ಅತ್ಯುತ್ತಮ ಸಿನಿಮಾ ಕಾಂತಾರ, ನಟ ರಿಷಭ್ ಶೆಟ್ಟಿ – ರಶ್ಮಿಕಾಗೂ ಅವಾರ್ಡ್, ಮಿರಾಯಿ ಸಿನಿಮಾಗೂ ಪ್ರಶಸ್ತಿಯ ಗರಿ

ರಾಷ್ಟ್ರೀಯ ಸಿನಿಮಾ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಭಾರತದ 12 ಚಿತ್ರರಂಗಗಳನ್ನು ಪ್ರತಿನಿಧಿಸುವ ಭಾರತೀಯ ರಾಷ್ಟ್ರೀಯ ಸಿನಿ ಅಕಾಡೆಮಿ ಘೋಷಣೆ ಮಾಡಿದ ಪ್ರಶಸ್ತಿಯಲ್ಲಿ ಕನ್ನಡದ ಕಾಂತಾರಾ ಸಿನಿಮಾ ಸುಮಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಮತ್ತು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕೂಡಾ ಉತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಇದನ್ನೂ ಓದಿ:ವಿಜಯ್ ಜೊತೆ ತವರು ಮನೆಗೆ ಬಂದ ರಶ್ಮಿಕಾ! – ನ್ಯಾಷನಲ್ ಕ್ರಶ್‌ಗೆ ತಂದೆಯಿಂದ ದುಬಾರಿ ಗಿಫ್ಟ್!
2026ರ ಐಎನ್ಸಿಎ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಭಾಷಾವಾರು ಈ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಕನ್ನಡದ ಸೂಪರ್ ಹಿಟ್ ಸಿನಿಮಾ ಕಾಂತಾರ: ಚಾಪ್ಟರ್ 1 ಸಿನಿಮಾಗೆ ಪ್ರಶಸ್ತಿಯಲ್ಲಿ ಸಿಂಹಪಾಲು ಸಿಕ್ಕಿದೆ. ‘ಕಾಂತಾರ: ಚಾಪ್ಟರ್ 1’ ಹೊರತಾಗಿ ಇನ್ಯಾವ ಕನ್ನಡ ಸಿನಿಮಾಕ್ಕೂ ಐಎನ್ಸಿಎ ಪ್ರಶಸ್ತಿ ಲಭಿಸಿರಲಿಲ್ಲ. ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಕಾಂತಾರ: ಚಾಪ್ಟರ್ 1, ಅತ್ಯುತ್ತಮ ನಟ ರಿಷಬ್ ಶೆಟ್ಟಿ, ಅತ್ಯುತ್ತಮ ನಿರ್ದೇಶಕ ರಿಷಬ್ ಶೆಟ್ಟಿ, ಅತ್ಯುತ್ತಮ ನಟಿ ರುಕ್ಮಿಣಿ ವಸಂತ್ ಅವರಿಗೆ ಪ್ರಶಸ್ತಿ ನೀಡಲಾಗಿದೆ.
ತೆಲುಗಿನಲ್ಲಿ ಅತ್ಯುತ್ತಮ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಲಭಿಸಿದೆ. ಗರ್ಲ್ಫ್ರೆಂಡ್ ಸಿನಿಮಾಕ್ಕಾಗಿ ಕೊಡಗಿನ ಬೆಡಗಿಗೆ ಈ ಪ್ರಶಸ್ತಿ ಸಂದಿದೆ. ತಂಡೇಲ್ ಸಿನಿಮಾದ ಹೀರೋ ಅಕ್ಕಿನೇನಿ ನಾಗರ್ಜುನ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ನಿರ್ದೇಶಕ ಅನಿಲ್ ರವಿಪುಡಿ ಅವರಿಗೆ ಸಂಕ್ರಾಂತಿಕಿ ವಸ್ತುನ್ನಾಮ್ ಸಿನಿಮಾ ನಿರ್ದೇಶನಕ್ಕಾಗಿ ಸಿಕ್ಕಿದೆ. ಇನ್ನು ಅತ್ಯುತ್ತಮ ಸಿನಿಮಾ ‘ಮಿರಾಯ್ ಗೆ ಪ್ರಶಸ್ತಿಯ ಗರಿ ಸಿಕ್ಕಿದೆ.
ತಮಿಳಿನಲ್ಲಿಕಾಂತಾ ಸಿನಿಮಾದಲ್ಲಿ ನಟಿಸಿದ ದುಲ್ಕರ್ ಸಲ್ಮಾನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಟೂರಿಸ್ಟ್ ಫ್ಯಾಮಿಲಿಯಲ್ಲಿ ನಟಿಸಿದ ಸಿಮ್ರನ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ನಿರ್ದೇಶಕ ಮಾರಿ ಸೆಲ್ವರಾಜ್ (ಬೈಸನ್), ಅತ್ಯುತ್ತಮ ಸಿನಿಮಾ ‘ಟೂರಿಸ್ಟ್ ಫ್ಯಾಮಿಲಿ’ಗೆ ನೀಡಲಾಗಿದೆ. ಮಲಯಾಳಂನಲ್ಲಿ ತೆರೆಕಂಡು ಬಾರಿ ಸದ್ದು ಮಾಡಿದ ಸರ್ವಂ ಮಾಯ ಸಿನಿಮಾದ ನಟ ನಿವಿಲ್ ಪೌಲಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಜೊತೆಗೆ ಮಲಯಾಳಂನಲ್ಲಿ ಭರ್ಜರಿ ಗಳಿಕೆ ಕಂಡ ಲೋಕಃ ಸಿನಿಮಾ ನಟಿ ಕಲ್ಯಾಣಿ ಪ್ರಿಯದರ್ಶಿನಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಜೊತೆಗೆ ಅತ್ಯುತ್ತಮ ನಿರ್ದೇಶಕ ಡಾಮಿನಿಕ್ ಅರುಣ್ (ಲೋಕಃ), ಅತ್ಯುತ್ತಮ ಸಿನಿಮಾ ‘ಲೋಕಃ’. ಹಿಂದಿಯ ಅತ್ಯುತ್ತಮ ಸಿನಿಮಾ ‘ಛಾವಾ’, ಅತ್ಯುತ್ತಮ ನಟ ರಣ್ವೀರ್ ಸಿಂಗ್ (ಧುರಂಧರ್), ಅತ್ಯುತ್ತಮ ನಿರ್ದೇಶಕ ಆದಿತ್ಯ ಧರ್ (ಧುರಂಧರ್), ಅತ್ಯುತ್ತಮ ನಟಿ ಯಾಮಿ ಗೌತಮ್ (ಹಖ್) ಪ್ರಶಸ್ತಿಗಳು ಸಿಕ್ಕಿದೆ. ಪ್ರಶಸ್ತಿ ವಿತರಣೆ ಸಮಾರಂಭ ಶೀಘ್ರವೇ ನಡೆಯಲಿದೆ.

ನೋಡಿರಿ

