ಬಿಗ್‌ಬಾಸ್ ಮನೆಯಿಂದ ಬೆಂಕಿ ತನಿಷಾ ಔಟ್ – ಅಭಿಮಾನಿಗಳಿಗೆ ಬಿಗ್ ಶಾಕ್

ಬಿಗ್‌ಬಾಸ್ ಮನೆಯಿಂದ ಬೆಂಕಿ ತನಿಷಾ ಔಟ್ – ಅಭಿಮಾನಿಗಳಿಗೆ ಬಿಗ್ ಶಾಕ್

ಅಭಿಮಾನಿಗಳು ಬೆಂಕಿ ಬಂತೋ ಎಂದು ಹಾಡಿದ್ದರು. ನೋ ಸಿಂಪತಿ, ನೋ ಲವ್, ನಿಯತ್ತಾಗಿ ಆಟ ಆಡಿ ಫೈನಲ್‌ಗೆ ಬಂದಿರೋ ಸ್ಪರ್ಧಿ ಅಂದ್ರೆ ಅದು ತನಿಷಾ ಮಾತ್ರ- ಬಿಬಿಕೆ ವಿನ್ನರ್’ ಎಂಬ ಟ್ಯಾಗ್‌ ಲೈನ್ ಮೂಲಕ ತನಿಷಾ ಪರ ಬ್ಯಾಟಿಂಗ್ ಕೂಡಾ ಮಾಡಿದ್ದರು. ಆದರೆ, ಅಭಿಮಾನಿಗಳ ಲೆಕ್ಕಾಚಾರ ಉಲ್ಟಾ ಆಗಿದೆ. ಬಿಗ್‌ಬಾಸ್‌ ಮನೆಯ ಬೆಂಕಿ ತನಿಷಾ ವಾರದ ಮಧ್ಯೆ ಔಟ್ ಆಗಿದ್ದಾರೆ.

ಇದನ್ನೂ ಓದಿ: ಸಂತು ಪಂತು ಗೆಳೆತನಕ್ಕೆ ಸಾಕ್ಷಿಯಾದ ಬಿಗ್‌ಬಾಸ್ – ಸ್ನೇಹಿತರ ಮನದಾಳದ ಮಾತು ಕೇಳಿ ಕಿಚ್ಚ ಸುದೀಪ್ ಭಾವುಕ

ಬಿಗ್ ಬಾಸ್ ಮನೆಯಲ್ಲೀಗ ಮಹಾ ತಿರುವು.  ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಹೊರ ಹೋಗಿರುವುದು ಬೆಂಕಿ ತನಿಷಾ. ಗ್ರ್ಯಾಂಡ್ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಮಿಡ್ ವೀಕ್ ನಲ್ಲಿಯೇ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ತನಿಷಾ ಮನೆಯಿಂದ ಹೊರಗೆ ಬಂದಿದ್ದಾರೆ. ಉತ್ತಮ ಪ್ರದರ್ಶನ ತೋರುತ್ತಿದ್ದ ತನಿಷಾ ಟಾಪ್ 5ರಲ್ಲಿ ಇರಲಿದ್ದಾರೆ ಎಂಬುದು ಅವರ ಅಭಿಮಾನಿಗಳ ನಂಬಿಕೆಯಾಗಿತ್ತು. ಆದರೆ, ವಾರದ ಮಧ್ಯದಲ್ಲಿ ಬಿಗ್ ಬಾಸ್ ತೆಗೆದುಕೊಂಡಿರುವ ನಿರ್ಧಾರ ಅಭಿಮಾನಿಗಳಿಗೆ ನಿರಾಶೆ ಉಂಟುಮಾಡಿದೆ.

ತನಿಷಾ ಈ ಮನೆಯಲ್ಲಿ ನಿಮ್ಮ ಪಯಣ ಅಂತ್ಯ ಎಂದು ಹೇಳಿ ಬಿಗ್ ಬಾಸ್ ಶಾಕ್ ಕೊಟ್ಟಿದ್ದಾರೆ. ಎಲ್ಲರನ್ನೂ ಗಾರ್ಡನ್ ಏರಿಯಾಗೆ ಕರೆತರಲಾಯಿತು. ಬಿಗ್ ಬಾಸ್ ಸೂಚಿಸುವ ಸ್ಪರ್ಧಿ ಮನೆಯಿಂದ ಹೊರ ಹೋಗಬೇಕು ಎನ್ನುವ ಆದೇಶ ಬಂತು. ಈ ವೇಳೆ ತನಿಷಾ ಹೆಸರನ್ನು ಬಿಗ್ ಬಾಸ್ ಸೂಚಿಸಿದರು. ತನಿಷಾಗೆ ಇದು ಶಾಕಿಂಗ್ ಆಗಿತ್ತು. ‘ಏಕೆ ಬಿಗ್ ಬಾಸ್? ನಾನು ಹೊರಹೋಗಬೇಕು ಎಂಬುದು ನಿಮ್ಮೆಲ್ಲರ ಕೋರಿಕೆ ಆಗಿತ್ತಲ್ಲವೇ? ನೋಡಿ ಹೊರ ಹೋಗುತ್ತಿದ್ದೇನೆ’ ಎಂದು ತನಿಷಾ ಕಣ್ಣೀರು ಹಾಕಿದರು. ಮನೆಯವರಿಗೂ ಇದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಕಳೆದ ವಾರ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೂ ಡೇಂಜರ್ ಝೋನ್ನಲ್ಲಿದ್ದರು. ಆದರೆ ಈ ವಾರ ತುಕಾಲಿ ಸಂತೂ ನಾಮಿನೇಟ್ ಆಗಿಲ್ಲ.

Sulekha