ಬೆಂಗಳೂರಿನ ಜನರಿಗೆ ಬಿಗ್ ಶಾಕ್ – ಏಪ್ರಿಲ್‌ 1ರಿಂದ ನೀರಿನ ದರ ಶೇ.3 ರಷ್ಟು ಏರಿಕೆ 

ಬೆಂಗಳೂರಿನ ಜನರಿಗೆ ಬಿಗ್ ಶಾಕ್ – ಏಪ್ರಿಲ್‌ 1ರಿಂದ ನೀರಿನ ದರ ಶೇ.3 ರಷ್ಟು ಏರಿಕೆ 

ಎಲ್‌ಪಿಜಿ ಸಿಲಿಂಡರ್‌  ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಳಲುತ್ತಿರುವ ಜನರಿಗೆ ಈಗ ಜಲಮಂಡಳಿ   ಶಾಕ್‌ ಕೊಟ್ಟಿದೆ. ಏಪ್ರಿಲ್‌ 1ರಿಂದ ನೀರಿನ ದರ ಶೇ.3 ರಷ್ಟು ಏರಿಕೆ  ಮಾಡುವುದಕ್ಕೆ ಮುಂದಾಗಿದೆ. ಸಮಿತಿಯ ನಿರ್ಧಾರದಂತೆ ಸಾಂಪ್ರದಾಯಿಕವಾಗಿ ದರ ಹೆಚ್ಚಿಸಲು ಜಲಮಂಡಳಿ ಮುಂದಾಗಿದೆ. ಜನರಿಗೆ ಅನನುಕೂಲವೂ ಆಗದಂತೆ ನೋಡಿಕೊಂಡು ಶೇ.3 ರಷ್ಟು ಮಾತ್ರ ದರ ಏರಿಕೆ ಮಾಡಲು ನಿರ್ಧರಿಸಿದೆ. ಇದರಿಂದ ಪ್ರತಿ ಲೀಟರ್‌ ನೀರಿಗೆ 1 ಪೈಸೆ ಮತ್ತು ವಾಣಿಜ್ಯ ಬಳಕೆದಾರರಿಗೆ ಪ್ರತಿ ಲೀಟರ್‌ ನೀರಿಗೆ 1.9 ಪೈಸೆ ಹೆಚ್ಚಳವಾಗಲಿದೆ.

ಇದರೊಂದಿಗೆ ಸ್ಯಾನಿಟರಿ ಚಾರ್ಚ್ ಕೂಡ ಹೆಚ್ಚಾಗಲಿದೆ. ಬೋರ್‌ವೆಲ್ ಇರುವ ಮನೆಗಳಿಗೆ 30 ರೂ. ಮತ್ತು ಕೈಗಾರಿಕೆಗಳಿಗೆ 120 ರೂ. ಚಾರ್ಜ್‌ ಆಗಲಿದೆ. ಲಮಂಡಳಿಯಿಂದ ಪ್ರತಿನಿತ್ಯ 12 ಲಕ್ಷ ಮನೆಗಳಿಗೆ ನೀರು ಸರಬರಾಜು ಆಗುತ್ತಿದ್ದು, ಮೇ ತಿಂಗಳ ಬಿಲ್ ನಲ್ಲಿ ಹೊಸ ದರ ಜಾರಿಗೆ ಬರಲಿದೆ.

ಇದನ್ನೂ ಓದಿ: ಟಿಪ್ಪರ್ ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಖಾಸಗಿ ಬಸ್!‌ – 12 ಮಂದಿ ಸಜೀವ ದಹನ!

BWSSB ಕಳೆದ ಎರಡು ವರ್ಷಗಳಿಂದ‌ ಪ್ರತಿ‌ ಮೂರು ತಿಂಗಳಿಗೊಮ್ಮೆ ನೀರಿನ ದರ ಏರಿಕೆ ಮಾಡುತ್ತಿದ್ದು, ವರ್ಷದಲ್ಲಿ ನಾಲ್ಕು ಬಾರಿ ದರ ಏರಿಕೆ ಬರೆ ಹಾಕಿ ಜನರಿಂದ ವಸೂಲಿ ಮಾಡುತ್ತಿದೆ. ಪ್ರತಿ ಮೂರು ತಿಂಗಳಿಗೆ ಶೇಕಡಾ 3ರಷ್ಟು ಬೆಲೆ ಹೆಚ್ಚಳದಂತೆ ವರ್ಷಕ್ಕೆ ಶೇಕಡಾ 12ರಷ್ಟು ಹೆಚ್ಚುವರಿ ಹೊರೆ ಜನರ ಮೇಲೆ ಹಾಕಲಾಗ್ತಿದೆ. ಹೀಗಿದ್ದರೂ ಈ ಬಗ್ಗೆ ಯಾವುದೇ ಪ್ರಕಟಣೆ ನೀಡದೆ, ಸಾರ್ವಜನಿಕರ ಗಮನಕ್ಕೂ ತರದೆ ನಾಗರಿಕೆ ಸುಲಿಗೆ ಮಾಡುವ ಕೆಲಸ BWSSB ಕಡೆಯಿಂದ ಆಗ್ತಿದೆ ಎಂದು ಬಿಜೆಪಿ ಮುಖಂಡ ಎನ್. ಆರ್. ರಮೇಶ್ ಆರೋಪಿಸಿದ್ದಾರೆ.

ಇನ್ನು ಒಳಚರಂಡಿ ಉಪಕರವನ್ನು ಆಯಾ ತಿಂಗಳ ಕುಡಿಯುವ ನೀರಿನ ಶುಲ್ಕದಲ್ಲಿ ಶೇ. 31.25ರಷ್ಟು ಏರಿಕೆ ಮಾಡಲಾಗಿದೆ. ಜಲಮಂಡಳಿ ಸಂಸ್ಥೆಯ ಆರ್ಥಿಕ ಸ್ಥಿತಿ ಸುಧಾರಿಸಲು ಕುಡಿಯುವ ನೀರಿನ ಶುಲ್ಕದ ಏರಿಕೆ ಮತ್ತು ಒಳಚರಂಡಿ ಉಪಕರದ ಹೆಚ್ಚಳ ಅನಿವಾರ್ಯ ಎಂಬ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮುಂದಿಡಲಾಗಿತ್ತು. ಈಗ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ BWSSB ಆಡಳಿತ ಮಂಡಳಿಯು ಪ್ರತಿ ಮೂರು ತಿಂಗಳಿಗೊಮ್ಮೆ ಒಳಚರಂಡಿ ಉಪಕರದ ಪ್ರಮಾಣವನ್ನು ಏರಿಕೆ ಮಾಡುತ್ತಿದೆ ಎನ್ನಲಾಗಿದೆ.

Kishor KV