ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು – ಯಾವ ಮಾರ್ಗದಲ್ಲಿ ಸಂಚಾರ ಗೊತ್ತಾ..!?
ಬೆಂಗಳೂರು ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆಯು ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಕರ್ನಾಟಕಕ್ಕೆ ಇನ್ನೊಂದು ವಂದೇ ಭಾರತ್ ರೈಲು ಸೇವೆ ದೊರೆಯುವ ಸಾಧ್ಯತೆ ದಟ್ಟವಾಗಿದೆ. ಬೆಂಗಳೂರಿನಿಂದ ದೇಶದ ಇನ್ನೊಂದು ಪ್ರಮುಖ ನಗರಕ್ಕೆ ವಂದೇ ಭಾರತ್ ರೈಲು ಸೇವೆ ಆರಂಭಿಸುವ ಯೋಜನೆ ರೂಪಿಸಿದೆ. ಬೆಂಗಳೂರು ಮತ್ತು ಹೈದರಾಬಾದ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸಲು ಭಾರತೀಯ ರೈಲ್ವೆ ಇಲಾಖೆ ಯೋಜನೆ ರೂಪಿಸುತ್ತಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಬೇಟೆಗೆ ಹೊರಟವನಿಗೆ ನಾಯಿಯಿಂದಲೇ ಗುಂಡೇಟು! – ಪ್ರಾಣ ಬಿಟ್ಟ ಮಾಲೀಕ
ಸದ್ಯ ಕರ್ನಾಟಕದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ ಉತ್ತರ ಕರ್ನಾಟಕಕ್ಕೆ ಸಂಚಾರ ಸೇವೆ ಕಲ್ಪಿಸುವ ಬೆಂಗಳೂರು-ಹುಬ್ಬಳ್ಳಿ-ಧಾರವಾಡ-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಆರಂಭವಾಗಲಿದೆ. ಈ ನಡುವೆಯೇ ಬೆಂಗಳೂರು-ಹೈದರಾಬಾದ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭಿಸುವ ಕುರಿತು ದಕ್ಷಿಣ ಮಧ್ಯ ರೈಲ್ವೆ ಅಧಿಸೂಚನೆಯಲ್ಲಿ ಮಾಹಿತಿ ನೀಡಿದೆ. ಈ ರೈಲು ಬೆಂಗಳೂರು ಮತ್ತು ಹೈದರಾಬಾದ್ ಬಳಿಯ ಕಾಚಿಗುಡ ನಡುವೆ ಸಂಚಾರ ಸೇವೆ ಒದಗಿಸಲಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಅಧಿಸೂಚನೆಯು ತಿಳಿಸಿದೆ.
ಪ್ರಸ್ತುತ, ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ವಂದೇ ಭಾರತ್ ರೈಲು ಕಾರ್ಯಾಚರಿಸುತ್ತಿದೆ. ಗಂಟೆಗೆ 160 ಕಿಮೀ ವೇಗವನ್ನು ತಲುಪಬಲ್ಲ ವಂದೇ ಭಾರತ್ ರೈಲು, ಚೆನ್ನೈ ಮತ್ತು ಮೈಸೂರು ನಡುವಿನ 504 ಕಿಲೋಮೀಟರ್ ದೂರವನ್ನು ಕೇವಲ ಮೂರು ಗಂಟೆಗಳಲ್ಲಿ ಕ್ರಮಿಸುತ್ತದೆ.
ದಕ್ಷಿಣ ಭಾರತದಲ್ಲಿ ಸೇವೆ ಸಲ್ಲಿಸಲು ಇನ್ನೂ ಎರಡು ರೈಲುಗಳನ್ನು ನಿಯೋಜಿಸಲಾಗಿದೆ. ಅವುಗಳು ತೆಲಂಗಾಣದ ಸಿಕಂದರಾಬಾದ್‌ನಿಂದ ಆಂಧ್ರಪ್ರದೇಶದ ತಿರುಪತಿ ಮತ್ತು ಮಹಾರಾಷ್ಟ್ರದ ಪುಣೆಗೆ ಸಂಚರಿಸಲಿದೆ. ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಮಾರ್ಗದ ಔಪಚಾರಿಕ ಘೋಷಣೆಯನ್ನು ನಿರೀಕ್ಷಿಸಲಾಗಿದೆ, ಇದು ದೇಶಾದ್ಯಂತ ಮತ್ತಷ್ಟು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಘೋಷಿಸುವ ನಿರೀಕ್ಷೆಯಿದೆ. ಒಟ್ಟಾರೆ ಕನ್ನಡಿಗರಿಗೆ ಇನ್ನೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ದೊರೆಯುವುದು ಪಕ್ಕಾ ಆಗಿದೆ.