ಬೆಸ್ಟ್ ಬ್ಯಾಟರ್ Vs ಬೆಸ್ಟ್ ಬೌಲರ್.. IPLನಲ್ಲಿ ಕೊಹ್ಲಿ & ಬುಮ್ರಾ ಜಿದ್ದಾಜಿದ್ದಿ! – ಜಸ್ಪ್ರೀತ್ ಎದುರು ಸಿಕ್ಸರ್ ಕಿಂಗ್ ಯಾರು?

ಬೆಸ್ಟ್ ಬ್ಯಾಟರ್ Vs ಬೆಸ್ಟ್ ಬೌಲರ್.. IPLನಲ್ಲಿ ಕೊಹ್ಲಿ & ಬುಮ್ರಾ ಜಿದ್ದಾಜಿದ್ದಿ! – ಜಸ್ಪ್ರೀತ್ ಎದುರು ಸಿಕ್ಸರ್ ಕಿಂಗ್ ಯಾರು?

ಕ್ರಿಕೆಟ್​ನಲ್ಲಿ ಭಾರತವೇ ಬಾಸ್. ಈಗಂತೂ ಅಟ್ ಎ ಟೈಂ ಎರಡ್ಮೂರು ಟೀಂ ಫಾರ್ಮ್ ಮಾಡುವಷ್ಟು ಪ್ಲೇಯರ್ಸ್ ಇದ್ದಾರೆ. ಌಂಡ್ ಎಲ್ರೂ ಕ್ವಾಲಿಟಿ ಪ್ಲೇಯರ್​​ಗಳೇ. ಈಗ ಐಪಿಎಲ್ ಸ್ಟಾರ್ಟ್ ಆಗ್ತಿದ್ದು ಇನ್ನು 2 ತಿಂಗಳು ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಅದ್ರಲ್ಲೂ ಬ್ಯಾಟಿಂಗ್ ಅಂತಾ ಬಂದಾಗ ವಿರಾಟ್ ಕೊಹ್ಲಿ ಡಾಮಿನೇಟ್ ಮಾಡ್ತಾರೆ. ಬೌಲಿಂಗ್ ಅಂತಾ ಬಂದಾಗ ಜಸ್ಪ್ರೀತ್ ಬುಮ್ರಾ ಡೇಂಜರಸ್ ಆಗ್ತಾರೆ.

ಇದನ್ನೂ ಓದಿ: RCB ಫ್ಯಾನ್ಸ್‌ಗೆ ಗುಡ್‌ನ್ಯೂಸ್!‌ – ಟಿಕೆಟ್‌ ಮಾರಾಟಕ್ಕೆ ಡೇಟ್‌ ಅನೌನ್ಸ್!‌

2026 ರ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 28 ರಂದು ಸ್ಟಾರ್ಟ್ ಆಗುತ್ತೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದೊಂದಿಗೆ ಟೂರ್ನಿ ಆರಂಭವಾಗುತ್ತೆ. ಌಂಡ್ ಮೊದಲ ಹಂತದ ಪಂದ್ಯಗಳ ಲಿಸ್ಟ್​ನ ಕೊನೇ ಮ್ಯಾಚ್ ಏಪ್ರಿಲ್ 12 ರಂದು ಮುಂಬೈ ಮತ್ತು ಆರ್‌ಸಿಬಿ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ.  ಹೈ ಪ್ರೊಫೈಲ್ ಹಣಾಹಣಿಯ ಈ ಪಂದ್ಯದಲ್ಲಿ ಎಲ್ಲರ ಕಣ್ಣು ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಮೇಲೇ ಇರುತ್ತೆ. ಬ್ಯಾಟಿಂಗ್​ನಲ್ಲಿ ಕೊಹ್ಲಿ ಖದರ್ ಬೌಲಿಂಗ್​ನಲ್ಲಿ ಬುಮ್ರಾ ಪವರ್ ನೋಡೋಕೆ ಎಲ್ರೂ ಕಾಯ್ತಿದ್ದಾರೆ. ಅದ್ರಲ್ಲೂ ಈ ಸೀಸನ್ ಅಂತೂ ಇನ್ನೂ ಹೈವೋಲ್ಟೇಜ್​ ಆಗಲಿದೆ.

ಬೆಸ್ಟ್ Vs ಬೆಸ್ಟ್.. ಕೊಹ್ಲಿ & ಬುಮ್ರಾ ಹೈವೋಲ್ಟೇಜ್ ಫೈಟ್!

