿಗಣಿಸಿ ಇತರೆ ಆರೋಗ್ಯಕರ ಅಕ್ಕಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಮಧುಮೇಹ ರೋಗಿಗಳಿಗೆ ಯಾವುದು ಬೆಸ್ಟ್ ಅನ್ನೋ ಗೊಂದಲ ಅನೇಕರಲ್ಲಿದೆ.
ಇದನ್ನೂ ಓದಿ: ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಡ್ರಿಂಕ್ ಬೆಸ್ಟ್! – ಮಳೆಗಾಲಕ್ಕೆ ಈ ಪಾನೀಯ ಬೆಸ್ಟ್!
ಬಿಳಿ ಅಕ್ಕಿಯು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು, ಕಾರ್ಬೋಹೈಡ್ರೇಟ್ ಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ, ಇದರ ಸೇವನೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗೇ ಮಧುಮೇಹಿಗಳಿಗೆ ಅನ್ನ ಸೇವನೆ ಉತ್ತಮವಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಮಧುಮೇಹಿಗಳಿಗೂ ಅನ್ನ ಸೇವಿಸಬೇಕೆಂದು ಆಸೆ ಇರುತ್ತದೆ. ಈ ಒಂದು ಅಕ್ಕಿಯನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.
ಇತ್ತೀಚೆಗೆ, ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ ಇನ್ ಸೈನ್ಸ್ ಅಂಡ್ ಟೆಕ್ನಾಲಜಿ ಅಧ್ಯಯನವನ್ನು ನಡೆಸಿತು. ಈ ಅಧ್ಯಯನದಲ್ಲಿ ಅಸ್ಸಾಂನಲ್ಲಿ ಬೆಳೆಯುವ ಜೋಹಾ ಅಕ್ಕಿಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದಿಲ್ಲ ಎಂದು ತಿಳಿದುಬಂದಿದೆ. ಮಧುಮೇಹವನ್ನು ನಿಯಂತ್ರಣದಲ್ಲಿಡುವ ಈ ಜೋಹಾ ಅಕ್ಕಿಯನ್ನು ಅಸ್ಸಾಂನ ಗಾರೋ ಬೆಟ್ಟಗಳಲ್ಲಿ ಬೆಳೆಯಲಾಗುತ್ತದೆ.
ಜೋಹಾ ಅಕ್ಕಿಯ ಸೇವನೆಯಿಂದ ಸಕ್ಕರೆ ಮಟ್ಟ ಮತ್ತು ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು. ಚಳಿಗಾಲದಲ್ಲಿ ಅಸ್ಸಾಂನಲ್ಲಿ ಈ ಅಕ್ಕಿಯನ್ನು ಬೆಳೆಯುವ ಅನೇಕ ಜನರು ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಅಧ್ಯಯನವು ಜೋಹಾ ಅಕ್ಕಿಯ ಪೌಷ್ಟಿಕಾಂಶದ ಗುಣಲಕ್ಷಣಗಳನ್ನು ಸಹ ವಿಶ್ಲೇಷಿಸಿದೆ. ಜೋಹಾ ಅಕ್ಕಿಯಲ್ಲಿ ಕಂಡುಬರುವ ಅಪರ್ಯಾಪ್ತ ಕೊಬ್ಬಿನಾಮ್ಲಗಳು ಅಂದರೆ ಒಮೆಗಾ-6 ಮತ್ತು ಒಮೆಗಾ-3 ಅನೇಕ ಶಾರೀರಿಕ ಪರಿಸ್ಥಿತಿಗಳನ್ನು ಗುಣಪಡಿಸುತ್ತದೆ. ಈ ಅಕ್ಕಿಯ ಹೊಟ್ಟುಗಳಿಂದ ಎಣ್ಣೆಯನ್ನು ಸಹ ತಯಾರಿಸಲಾಗುತ್ತದೆ.
ಜೋಹಾ ಅಕ್ಕಿ ಬಾಸ್ಮತಿ ಅಕ್ಕಿಗೆ ಸಮನಾಗಿರುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕೆ ಜಿಐ ಟ್ಯಾಗ್ ನೀಡಲಾಗಿದೆ. ಇದರ ಸುವಾಸನೆಯು ಬಾಸ್ಮತಿ ಅಕ್ಕಿಯಂತಲ್ಲ. ಇದು ತನ್ನ ವಿಶಿಷ್ಟ ರುಚಿ ಮತ್ತು ಪರಿಮಳಕ್ಕಾಗಿ ಭಾರತದಾದ್ಯಂತ ಪ್ರಸಿದ್ಧವಾಗಿದೆ. ಇದು ಸಸ್ಯಾಹಾರಿಗಳಿಗೆ ಸಸ್ಯ ಆಧಾರಿತ ಪ್ರೋಟೀನ್ ನ ಮೂಲವಾಗಿ ಕಾರ್ಯನಿರ್ವಹಿಸುತ್ತದೆ.

ನೋಡಿರಿ

