ಬೆಂಗಳೂರಿಗರೇ.. ಬಿ ಅಲರ್ಟ್! – ಇನ್ಮುಂದೆ ಈ ಕೆಲಸ ಮಾಡಿಲ್ಲ ಅಂದ್ರೆ ಫೈನ್ ಫಿಕ್ಸ್!

ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಮಹತ್ವದ ಸುದ್ದಿಯಿದೆ. ಇಂದಿನಿಂದ ಬೆಂಗಳೂರಿನಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಹೊಸ ನಿಯಮಗಳು ಜಾರಿಯಾಗಿದೆ. ಇನ್ಮುಂದೆ ಕಸ ವಿಂಗಡನೆ ಮಾಡದಿದ್ರೆ ದಂಡ ಫಿಕ್ಸ್.
ಇದನ್ನೂ ಓದಿ: ಚಲಿಸುತ್ತಿದ್ದ ಬಸ್‌ನ ಡೋರ್ ಏಕಾಏಕಿ ಓಪನ್! – ರಸ್ತೆಗೆ ಬಿದ್ದ ಅಕ್ಕ-ತಂಗಿ!
ಬೆಂಗಳೂರಿನಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಹೊಸ ನಿಯಮಗಳು ಜಾರಿಯಾಗಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ದೇಶಾದ್ಯಂತ ಏಕರೂಪ ಘನತ್ಯಾಜ್ಯ ನಿರ್ವಹಣೆ ನಿಯಮಗಳು ಬರಲಿದೆ. ಇಂದಿನಿಂದ ಬೆಂಗಳೂರಿನಲ್ಲಿ ಘನತ್ಯಾಜ್ಯ ನಿರ್ವಹಣೆ ಹೊಸ ನಿಯಮಗಳು ಜಾರಿಯಾಗಿದೆ. ಇದರ ಅನ್ವಯ ಸರಿಯಾಗಿ ಕಸ ವಿಂಗಡಣೆ ಮಾಡದೇ ಇದ್ದರೆ ಬೆಂಗಳೂರಿಗರಿಗೆ ಜಿಬಿಎ ದಂಡಾಸ್ತ್ರ ಪ್ರಯೋಗ ಮಾಡಲಿವೆ. ಸರಿಯಾಗಿ ಕಸ ವಿಂಗಡಣೆ ಮಾಡದೇ ನಿಯಮ ಉಲ್ಲಂಘಿಸಿದ್ರೆ ಮೊದಲ ಬಾರಿಗೆ 500 ರೂ., ಎರಡನೇ ಬಾರಿ ನಿಯಮ ಉಲ್ಲಂಘಿಸಿದ್ರೆ 1,000 ರೂ ವಿಧಿಸಲಾಗುವುದು. ನಾಲ್ಕು ಮಾದರಿಯಲ್ಲಿ ಕಸ ವಿಂಗಡಣೆ ಮಾಡಿ ಆಟೋಗಳಿಗೆ ಕೊಡಬೇಕು ಎಂದು ತಿಳಿಸಿದೆ.
- ಹಸಿಕಸ
- ಒಣಕಸ
- ಸ್ಥಳೀಯ ನೈರ್ಮಲ್ಯ ಕಸ
- ವಿಶೇಷ ತ್ಯಾಜ್ಯ ಕಸ

ನೋಡಿರಿ

