ಕೊರೊನಾ ಬಂದಿರೋದು ಮನುಷ್ಯರಿಗಾ.. ವಾಹನಕ್ಕಾ? – ​ ಸ್ಕೂಟರ್‌ ನಂಬರ್‌ ಪ್ಲೇಟ್‌ಗೆ ಮಾಸ್ಕ್‌ ಹಾಕಿದ ಭೂಪ!

ಕೊರೊನಾ ಬಂದಿರೋದು ಮನುಷ್ಯರಿಗಾ.. ವಾಹನಕ್ಕಾ? – ​ ಸ್ಕೂಟರ್‌ ನಂಬರ್‌ ಪ್ಲೇಟ್‌ಗೆ ಮಾಸ್ಕ್‌ ಹಾಕಿದ ಭೂಪ!

ಈಗ ಎಲ್ಲೆ ಕೊರೊನಾದ್ದೇ ಹಾವಳಿ. ಮಾಸ್ಕ್‌ ಹಾಕೋಳಿ, ಸ್ಯಾನಿಟೈಸರ್‌ ಬಳಸಿ ಅನ್ನೋ ಮಾತುಗಳೇ ಕೇಳಿ ಬರ್ತಿದೆ. ಆದ್ರೆ ಇಲ್ಲೊಂದು ವೈರಲ್‌ ಆದ ಫೋಟೋ ನೋಡಿದ್ರೆ, ಕೊರೊನಾ ಬಂದಿರೋದು ಮನುಷ್ಯರಿಗಾ ಅಥವಾ ವಾಹನಕ್ಕಾ ಅನ್ನೋ ಡೌಟ್‌ ಬರ್ತಿದೆ. ಇಲ್ಲೊಬ್ಬ ಭೂಪ ಟ್ರಾಫಿಕ್‌ ಫೈನ್‌ನಿಂದ ತಪ್ಪಿಸಿಕೊಳ್ಳಲು  ಸ್ಕೂಟರ್‌ ನ ನಂಬರ್‌ ಪ್ಲೇಟ್‌ಗೆ ಮಾಸ್ಕ್‌ ಹಾಕಿ ಓಡಾಡಿದ್ದಾನೆ. ಇದರ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಕೋಟಿ ಕೋಟಿ ಆದಾಯ ಬಂದರೂ ಭಕ್ತರಿಗಿಲ್ಲ ಮೂಲಸೌಕರ್ಯ – ಅಯ್ಯಪ್ಪನ ದರ್ಶನಕ್ಕೆ ಬರುವವರ ಸ್ಥಿತಿ ಅಯ್ಯಯ್ಯಪ್ಪಾ…

ಹೆಲ್ಮೆಟ್​ ಹಾಕದೆ ದ್ವಿಚಕ್ರ ವಾಹನ ಚಲಾಯಿಸಿದರೇ ಸಂಚಾರಿ ಪೊಲೀಸರು ಗಾಡಿಯ ನಂಬರ್​ ಫ್ಲೇಟ್​ ಪೋಟೋ ತೆಗೆದು ದಂಡ ಹಾಕುತ್ತಾರೆ. ಅಲ್ಲದೆ ಸಿಸಿಟಿವಿಯಲ್ಲೂ ಬೈಕ್​​ನ​ ನಂಬರ್ ಕ್ಯಾಪ್ಚರ್ ಆಗಿ, ದಂಡ ಬೀಳುತ್ತದೆ. ಅದೇ ನಂಬರ್​ ಫ್ಲೇಟ್​ಗೆ ಮಾಸ್ಕ್​ ಹಾಕಿ, ನಿಯಮ ಉಲ್ಲಂಘಿಸಿದರೇ ಪೊಲೀಸರಿಗೆ ಫೋಟೋ ತೆಗೆದುಕೊಳ್ಳಲು ಸಾಧ್ಯವಾಗುದಿಲ್ಲ. ಹೀಗಾಗಿ ಟ್ರಾಫಿಕ್ ಫೈನ್​ನಿಂದ ತಪ್ಪಿಸಿಕೊಳ್ಳಲು ಇಲ್ಲೊಬ್ಬ ಭೂಪ ಖತರ್ನಾಕ್‌ ಐಡಿಯಾ ಮಾಡಿದ್ದಾನೆ.  ಸ್ಕೂಟಿಯ ಹಿಂಬದಿ​ ನಂಬರ್​ ಪ್ಲೇಟ್​​ಗೆ ಮಾಸ್ಕ್ ಹಾಕಿ, ಯಲಹಂಕದ ಕೋಗಿಲು ಕ್ರಾಸ್ ಬಳಿ ಓಡಾಡಿದ್ದಾನೆ.

ಸ್ಕೂಟರ್‌ ಸವಾರ ಹೆಲ್ಮೆಟ್‌ ಧರಿಸಿರಲಿಲ್ಲ. ಹಿಂಬದಿ ಸವಾರರ ಬಳಿ ಕೂಡ ಹೆಲ್ಮೆಟ್‌ ಇರಲಿಲ್ಲ. ಹೀಗಾಗಿ ಈ ಖತರ್ನಾಕ್‌ ದಂಡದಿಂದ ತಪ್ಪಿಸಿಕೊಳ್ಳಬಹುದು ಪ್ಲ್ಯಾನ್‌ ಮಾಡಿದ್ದಾನೆ. ಸದ್ಯ ಇದರ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Shwetha M