10 ಕಿ.ಮೀ ಪ್ರಯಾಣಕ್ಕೆ 29 ನಿಮಿಷ 10ಸೆಕೆಂಡ್ ಬೇಕು – ಟ್ರಾಫಿಕ್ ನಲ್ಲಿ ವಿಶ್ವಕ್ಕೇ ಬೆಂಗಳೂರು ನಂಬರ್-2..!
ಐಟಿ ಸಿಟಿ, ಸಿಲಿಕಾನ್ ಸಿಟಿ, ಉದ್ಯಾನನಗರಿ ಅಂತೆಲ್ಲಾ ಬೆಂಗಳೂರು ವಿಶ್ವಮಟ್ಟದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರೋ ನಗರ. ಆದರೆ ಈ ಖ್ಯಾತಿಯ ಜೊತೆ ಜೊತೆಗೇ ಅತೀ ಹೆಚ್ಚು ಟ್ರಾಫಿಕ್ ಇರೋ ನಗರ ಅನ್ನೋ ಕುಖ್ಯಾತಿಯನ್ನೂ ಪಡೆದಿದೆ. 2022 ರಲ್ಲಿ ಬೆಂಗಳೂರಿನ ನಗರ ಪ್ರದೇಶದಲ್ಲಿ 10 ಕಿಲೋ ಮೀಟರ್ ಪ್ರಯಾಣಿಸಲು 29 ನಿಮಿಷ, 10 ಸೆಕೆಂಡುಗಳ ಅಗತ್ಯವಿತ್ತು ಎಂದು ಸರ್ವೆ ತಿಳಿಸಿದೆ.
ಡಚ್ ಲೊಕೇಶನ್ ಟೆಕ್ನಾಲಜಿ ಸ್ಪೆಷಲಿಸ್ಟ್ ಟಾಮ್ಟಾಮ್ ಪ್ರಕಟಿಸಿದ ಸಂಚಾರ ಸೂಚ್ಯಂಕದ ಪ್ರಕಾರ ಬೆಂಗಳೂರು ನಗರ ಕೇಂದ್ರ ವಿಭಾಗದಲ್ಲಿ 2022 ರಲ್ಲಿ ವಿಶ್ವದ ಎರಡನೇ ಅತಿ ಹೆಚ್ಚು ಜನದಟ್ಟಣೆಯ ನಗರವಾಗಿದೆ.
2022 ರಲ್ಲಿ ಬೆಂಗಳೂರಿನ ನಗರ ಪ್ರದೇಶದಲ್ಲಿ 10 ಕಿಲೋ ಮೀಟರ್ ಪ್ರಯಾಣಿಸಲು 29 ನಿಮಿಷ, 10 ಸೆಕೆಂಡುಗಳ ಅಗತ್ಯವಿತ್ತು ಎಂದು ಸರ್ವೆ ತಿಳಿಸಿದೆ.
2021 ರಲ್ಲಿ ಬೆಂಗಳೂರು ನಗರ ಪ್ರದೇಶದಲ್ಲಿ ಸಂಚರಿಸುವಾಗ ಪ್ರತಿ ಗಂಟೆಗೆ 14 ಕಿಲೋ ಮೀಟರ್ ವೇಗ ಇದ್ದರೆ, 2022ರಲ್ಲಿ ಈ ಪ್ರಮಾಣವು 18 ಕಿಲೋ ಮೀಟರ್ ಆಗಿದೆ.
ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ನಗರ ಎಂಬ ಕುಖ್ಯಾತಿಗೆ ಲಂಡನ್ ಪಾತ್ರವಾಗಿದೆ. ಲಂಡನ್ನಲ್ಲಿ 10 ಕಿಲೋ ಮೀಟರ್ ಪ್ರಯಾಣ ಮಾಡಲು 36 ನಿಮಿಷ, 20 ಸೆಕೆಂಡುಗಳ ಅಗತ್ಯವಿದೆ.
ಭಾರತದ ಇತರ ನಗರಗಳನ್ನು ನೋಡೋದಿದ್ರೆ ಪುಣೆ 6ನೇ ಸ್ಥಾನದಲ್ಲಿದೆ. ದೆಹಲಿ 34 ನೇ ಸ್ಥಾನದಲ್ಲಿದ್ದರೆ ಮುಂಬೈ 47 ನೇ ಸ್ಥಾನದಲ್ಲಿದೆ.
ಒಟ್ಟಾರೆ ಬೆಂಗಳೂರು ಟ್ರಾಫಿಕ್ ವಿಶ್ವದ ಇತರೇ ಬೃಹತ್ ನಗರಗಳನ್ನು ಮೀರಿಸಿ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ 2ನೇ ನಗರ ಎಂಬ ಕುಖ್ಯಾತಿ ಗಳಿಸಿದೆ.
ಬೆಂಗಳೂರಿನಲ್ಲಿ ವಾಹನಗಳ ವೇಗ ಗಂಟೆಗೆ ಸರಾಸರಿ 18 ಕಿ.ಮೀ ಇದ್ದು, 10 ದಿನಗಳಲ್ಲಿ ಬೆಂಗಳೂರಿಗರು 260 ಗಂಟೆ ರಸ್ತೆಯಲ್ಲೇ ಕಳೆಯುತ್ತಾರೆ. ಈ ಪೈಕಿ 134 ಗಂಟೆ ಟ್ರಾಫಿಕ್ನಲ್ಲೇ ಸಿಲುಕಿಕೊಳ್ಳುತ್ತಾರೆ. ಶುಕ್ರವಾರ ಸಂಜೆ 6 ರಿಂದ 7 ಗಂಟೆವರೆಗೆ ಅತೀ ಹೆಚ್ಚು ಟ್ರಾಫಿಕ್ ಇರುತ್ತದೆ. 2020ರಲ್ಲಿ ಸಂಚಾರ ದಟ್ಟಣೆ ಪಟ್ಟಿಯಲ್ಲಿ ಬೆಂಗಳೂರು 6ನೇ ಸ್ಥಾನದಲ್ಲಿತ್ತು. 2021ರಲ್ಲಿ ಬೆಂಗಳೂರು ಸಂಚಾರ ದಟ್ಟಣೆಯಲ್ಲಿ 10ನೇ ಸ್ಥಾನದಲ್ಲಿತ್ತು. ಆದ್ರೀಗ 2022ರಲ್ಲಿ ಸಂಚಾರ ದಟ್ಟಣೆಯಲ್ಲಿ ಬೆಂಗಳೂರು 2ನೇ ಸ್ಥಾನಕ್ಕೇರಿದೆ.