ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ್ರೆ ಕ್ರಿಮಿನಲ್‌ ಕೇಸ್‌! – ಬೆಂಗಳೂರು ಸವಾರರೇ ಎಚ್ಚರ..

ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ್ರೆ ಕ್ರಿಮಿನಲ್‌ ಕೇಸ್‌! – ಬೆಂಗಳೂರು ಸವಾರರೇ ಎಚ್ಚರ..

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಅನೇಕರು ಸಾಕಷ್ಟು ಮಂದಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡುತ್ತಾರೆ. ಇದರಿಂದಾಗಿ ಅನೇಕ ಅಪಘಾತಗಳು ಸಂಭವಿಸುತ್ತಿದೆ. ಅಷ್ಟೇ ಅಲ್ಲದೇ ಇತರ ಸವಾರರಿಗೂ ತೊಂದರೆಯಾಗುತ್ತಿದೆ. ಇದನ್ನು ತಡೆಗಟ್ಟಲು ಸಂಚಾರಿ ಪೊಲೀಸರು ಹೊಸ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ: ಕಡಿತಗೊಳಿಸಿದ್ದ ಪ್ರೋತ್ಸಾಹ ಧನ ಮತ್ತೆ ನೀಡಲು ಮುಂದಾದ ಹಾಲಿನ ಒಕ್ಕೂಟ – ಗ್ರಾಹಕರಿಗೆ ಬೆಲೆ ಏರಿಕೆ ಭೀತಿ!

ನಗರದಲ್ಲಿ ಬೇಕಂತಲೋ ಅಥವಾ ಅವಸರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದವರಿಂದ ಸಂಚಾರಿ ಪೊಲೀಸರು ಸೂಕ್ತ ದಂಡ ವಸೂಲಿ ಮಾಡಿ, ನಿಯಮ ಉಲ್ಲಂಘಿಸಿದಂತೆ ಎಚ್ಚರಿಸುವುದರ ಜೊತೆಗೆ ಕ್ರಿಮಿನಲ್​ ಕೇಸ್ ಕೂಡ​ ದಾಖಲಿಸುತ್ತಿದ್ದಾರೆ.

ಒನ್​ ವೇಯಲ್ಲಿ ಸಂಚರಿಸುವುದು, ರಸ್ತೆಯಲ್ಲಿ ವಾಹನ ಪಾರ್ಕ್‌ ಮಾಡಿದರೇ ಸಂಚಾರಿ ಪೊಲೀಸರು ಐಪಿಸಿ ಸೆಕ್ಷನ್ 283 ಅಡಿಯಲ್ಲಿ ಎಫ್​ಐಆರ್ ದಾಖಲು ಮಾಡಿ ವಾಹನದ ಮೇಲೆ ಮತ್ತು ಚಾಲಕನ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತಿದ್ದಾರೆ. ಒಮ್ಮೆ ಎಫ್​ಐಆರ್ ದಾಖಲಾದರೆ ವಾಹನ ಸೀಜ್ ಮಾಡಲಾಗುತ್ತದೆ. ಸೀಜ್ ಆದ ವಾಹನವನ್ನು ನ್ಯಾಯಾಲಾಯದ ಅನುಮತಿ ಪಡೆದು ಬಿಡಿಸಿಕೊಳ್ಳಬೇಕು.

ಒನ್ ​ವೇಯಲ್ಲಿ ವಾಹನಗಳು ಸಂಚಾರ ಮಾಡುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಈ ಹಿನ್ನಲೆ ಒನ್ ವೇ ಮತ್ತು ಫುಟ್ಬಾತ್ ಮೇಲೆ ವಾಹಾನ ಚಾಲನೆ ಹಾಗೂ ನಡು ರಸ್ತೆಯಲ್ಲಿ ವಾಹನ ಪಾರ್ಕ್ ಮಾಡಿದರೇ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

suddiyaana