ಆಫ್ರಿಕಾದಿಂದ ಸಿಲಿಕಾನ್‌ ಸಿಟಿಗೆ  ಹೊಸ ಅತಿಥಿಗಳ ಎಂಟ್ರಿ! – ಬನ್ನೇರುಘಟ್ಟ ಮೃಗಾಲಯಕ್ಕೆ ಗಂಡು, ಹೆಣ್ಣು ಚೀತಾ

ಆಫ್ರಿಕಾದಿಂದ ಸಿಲಿಕಾನ್‌ ಸಿಟಿಗೆ  ಹೊಸ ಅತಿಥಿಗಳ ಎಂಟ್ರಿ! – ಬನ್ನೇರುಘಟ್ಟ ಮೃಗಾಲಯಕ್ಕೆ ಗಂಡು, ಹೆಣ್ಣು ಚೀತಾ

ಬೆಂಗಳೂರಿನ ಹೊರವಲಯದಲ್ಲಿ ಅತ್ಯಂತ ಸುಂದರವಾದ ಉದ್ಯಾನವನವೇ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ. ಇದು ನಗರವಾಸಿಗಳ ವಾರಾಂತ್ಯ ವಿಹಾರ ತಾಣವಾಗಿದೆ. ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರಿಗೆ ಗುಡ್‌ನ್ಯೂಸ್‌ ಇದೆ. ಇದೀಗ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಸ ಅತಿಥಿಗಳ ಎಂಟ್ರಿಯಾಗಿದೆ. ಅದೂ ಕೂಡ ದಕ್ಷಿಣಾ ಆಫಿಕಾದ ಅತಿಥಿಗಳು!

ಇದನ್ನೂ ಓದಿ: ರಾಜ್ಯದ ಜನರಿಗೆ ದರ ಏರಿಕೆ ಶಾಕ್!‌ – ವಿದ್ಯುತ್ ದರ ಏರಿಕೆ ಯೂನಿಟ್‌ಗೆ 56 ಪೈಸೆ ಹೆಚ್ಚಳ!

ಮಧ್ಯರಾತ್ರಿ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಹೊಸ ಅತಿಥಿಗಳ ಆಗಮನವಾಗಿದೆ. ಎರಡು ಗಂಡು ಮತ್ತು ಎರಡು ಹೆಣ್ಣು ಚಿತಾ (ಸಿವಂಗಿ) ದಕ್ಷಿಣ ಆಫ್ರಿಕಾದಿಂದ ಬನ್ನೇರುಘಟ್ಟ ಮೃಗಾಲಯಕ್ಕೆ ಬಂದಿವೆ. ದಕ್ಷಿಣ ಆಫ್ರಿಕಾದಿಂದ ತರಿಸಿಕೊಂಡ 4 ಚೀತಾಗಳನ್ನು ವಿಮಾನ ನಿಲ್ದಾಣಕ್ಕೆ ತೆರಳಿ ಅರಣ್ಯ ಸಚಿವ ಈಶ್ವರ ಖಂಡ್ರೆ ಬರಮಾಡಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದ ಚೀತಾಗಳಿಗೆ ವಾತಾವರಣ, ಹವಾಮಾನ ಬದಲಾವಣೆಯಾಗುವ ಕಾರಣ, ಅವುಗಳಿಗೆ ಯಾವುದೇ ತೊಂದರೆ ಆಗದಂತೆ ಮತ್ತು ಆರೋಗ್ಯ ಸಮಸ್ಯೆ ಎದುರಾಗದ ರೀತಿಯಲ್ಲಿ ಸೂಕ್ತ ನಿಗಾ ಇಡಬೇಕು. ವನ್ಯಜೀವಿಗಳನ್ನು ಕ್ವಾರಂಟೈನಲ್ಲಿಡಬೇಕು, 30 ದಿನಗಳ ಕಾಲ ಗೊತ್ತುಪಡಿಸಿದ ಆಹಾರ ನೀಡಬೇಕು, ಈ ವಿದೇಶಿ ವನ್ಯಜೀವಿಗಳಿಗೆ ಸೋಂಕು ಏನಾದರೂ ಇದೆಯೇ ಎಂದು ಪರಿಶೀಲಿಸಬೇಕು. ಪ್ರಾಣಿಗಳನ್ನು ಸುರಕ್ಷಿತವಾಗಿ ಬನ್ನೇರುಘಟ್ಟಕ್ಕೆ ಸಾಗಿಸಬೇಕು ಎಂದು ಅಧಿಕಾರಿಗಳಿಗೆ ಮತ್ತು ಪಶುವೈದ್ಯಾಧಿಕಾರಿಗೆ ಸಚಿವರು ತಿಳಿಸಿದ್ದಾರೆ.

Shwetha M