ವಿರಾಟ್ ಕೊಹ್ಲಿ ಕೊಹ್ಲಿ ಎಲ್ಲಾ ಮಾದರಿಯ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಇನ್ನು ಸಾರ್ವಕಾಲಿಕ ಬೌಲರ್‌ಗಳ ಪಟ್ಟಿಯಲ್ಲಿ ಬುಮ್ರಾ ಕೂಡ ಇದ್ದಾರೆ. ಪ್ರತೀ ಸೀಸನ್​ನಂತೆ ಈ ಸಲವೂ ಬೆಸ್ಟ್ vs ಬೆಸ್ಟ್ ಫೈಟ್ ನಡೆಯಲಿದೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕೊಹ್ಲಿ ಕಳೆದ ಮೂರು ಸೀಸನ್​ಗಳಲ್ಲೂ ಪ್ರತೀ ಸೀಸನ್​ನಲ್ಲಿ 600 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇನ್ನು ಜಸ್ಪ್ರೀತ್ ಬುಮ್ರಾ ತಮ್ಮ ಕ್ರಿಕೆಟ್ ಕರಿಯರ್​ನ ಪೀಕ್​ನಲ್ಲಿದ್ದಾರೆ. ಐಪಿಎಲ್​ನಲ್ಲಿ ಇವ್ರಿಬ್ಬರ ಮುಖಾಮುಖಿ ನೋಡೋದಾದ್ರೆ.

ಕೊಹ್ಲಿ & ಬುಮ್ರಾ ಫೈಟ್!

