ಪದೇ ಪದೆ ಆರೋಗ್ಯ ಸಮಸ್ಯೆ ಕಾಡುತ್ತಿದೆಯಾ? – ಹಾಗಾದ್ರೆ ನೀವು ಊಟದಲ್ಲಿ ಈ ಬದಲಾವಣೆ ಮಾಡಿಕೊಳ್ಳಿ!

ಈಗೀಗ ಕೆಲವರಿಗೆ ಏನು ತಿಂದ್ರೂ ಆಗಲ್ಲ. ಮನೆಯಲ್ಲಿ ಊಟ ಸೇವಿಸ್ರೂ ಅನಾರೋಗ್ಯ ಅನೇಕರನ್ನ ಕಾಡುತ್ತಿದೆ. ಟ್ರೀಟ್ಮೆಂಟ್ ತೆಗೆದುಕೊಂಡ್ರೂ ಕೂಡ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಮುಂದೇನು ಮಾಡೋದು ಎಂಬ ಚಿಂತೆ ಅನೇಕರನ್ನ ಕಾಡ್ತಿದೆ. ಇದೀಗ ಈ ಆರೋಗ್ಯ ಸಮಸ್ಯೆಯಿಂದ ಪಾರಾಗಲು ಖ್ಯಾತ ಪೌಷ್ಟಿಕತಜ್ಞೆ ನಮಾಮಿ ಅಗರ್ವಾಲ್ ಹೆಲ್ತ್ ಟಿಪ್ಸ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಪೇರಳೆ ಹಣ್ಣು Vs ಬಾಳೆಹಣ್ಣು.. ಆರೋಗ್ಯಕ್ಕೆ ಯಾವುದು ಬೆಸ್ಟ್!
ಮನೆಯಲ್ಲಿ ಊಟ ಮಾಡಿದ್ರೂ ಅನೇಕರಿಗೆ ಆರೋಗ್ಯ ಸಮಸ್ಯೆ ತಪ್ಪುತ್ತಿಲ್ಲ ಎಂಬ ಮಾತು ಇತ್ತೀಚೆಗೆ ಹೆಚ್ಚಾಗಿ ಕೇಳುತ್ತಿದ್ದೇವೆ. ಆದ್ರೆ ನಾವು ಯಾವ ಆಹಾರ ಸೇವಿಸುತ್ತೇವೆ? ಹೇಗೆ ಸೇವಿಸುತ್ತೇವೆ ಅನ್ನೋದು ಮುಖ್ಯ. ಆರೋಗ್ಯಕರ ಆಹಾರ ಎನ್ನುವ ಕಾರಣಕ್ಕೆ ನಿತ್ಯ ಅದೇ ಅನ್ನ, ಅದೇ ತರಕಾರಿ, ಇಡ್ಲಿ, ಪೊಂಗಲ್, ಚಪಾತಿ ತಿಂದರೆ ಸಾಲದು. ಉತ್ತಮ ಆರೋಗ್ಯಕ್ಕಾಗಿ ಸಾಕಷ್ಟು ನೀರು ಕುಡಿಯುವುದು, ಊಟಕ್ಕೆ ವಿವಿಧ ಬಗೆಯ ತರಕಾರಿ ಮತ್ತು ಹಣ್ಣುಗಳನ್ನು ಸೇರಿಸುವುದು, ನವಣೆ, ಸಿರಿಧಾನ್ಯ, ಡ್ರೈ ಫ್ರೂಟ್ಸ್ ತಿನ್ನುವುದು ದೇಹದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ.
ಅನೇಕರು ಪ್ರತಿದಿನ ಇಡ್ಲಿ, ದೋಸೆ, ಚಿತ್ರನ್ನ, ಚಪಾತಿ, ಪೊಂಗಲ್ ಇಷ್ಟಕ್ಕೆ ದೈನಂದಿನ ಆಹಾರವನ್ನು ಸೀಮಿತವಾಗಿಸಿಕೊಂಡಿರುತ್ತಾರೆ. ಆದ್ರೆ ಕರುಳಿನ ಆರೋಗ್ಯ ದೃಷ್ಟಿಯಲ್ಲಿ ಇದು ಒಳ್ಳೆಯದಲ್ಲ. ನಮ್ಮ ಕರಳಿನಲ್ಲಿರುವ ಟ್ರಿಲಿಯನ್ ಗಟ್ಟಲೇ ಬ್ಯಾಕ್ಟೀರಿಯಗಳು ಕರುಳಿನ ಆರೋಗ್ಯ ಕಾಪಾಡಲು ಮತ್ತು ಕೆಲಸ ಮಾಡಲು ನಿತ್ಯ ವಿವಿಧ ಆಹಾರವನ್ನು ಬಯಸುತ್ತದೆ. ಹೀಗಾಗಿ ವಿಭಿನ್ನ ಹಣ್ಣುಗಳು ಮತ್ತು ತರಕಾರಿಗಳು, ವಿಟಮಿನ್ಗಳು ಅಂಶವಿರುವ ಆಹಾರ ಸೇವನೆ ಮಾಡಬೇಕು.
ದೇಹಕ್ಕೆ ನೀರಿನ ಅಗತ್ಯ ಹೆಚ್ಚಿರುತ್ತದೆ. ದೇಹ ಹೈಡ್ರೇಟ್ ಆಗಿ ಇಟ್ಟುಕೊಳ್ಳಲು ಹೆಚ್ಚು ನೀರು ಕುಡಿಯುವ ಅಗತ್ಯ ಇರುತ್ತದೆ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ. ದಿನವಿಡೀ ನೀರು ಕುಡಿಯುವುದು ನಿಮಗೆ ನೀರಿನಂಶ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಸ್ನಾಯುಗಳ ನಿರ್ವಣೆಗೆ, ಬೆಳವಣಿಗೆಗೆ ಹಾಗೂ ದುರಸ್ತಿಗೆ ಪ್ರೋಟಿನ್ ಮುಖ್ಯ,. ಹೀಗಾಗಿ ನಿತ್ಯವಲ್ಲದಿದ್ದರು ವಾರಕ್ಕೆ ಮೂರು ಬಾರಿಯಾದರೂ ನಿಮ್ಮ ತಟ್ಟೆಯಲ್ಲಿ ಮೊಟ್ಟೆ, ಬೇಳೆ, ಬೀನ್ಸ್, ಪನೀರ್, ಮೊಸರು, ಮೀನು ಅಥವಾ ಕೋಳಿ ಮಾಂಸದಂತಹ ಪ್ರೊಟೀನ್ ಭರಿತ ಆಹಾರವಿರಲಿ.
ತಿನ್ನುವಾಗ ಸಮಯ ಆಗೋಯ್ತು ಎಂದೋ, ಮೊಬೈಲ್ ನೋಡುತ್ತಲೋ ತಿನ್ನುವುದನ್ನು ನಿಲ್ಲಿಸಿ. ಊಟದತ್ತ ಗಮನವಿಟ್ಟು ಅದರ ಸ್ವಾದವನ್ನು ಆಸ್ವಾದಿಸುತ್ತಾ ತಿನ್ನುವುದು ಹೊಟ್ಟೆಗೆ ಉತ್ತಮ. ಜಾಗರೂಕತೆಯಿಂದ ಆಹಾರದ ಸ್ವಾದದ ಬಗ್ಗೆ ಚಿಂತಿಸುತ್ತ ತಿನ್ನುವುದು ನಿಮಗೆ ಹೊಟ್ಟೆ ತುಂಬಿದ ಭಾವನೆಯನ್ನು ಮೂಡಿಸುತ್ತದೆ.

ನೋಡಿರಿ

