ಬೇಸಿಗೆ ರಜೆ ಮಜಾ ಮಾಡಲು ಹೊರಟವರಿಗೆ ಗುಡ್‌ನ್ಯೂಸ್!‌ – ಬೆಂಗಳೂರು-ತಿರುಚಿರಾಪಲ್ಲಿ ನಡುವೆ ವಿಶೇಷ ರೈಲು

ಬೇಸಿಗೆ ರಜೆ ಮಜಾ ಮಾಡಲು ಹೊರಟವರಿಗೆ ಗುಡ್‌ನ್ಯೂಸ್!‌ – ಬೆಂಗಳೂರು-ತಿರುಚಿರಾಪಲ್ಲಿ ನಡುವೆ ವಿಶೇಷ ರೈಲು

ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗಿದೆ. ಶಾಲೆಗೆ ರಜೆ ಸಿಗುತ್ತಿದ್ದಂತೆ ಪೋಷಕರು ಟೂರ್‌ ಪ್ಲ್ಯಾನ್‌ ಮಾಡಿಕೊಂಡಿರುತ್ತಾರೆ. ಇದೀಗ ಪ್ರವಾಸಕ್ಕೆ ಹೊರಟವರಿಗೆ ರೈಲ್ವೇ ಇಲಾಖೆ ಗುಡ್‌ನ್ಯೂಸ್‌ ಕೊಟ್ಟಿದೆ. ಬೆಂಗಳೂರಿನಿಂದ ಬೇರೆಡೆಗೆ ತೆರಳುವ ಪ್ರಯಾಣಿಕರಿಗೆ ದಕ್ಷಿಣ ರೈಲ್ವೆ ವಿಶೇಷ ರೈಲು ಸೇವೆ ಘೋಷಿಸಿದೆ.

ಇದನ್ನೂ ಓದಿ: RCB Vs CSK ಪಂದ್ಯಕ್ಕೂ ಮುನ್ನವೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೊಂದು ವಿವಾದ! – ಜಿಬಿಎ ನೋಟಿಸ್!

ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಅನೇಕರು ಟೂರ್‌ ಪ್ಲ್ಯಾನ್‌ ಮಾಡಿರುತ್ತಾರೆ. ಹೀಗಾಗಿ  ಹೆಚ್ಚಿನ ಜನ ಸಂದಣಿಯನ್ನು ನಿಯಂತ್ರಿಸಲು ದಕ್ಷಿಣ ರೈಲ್ವೆ ವಿಶೇಷ ರೈಲು ಸೇವೆ ಘೋಷಿಸಿದೆ. ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್​ ಮತ್ತು ತಿರುಚಿರಾಪಲ್ಲಿ ನಡುವೆ ನಾಲ್ಕು ಟ್ರಿಪ್‌ಗಳ ವಿಶೇಷ ರೈಲು ಸಂಚರಿಸಲಿದೆ ಎಂದು ಇಲಾಖೆ ತಿಳಿಸಿದೆ.

06007 ಸಂಖ್ಯೆಯ ರೈಲು ಏಪ್ರಿಲ್ 7, 14, 21 ಮತ್ತು 28ರಂದು ಬೆಳಗ್ಗೆ 5.30ಕ್ಕೆ ತಿರುಚಿರಾಪಲ್ಲಿಯಿಂದ ಹೊರಟು ಮಧ್ಯಾಹ್ನ 1.30ಕ್ಕೆ ಬೆಂಗಳೂರಿಗೆ ಆಗಮಿಸುತ್ತದೆ. ಹಿಂತಿರುಗುವ 06008 ಸಂಖ್ಯೆಯ ರೈಲು ಮಧ್ಯಾಹ್ನ 3ಕ್ಕೆ ಹೊರಟು ರಾತ್ರಿ 10.30ಕ್ಕೆ ತಿರುಚಿರಾಪಲ್ಲಿಗೆ ತಲುಪಲಿದೆ ಎನ್ನಲಾಗಿದೆ.

ಈ ರೈಲು ಕರೂರು, ನಾಮಕ್ಕಲ್, ಸೇಲಂ, ಬಂಗಾರಪೇಟೆ ಹಾಗೂ ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ. ಒಟ್ಟು 18 ಬೋಗಿಗಳಿದ್ದು, ಎಸಿ ಚೇರ್ ಕಾರ್, ದ್ವಿತೀಯ ದರ್ಜೆ ಚೇರ್ ಕಾರ್ ಹಾಗೂ ಅಂತ್ಯೋದಯ ಕೋಚ್‌ಗಳನ್ನು ಒಳಗೊಂಡಿದೆ.

Shwetha M