ಐಪಿಎಲ್ ಇತಿಹಾಸದಲ್ಲಿ ಜಸ್ಪ್ರೀತ್ ಬುಮ್ರಾ 17 ಇನ್ನಿಂಗ್ಸ್​ಗಳಲ್ಲಿ ಕೊಹ್ಲಿ ವಿರುದ್ಧ ಬೌಲ್ ಮಾಡಿದ್ದಾರೆ. 17 ಇನ್ನಿಂಗ್ಸ್​ಗಳ ಪೈಕಿ ಕೊಹ್ಲಿಯನ್ನು ಐದು ಬಾರಿ ಔಟ್ ಮಾಡಿದ್ದಾರೆ. ಬುಮ್ರಾ ಬೌಲಿಂಗ್​ನಲ್ಲಿ ವಿರಾಟ್ ಸ್ಟ್ರೈಕ್ ರೇಟ್ 148.51 ಆಗಿದೆ. ಬುಮ್ರಾ ವಿರುದ್ಧ ಸಿಕ್ಸರ್ ಹೊಡೆಯುವುದು ಸುಲಭ ಇಲ್ಲ. ಹೀಗಿದ್ರೂ ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಬುಮ್ರಾಗೆ ಆರು ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. 15 ಬೌಂಡರಿಗಳು ಸೇರಿವೆ. ಇನ್ನು ಬುಮ್ರಾ ಕೊಹ್ಲಿಗೆ 37 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ. ಪವರ್‌ಪ್ಲೇನಲ್ಲಿ ಅಂದ್ರೆ ಮೊದಲ ಆರು ಓವರ್‌ಗಳಲ್ಲಿ ಬುಮ್ರಾ ವಿರುದ್ಧ ಕೊಹ್ಲಿಯ ಐಪಿಎಲ್ ಸ್ಟ್ರೈಕ್ ರೇಟ್ 167.5 ಇದೆ. ಅಂದ್ರೆ ಪವರ್ ಪ್ಲೇನಲ್ಲಿ 40 ಎಸೆತಗಳಲ್ಲಿ 67 ರನ್‌ಗಳು ಬಂದಿವೆ. ಪವರ್​ಪ್ಲೇನಲ್ಲಿ ಬುಮ್ರಾ 11 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿಯನ್ನು ಎರಡು ಬಾರಿ ಔಟ್ ಮಾಡಿದ್ದಾರೆ. ಇನ್ನು ಇಂಡಿವಿಶ್ಯೂಯಲ್ ಆಗಿಯೂ ಇಬ್ಬರ ಪರ್ಫಾಮೆನ್ಸ್ ನೆಕ್ಸ್​ಟ್ ಲೆವೆಲ್​ನಲ್ಲಿದೆ. ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ 8,661 ರನ್ ಗಳಿಸಿದ್ದು 8000ಕ್ಕಿಂತ ಜಾಸ್ತಿ ರನ್ ಗಳಿಸಿದ ಏಕೈಕ ಆಟಗಾರನಾಗಿದ್ದಾರೆ. ಸರಾಸರಿ ಸುಮಾರು 40 ಮತ್ತು ಅವರ ಹೆಸರಿನಲ್ಲಿ 8 ಶತಕಗಳಿವೆ. ಇನ್ನು ಬುಮ್ರಾ ಮುಂಬೈ ಪರ 145 ಪಂದ್ಯಗಳಿಂದ 183 ಐಪಿಎಲ್ ವಿಕೆಟ್‌ಗಳನ್ನು ಪಡೆದಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವ್ರ ಬೌಲಿಂಗ್​ನಲ್ಲಿ ರನ್ಸ್ ಕಲೆ ಹಾಕೋದು ಅಷ್ಟು ಈಸಿ ಇಲ್ಲ. ಬ್ಯಾಟಿಂಗ್ ದಿಗ್ಗಜರು ಎನಿಸಿಕೊಂಡವ್ರೂ ಕೂಡ ಸ್ಟ್ರಗಲ್ ಪಡ್ತಾರೆ. ಇನ್ನು ಸಿಕ್ಸ್​​ಗಳನ್ನ ಬಾರಿಸೋದು ದೂರದ ಮಾತೇ ಸರಿ. ಹೀಗಾಗೇ ಐಪಿಎಲ್​ನಲ್ಲಿ ಬೂಮ್ ಬೂಮ್ ಬುಮ್ರಾ ವಿರುದ್ಧ ಕೇವಲ ನಾಲ್ವರು ಬ್ಯಾಟರ್ಸ್ ಮಾತ್ರವೇ 5 ಅಥವಾ 5ಕ್ಕಿಂತ ಜಾಸ್ತಿ ಸಿಕ್ಸ್ ಬಾರಿಸಿದ್ದಾರೆ. ಸೋ ಯಾರೆಲ್ಲಾ ಅನ್ನೋದನ್ನ ನೋಡ್ತಾ ಹೋಗೋಣ. ಈ ಲಿಸ್ಟ್​ನಲ್ಲಿ ನಂಬರ್ 1 ಪ್ಲೇಸ್​ನಲ್ಲಿ ನಮ್ಮ ಆರ್​ಸಿಬಿಯ ಆಪತ್ಪಾಂಧವ, ಮಿಸ್ಟರ್ 360 ಡಿಗ್ರಿ ಬ್ಯಾಟರ್ ಎಬಿ ಡಿವಿಲಿಯರ್ಸ್ ಇದ್ದಾರೆ.

ಬುಮ್ರಾ ವಿರುದ್ಧ ಹೈಯೆಸ್ಟ್ ಸಿಕ್ಸ್!

ದಕ್ಷಿಣ ಆಫ್ರಿಕಾದ ಲೆಜೆಂಡರಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಬುಮ್ರಾ ಬೌಲಿಂಗ್‌ನಲ್ಲಿ ಡಿವಿಲಿಯರ್ಸ್​ ಎಂಟು ಸಿಕ್ಸರ್‌ ಸಿಡಿಸಿದ್ದಾರೆ. ಡಿವಿಲಿಯರ್ಸ್, ಬುಮ್ರಾ ಬೌಲಿಂಗ್‌ನಲ್ಲಿ ಒಟ್ಟು 85 ಎಸೆತಗಳನ್ನು ಫೇಸ್ ಮಾಡಿದ್ದು 147.05 ರ ಸ್ಟ್ರೈಕ್ ರೇಟ್‌ನಲ್ಲಿ 125 ರನ್ ಕಲೆಹಾಕಿದ್ದಾರೆ. ಇನ್ನು ಈ ಲಿಸ್ಟ್​ನಲ್ಲಿ ಎರಡನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ. ಬುಮ್ರಾ ವಿರುದ್ಧ 101 ಎಸೆತಗಳನ್ನ ಫೇಸ್ ಮಾಡಿದ್ದು ಆರು ಸಿಕ್ಸರ್‌ಗಳು ಸೇರಿದಂತೆ 150 ರನ್ ಬಾರಿಸಿದ್ದಾರೆ. ಹಾಗೇ ಐಪಿಎಲ್‌ನಲ್ಲಿ ಬುಮ್ರಾ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೂಡ ಕೊಹ್ಲಿ ಆಗಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಜೆಪಿ ಡುಮಿನಿ ಮೂರನೇ ಸ್ಥಾನದಲ್ಲಿ ಇದ್ದಾರೆ. ಅವರು ಬುಮ್ರಾ ವಿರುದ್ಧ ಕೇವಲ 33 ಎಸೆತಗಳಲ್ಲಿ ಆರು ಸಿಕ್ಸರ್‌ಗಳು ಸೇರಿದಂತೆ 70 ರನ್‌ ಕಲೆಹಾಕಿದ್ದಾರೆ. ಪಟ್ಟಿಯಲ್ಲಿರುವ ಕೊನೆಯ ಬ್ಯಾಟ್ಸ್‌ಮನ್ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್. ಕಮ್ಮಿನ್ಸ್ ಬೌಲರ್ ಆಗಿದ್ದರೂ, ಅವರು ಬುಮ್ರಾ ವಿರುದ್ಧ 34 ಎಸೆತಗಳಲ್ಲಿ ಐದು ಸಿಕ್ಸರ್‌ಗಳು ಸೇರಿದಂತೆ 54 ರನ್‌ ಬಾರಿಸಿದ್ದಾರೆ.

