ವಾಹನ ಸವಾರರಿಗೆ ಬಿಗ್‌ ಶಾಕ್!‌ –  ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್‌ ಆರಂಭ!

ವಾಹನ ಸವಾರರಿಗೆ ಬಿಗ್‌ ಶಾಕ್!‌ –  ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್‌ ಆರಂಭ!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದ್ಕಡೆ ಟಾಫ್ರಿಕ್ ಸಮಸ್ಯೆಯಾದ್ರೆ, ಮತ್ತೊಂದ್ಕಡೆ ಸಿಕ್ಕಸಿಕ್ಕಲ್ಲಿ ವಾಹನ ಪಾರ್ಕ್‌ ಮಾಡ್ತಿದ್ದಾರೆ. ಇದೀಗ ವಾಹನ ಸವಾರರಿಗೆ ಬಿಗ್‌ ಶಾಕ್‌ ಎದುರಾಗಿದೆ. ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಆರಂಭವಾಗಲಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ! –  ಕರಾವಳಿ  ಸೇರಿದಂತೆ 17 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್‌!

ಸಿಲಿಕಾನ್ ಬೆಂಗಳೂರಿನಲ್ಲಿ ಜಿಬಿಎ ಹಾಗೂ ಪೊಲೀಸ್‌ ಇಲಾಖೆ ಫುಲ್‌ ಅಲರ್ಟ್‌ ಆಗಿದೆ. ಇದೀಗ ಸಿಕ್ಕ ಸಿಕ್ಕಲ್ಲಿ ಪಾರ್ಕ್‌ ಮಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ ಅಧಿಕಾರಿಗಳು. ಸಿಕ್ಕಸಿಕ್ಕಲ್ಲಿ ವಾಹನ ಪಾರ್ಕಿಂಗ್‌ ಮಾಡುತ್ತಿರುವುದರಿಂದ ಇತ್ತೀಚಿಗೆ ಟ್ರಾಫಿಕ್ ಜಾಸ್ತಿಯಾಗಿದೆ. ಇದರ ಬಗ್ಗೆ ದೂರುಗಳು ಬಂದ ಹಿನ್ನೆಲೆ ಕೆಲ ದಿನಗಳ ಹಿಂದಷ್ಟೆ ಡಿಸಿಎಂ ಡಿಕೆ ಶಿವಕುಮಾರ್ ನಗರದಲ್ಲಿ ಮತ್ತೆ ಟೋಯಿಂಗ್ ಆರಂಭಿಸೋ ಬಗ್ಗೆ ಹೇಳಿಕೆ ನೀಡಿದ್ರು. ಈ ಹೇಳಿಕೆ ಬೆನ್ನಲ್ಲೆ ಅಲರ್ಟ್ ಆಗಿದ್ದ ಪೊಲೀಸ್ ಇಲಾಖೆ, ಟೋಯಿಂಗ್ ಮಾಡೋಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಇದೀಗ ಬೆಂಗಳೂರಿನಲ್ಲಿ ಟೋಯಿಂಗ್‌ಗೆ ಬೇಕಾದ ಎಲ್ಲಾ ಸಿದ್ಧತೆಯನ್ನು ಜಿಬಿಎ ಮತ್ತು ಪೊಲೀಸ್ ಇಲಾಖೆ ಮಾಡಿಕೊಂಡಿದ್ದು, ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದೆ.

ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಿಗೆ ತಲಾ ಎರಡು ವಾಹನಗಳಂತೆ ಹತ್ತು ಟೋಯಿಂಗ್ ವಾಹನಗಳನ್ನು ಸರ್ಕಾರದ ವತಿಯಿಂದ ನೀಡಿದ್ದು, ಅದರಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ ಸೇರಿ ಓರ್ವ ಕಾನ್‌ಸ್ಟೇಬಲ್ ಮತ್ತು ವಾಹನಗಳನ್ನು ಟೋ ಮಾಡಲು ಜಿಬಿಎಯಿಂದ ನಾಲ್ಕು ಸಿಬ್ಬಂದಿ ನೇಮಿಸಲಾಗಿದೆ. ಟೋಯಿಂಗ್ ವಾಹನದ ಮುಂಭಾಗ ಮತ್ತು ಹಿಂಭಾಗದಲ್ಲಿ ಸಿಸಿಟಿವಿ ಅಳವಡಿಸಿದ್ದು, ಯಾವುದೇ ಅವಘಡ ಅಥವ ಗಲಾಟೆಗಳು ನಡೆದ್ರೆ ಅದನ್ನು ಸೆರೆಹಿಡಿಯಲಾಗುತ್ತದೆ. ಆ ಮೂಲಕ ಸಿಬ್ಬಂದಿಯ ವರ್ತನೆ ಮೇಲೆ ಹಿರಿಯ ಅಧಿಕಾರಿಗಳು ಕಣ್ಣೀಡಲಿದ್ದಾರೆ. ಮುಖ್ಯವಾಗಿ ಅತಿ ಹೆಚ್ಚು ಟ್ರಾಫಿಕ್ ಆಗುವ ರಸ್ತೆಗಳು, ನೋ ಪಾರ್ಕಿಂಗ್ ಜಾಗಗಳಲ್ಲಿ ಟೋಯಿಂಗ್ ಮಾಡಲು ನಿರ್ಧರಿಸಲಾಗಿದೆ.

Shwetha M