ಕಾಯಿ, ಕಾಯಿ ನುಗ್ಗೆಕಾಯಿ ಸಿಕ್ಕಾಪಟ್ಟೆ ಕಾಸ್ಟ್ಲಿ! – ನುಗ್ಗೆಕಾಯಿ, ಟೊಮ್ಯಾಟೋ ಬೆಲೆ ದುಬಾರಿ!

ಕಾಯಿ, ಕಾಯಿ ನುಗ್ಗೆಕಾಯಿ ಸಿಕ್ಕಾಪಟ್ಟೆ ಕಾಸ್ಟ್ಲಿ! – ನುಗ್ಗೆಕಾಯಿ, ಟೊಮ್ಯಾಟೋ ಬೆಲೆ ದುಬಾರಿ!

ಅಗತ್ಯ ವಸ್ತುಗಳ ಬೆಲೆ ದಿನೇ ದಿನೆ ಏರಿಕೆಯಾಗ್ತಿದ್ದು, ಜನರ ಜೇಬಿಗೆ ಕತ್ತರಿ ಬೀಳ್ತಿದೆ. ಇದೀಗ ರಾಜ್ಯದ ಜನರಿಗೆ ಮತ್ತೊಂದು ಶಾಕಿಂಗ್‌ ಸುದ್ದಿಯಿದೆ. ಇನ್ನುಮುಂದೆ ಕಾಯಿ ಕಾಯಿ ನುಗ್ಗೆಕಾಯಿ ಅನ್ನಂಗಿಲ್ಲ. ನುಗ್ಗೆಕಾಯಿ ಬೆಲೆ ಕೇಳಿದ್ರೆ ಶಾಕ್‌ ಆಗೋದಂತೂ ಪಕ್ಕಾ!

ಇದನ್ನೂ ಓದಿ: ಸಂಸತ್ತು ಗೆಲುವಿನ ದುರಹಂಕಾರ ಪ್ರದರ್ಶನಕ್ಕೆ ವೇದಿಕೆ ಆಗಬಾರದು – ಅಧಿವೇಶ ಆರಂಭಕ್ಕೂ ಮುನ್ನ ಪ್ರಧಾನಿ ಮೋದಿ ಕಿವಿಮಾತು

ನುಗ್ಗೇಕಾಯಿ ಬೆಲೆ ಅಕ್ಷರಶಃ ಗಗನಕ್ಕೇರಿದೆ. ಪ್ರತಿ ಕೆ.ಜಿ. ನುಗ್ಗೇಕಾಯಿ ಬೆಲೆ ಆರು ನೂರು ದಾಟಿದೆ. ಇದನ್ನು ಕೇಳಿ ಗ್ರಾಹಕರು ಕಂಗಾಲಾಗಿದ್ದಾರೆ. ಇನ್ನು ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಜೋಡಿ ನುಗ್ಗೇಕಾಯಿ ಬೆಲೆ 100 ರೂಪಾಯಿ ಆಗಿದೆ. 40 ಕೆಜಿ ನುಗ್ಗೆಕಾಯಿ ಮೂಟೆ 18 ಸಾವಿರ ರೂಪಾಯಿ ಆಗಿದೆ.  ಹೋಲ್‌ ಸೇಲ್ ನಲ್ಲೇ ಕೆಜಿಗೆ 450-500ರೂ ವರೆಗೂ ಇದೆ. ಹೀಗಾಗಿ ಗ್ರಾಹಕರಿಗೆ ಕೆಜಿಗೆ 550-600ರೂ ಮಾರಾಟ ಮಾಡಬೇಕಾಗಿದೆ. ಆದರೆ, ಜನ ಅಷ್ಟು ದುಡ್ಡು ಕೊಟ್ಟು ನುಗ್ಗೆಕಾಯಿ ಖರೀದಿ ಮಾಡುತ್ತಿಲ್ಲ. ತಮ್ಮ  ಬಜೆಟ್ ಇತಿಮಿತಿಯಲ್ಲೇ ಅಡುಗೆ ಮನೆ ಖರ್ಚು ವೆಚ್ಚ ನಿಭಾಯಿಸುವ ಗೃಹಿಣಿಯರಂತೂ ನುಗ್ಗೇಕಾಯಿ ಮುಟ್ಟದೇ ದೂರ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಅಡುಗೆ ಮನೆಯ ಕೆಂಪು ಸುಂದರಿ ಬೆಲೆ ಕೂಡ ದಿನೇ ದಿನೇ ಏರಿಕೆಯಾಗ್ತಿದೆ.  ಕೆಜಿ ಟೊಮೆಟೊ ಮಾರುಕಟ್ಟೆಯಲ್ಲಿ 70 ರೂಪಾಯಿಯಿಂದ 90 ರೂಪಾಯಿವರೆಗೂ ಮಾರಾಟವಾಗ್ತಿದೆ. ಇನ್ನೂ ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆ ಟೊಮೆಟೊ ಮಾರುಕಟ್ಟೆಯಲ್ಲಿ 15 ಕೆ.ಜಿಯ ಒಂದು ಕ್ರೇಟ್ ಟೊಮೆಟೊ ಸರಾಸರಿ 700 ರೂಪಾಯಿಗೆ ಮಾರಾಟವಾಗ್ತಿದೆ. ಟೊಮೆಟೊಗೆ ಉತ್ತಮ ಬೆಲೆ ಬಂದಿರೋದು ರೈತರಿಗೆ ಖುಷಿಯಾದ್ರೆ ಗ್ರಾಹಕರಿಗೆ ಬರೆ ಎಳೆದಂತಾಗಿದೆ.

Shwetha M