ಸೋ ಈ ನಂಬರ್​ಗಳನ್ನ ನೋಡಿದಾಗ್ಲೇ ಗೊತ್ತಾಗುತ್ತೆ ಜಸ್ಪ್ರೀತ್ ಬುಮ್ರಾ ಎಂಥಾ ಕ್ವಾಲಿಟಿ ಪ್ಲೇಯರ್ ಅನ್ನೋದು. ಸೋ ಬುಮ್ರಾ ಬೌಲಿಂಗ್ ವೇಳೆ ಜಸ್ಟ್ ಡಿಫೆನ್ಸ್ ಮಾಡಿಕೊಂಡ್ರೆ ಸಾಕು ಅಥವಾ ಸಿಂಗಲ್ಸ್ ತಗೊಳ್ಳೋದು ಕೂಡ ಜಾಸ್ತಿನೇ ಅನ್ನೋ ಥರ ಇರುತ್ತೆ. ಸಿಕ್ಸ್, ಫೋರ್ ಹೋದ್ರಂತೂ ಬ್ಯಾಟರ್ ಸಿಕ್ಕಾಪಟ್ಟೆ ಡೇಂಜರಸ್ ಆಗಿ ಕಾಣ್ತಾರೆ. ಸೋ ಇದು ಬುಮ್ರಾಗೆ ಇರೋ ತಾಕತ್ತು. ಅಟ್ ದಿ ಸೇಮ್ ಟೈಂ ಬೌಲರ್​ಗಳಿಗೆ ಬೆಲೆನೇ ಕೊಡದಂತೆ ಆಡೋ ವಿರಾಟ್ ಕೊಹ್ಲಿ ಕೂಡ ಬೆಸ್ಟ್ ಎವರ್ ಬ್ಯಾಟರ್. ಲೆಜೆಂಡರಿ ಬೌಲರ್​ಗಳ ಎದುರಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸ್ತಿದ್ದರಿಂದಲೇ ಈವತ್ತು ಕ್ರಿಕೆಟ್ ಲೋಕದ ಗೋಟ್ ಆಗಿ ಮೆರೀತಿದ್ದಾರೆ. ಹೀಗಾಗಿ ಬ್ಯಾಟಿಂಗ್ ಅಂತಾ ಬಂದಾಗ ಕೊಹ್ಲಿ ಬೌಲಿಂಗ್ ಅಂತಾ ಬಂದಾಗ ಬುಮ್ರಾ ಹೆಸರು ಟಾಪ್​ನಲ್ಲಿರುತ್ತೆ. ಒನ್ಸ್ ಅಗೇನ್ ಮತ್ತೊಂದು ಸೀಸನ್​ನಲ್ಲಿ ಈ ಇಬ್ಬರು ಫೈಯರ್ ಪ್ಲೇಯರ್ಸ್ ಮೀಟ್ ಮಾಡ್ತಿದ್ದು ಇಬ್ಬರ ಜುಗಲ್​ಬಂಧಿ ನೋಡೋಕೆ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.

Shwetha M