ಮೊಂತಾ ಚಂಡಮಾರುತ ಎಫೆಕ್ಸ್! – ಗಗನಕ್ಕೇರಿದ ತರಕಾರಿ ಬೆಲೆ

ಮಳೆಗಾಲ ಮುಗಿತಾ ಬಂದ್ರೂ ಮಳೆ ನಿಲ್ಲುವಂತೆ ಕಾಣುತ್ತಿಲ್ಲ. ದೇಶದ ಹಲವು ಭಾಗಗಳಲ್ಲಿ ಮಳೆ ಸುರಿಯುತ್ತಿದೆ. ಮೊಂತಾ ಚಂಡಮಾರುತ ಅಪ್ಪಳಿಸಿದ್ದು, ರಾಜ್ಯದಲ್ಲೂ ಭಾರಿ ಮಳೆಯಾಗ್ತಿದೆ. ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಬೆಳೆಗಳು ಕೂಡ ನಾಶ ಆಗಿವೆ. ಇದ್ರಿಂದಾಗಿ ತರಕಾರಿ ಬೆಲೆ ಗಗನಕ್ಕೇರಿದೆ.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಅರಶಿನ ನೀರು ಕುಡಿದ್ರೆ ಎಷ್ಟೊಂದು ಪ್ರಯೋಜನ!
ಮೊಂತಾ ಚಂಡಮಾರುತ ಎಫೆಕ್ಟ್‌ನಿಂದಾಗಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಕರ್ನಾಟಕದ ಕೆಲ ಭಾಗದಲ್ಲೂ ಭಾರೀ ಮಳೆಯಾಗುತ್ತಿದೆ. ಭಾರಿ ಮಳೆಯಿಂದಾಗಿ ತರಕಾರಿ ಬೆಳೆ ಹಾಳಾಗಿದ್ದು, ಸರಿಯಾಗಿ ಬೆಳೆ ಬಂದಿಲ್ಲ. ಬೆಳೆದ ಬೆಳೆ ಕೈಗೆ ಬರದ ಕಾರಣ ತರಕಾರಿಗಳ ಬೆಲೆ ಗಗನಕ್ಕೇರಿದೆ. ಹೆಚ್ಚಾಗಿರುವ ತರಕಾರಿ ಬೆಲೆ ಕೇಳಿದ ಗ್ರಾಹಕರು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದು, ವ್ಯಾಪಾರಿಗಳು ಖರೀದಿದಾರರಿಲ್ಲದೇ ನಷ್ಟವಾಗುತ್ತಿದೆಯೆಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಅಕ್ಟೋಬರ್ ಕೊನೆಯವರೆಗೂ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ತರಕಾರಿ ಬೆಲೆ ಇನ್ನಷ್ಟು ಹೆಚ್ಚಳವಾಗುವ ಆತಂಕವೂ ಎದುರಾಗಿದೆ.
ಬೆಂಳೂರಿನಲ್ಲಿ ಇವತ್ತಿನ ತರಕಾರಿ ಬೆಲೆ
- ನುಗ್ಗೆಕಾಯಿ-ಕೆಜಿ- 140 ರಿಂದ 150
- ಬಟಾಣಿ ಫಾರಂ- 260 ರಿಂದ 270
- ಬೀನ್ಸ್- 90 ರಿಂದ 100
- ಈರುಳ್ಳಿ- 40 ರಿಂದ 50
- ಜವಳಿಜಕಾಯಿ- 100 ರಿಂದ 120
- ಶುಂಠಿ- 100 ರಿಂದ 110
- ಕ್ಯಾರೆಟ್- 90 ರಿಂದ 100
- ತೊಗರಿಕಾಯಿ-80 ರಿಂದ 100
- ಹಸಿ ಮೆಣಸಿನಕಾಯಿ- 80 ರಿಂದ 100
- ಟೊಮೊಟೋ- 30 ರಿಂದ 40
- ಆಲೂಗಡ್ಡೆ- 50 ರಿಂದ 60
- ಹೀರೇಕಾಯಿ- 50 ರುಪಾಯಿ 60
- ಬದನೆಕಾಯಿ- 60 ರಿಂದ 70
- ಬೆಂಡೆಕಾಯಿ- 70 ರಿಂದ 80
- ಬಿಟ್ರೂಟ್- 70 ರಿಂದ 80
- ಹುಕೋಸು- 80 ರಿಂದ 90
- ಕ್ಯಾಪ್ಸಿಕಂ- 80 ರಿಂದ 90

ನೋಡಿರಿ

