ಇನ್ನುಮುಂದೆ ಟ್ರಾಫಿಕ್​​ ರೂಲ್ಸ್​ ಬ್ರೇಕ್‌ ಮಾಡಿದ್ರೆ ದಂಡದ ಜೊತೆಗೆ ಬರಲಿದೆ ಕ್ಯೂಆರ್​​ ಕೋಡ್!

ಇನ್ನುಮುಂದೆ ಟ್ರಾಫಿಕ್​​ ರೂಲ್ಸ್​ ಬ್ರೇಕ್‌ ಮಾಡಿದ್ರೆ ದಂಡದ ಜೊತೆಗೆ ಬರಲಿದೆ ಕ್ಯೂಆರ್​​ ಕೋಡ್!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಟ್ರಾಫಿಕ್​ ರೂಲ್ಸ್​​ ಬಗ್ಗೆ ಪೊಲೀಸರು ಎಷ್ಟು ಅರಿವು ಮೂಡಿಸುತ್ತಿದ್ದರೂ, ಕೆಲವರು ನಿಯಮಗಳನ್ನು ಉಲ್ಲಂಘನೆ ಮಾಡುತ್ತಲೇ ಇರುತ್ತಾರೆ. ಇಂತವರಿಗಾಗಿಯೇ ಸಂಚಾರಿ ಪೊಲೀಸರು ಹೊಸ ಕ್ರಮ ಕೈಗೊಂಡಿದ್ದಾರೆ. ಇನ್ನುಮುಂದೆ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ್ರೆ ದಂಡದ ಜೊತೆಗೆ ಕ್ಯೂ ಆರ್‌ ಕೋಡ್‌ ಕೂಡ ಬರಲಿದೆ.

ಇದನ್ನೂ ಓದಿ: ಮಮತಾ ಸರ್ಕಾರ ಉರುಳಿಸೊವರೆಗೂ ತಲೆ ಕೂದಲು ಬೆಳೆಸಲ್ಲ ಎಂದಿದ್ದ ಕೈ ನಾಯಕ ಬಿಜೆಪಿ ಸೇರ್ಪಡೆ

ಹೌದು, ಇಷ್ಟು ದಿನಗಳ ಕಾಲ ಸಂಚಾರಿ ನಿಯಮ ಉಲ್ಲಂಘಿಸಿದವರ ಮನೆಗೆ ನೋಟಿಸ್​​ ಹೋಗುತ್ತಿತ್ತು. ನೋಟಿಸ್​ ಬಂದರೂ ಹಲವರು ದಂಡ ಕಟ್ಟದೆ ತಕಾರಾರು ತೆಗೆಯುತ್ತಿದ್ದರು. ಇದರಿಂದ ಟ್ರಾಫಿಕ್​ ಪೊಲೀಸರು ಕಿರಿಕಿರಿ ಅನುಭವಿಸುತ್ತಿದ್ದರು. ಆದರೆ ಮುಂದಿನ ದಿನಗಳಲ್ಲಿ ಸಂಚಾರಿ ಪೊಲೀಸರು ಹೈ ಟೆಕ್ನಾಲಜಿ ಬಳಸಿ ದಂಡ ವಸೂಲಿಗೆ ಮುಂದಾಗಿದ್ದಾರೆ. ದಂಡದ ನೋಟಿಸ್ ಜೊತೆಗೆ ಕ್ಯೂ ಆರ್ ಕೊಡ್ ಕೂಡ ಮನೆ ಬಾಗಲಿಗೆ ಬರಲಿದೆ.

ಪೊಲೀಸರು ಕಳುಹಿಸಿದ ಈ ಕ್ಯೂಆರ್ ಕೋಡ್​ ಅನ್ನು ಸ್ಕ್ಯಾನ್ ಮಾಡುತಿದ್ದಂತೆ ನೀವು ಎಷ್ಟು ಬಾರಿ, ಎಲ್ಲೆಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದೀರಿ ಎಂಬುವುದು ಗೊತ್ತಾಗಲಿದೆ. ನೀವು ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡುತ್ತಿದ್ದಂತೆ ನಿಯಮ ಉಲ್ಲಂಘನೆಯ ಫೋಟೋ ನಿಮ್ಮ ಮೊಬೈಲ್​​ನಲ್ಲಿ ಕಾಣಲಿದೆ. ಜೊತೆಗೆ ದಂಡ ಪಾವತಿಯ ಲಿಂಕ್​ ಸಹ ನಿಮ್ಮ ಮೊಬೈಲ್​ಗೆ ಬರಲಿದೆ.

Shwetha M