ಬಾಡಿ ಕೂಲ್ ಆಗುತ್ತೆ ಅಂತ ಕಲ್ಲಂಗಡಿ ತಿನ್ನೋ ಮುನ್ನ ಹುಷಾರ್! – ಕಲರ್‌ಫುಲ್ ಕಲ್ಲಂಗಡಿ ಜೀವಕ್ಕೆ ಮಾರಕ!

ಬೇಸಿಗೆ ಕಾಲ ಶುರುವಾಗ್ತಿದ್ದಂತೆ ಬಾಯಾರಿಕೆ ಕೂಡ ಹೆಚ್ಚಾಗುತ್ತದೆ. ಎಷ್ಟು ನೀರು ಕುಡಿದ್ರೂ ಸಾಕಾಲ್ಲ. ಹೀಗಾಗಿ ಅನೇಕರು ಹೆಚ್ಚು ನೀರಿನ ಅಂಶ ಇರುವ ಹಣ್ಣುಗಳನ್ನ ಸೇವಿಸುತ್ತಾರೆ. ಇದ್ರಲ್ಲಿ ಕಲ್ಲಂಗಡಿ ಹಣ್ಣು ಕೂಡ ಒಂದು. ಈಗ ಎಲ್ಲಾ ಕಡೆ ಕಲ್ಲಂಗಡಿ ಮಾರಾಟ ಜೋರಾಗಿ ಮುಂದುವರೆದಿದ್ದು, ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಟನ್ ಗಟ್ಟಲೆ ರಸ್ತೆಬದಿಯಲ್ಲಿ ಇರಿಸಿಕೊಂದು ಇದನ್ನು ಮಾರಲಾಗುತ್ತಿದೆ. ಆದರೆ ಬೆಂಗಳೂರು ಜನರು ಈ ಹಣ್ಣನ್ನು ತಿನ್ನುವ ಮುನ್ನ ಎರಡು ಬಾರಿ ಯೋಚನೆ ಮಾಡಬೇಕಿದೆ. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಅಪಾಯ ಎದುರಾಗಬಹುದು.
ಇದನ್ನೂ ಓದಿ: ಭಾರತಕ್ಕೆ ಸಿಗಲ್ವಾ ಸೆಮೀಸ್ ಟಿಕೆಟ್? – ಯಾರು ಗೆಲ್ಬೇಕು.. ಯಾರು ಸೋಲ್ಬೇಕು?
ಬೇಸಿಗೆ ಕಾಲ ಶುರುವಾಯ್ತು ಅಂದ್ರೆ ಅನೇಕರು ಕಲ್ಲಂಗಡಿ ಹಣ್ಣನ್ನು ಸೇವಿಸ್ತಾರೆ. ಆದ್ರೆ ಕೆಲ ಕಿಡಿಗೇಡಿಗಳು ಹೆಚ್ಚು ಲಾಭ ಪಡೆಯುವ ಕಾರಣಕ್ಕೆ ಜನರ ಆರೋಗ್ಯದ ಜೊತೆಗೆ ಚೆಲ್ಲಾಟ ಆಡುತ್ತಾರೆ. ಕಲ್ಲಂಗಡಿ ಹಣ್ಣುಗಳಲ್ಲಿ ಕಲರ್‌ಫುಲ್ ಆಗಿ ಕಾಣಲು ಕೆಮಿಕಲ್ ಇಂಜೆಕ್ಟ್ ಮಾಡುದ್ದಾರೆ ಎಂಬ ದೂರು ಜೇಳಿ ಬಂದಿದೆ. ಇದೀಗ ಆರೋಗ್ಯ ಇಲಾಖೆ ಈ ಸಂಬಂಧ ಪರಿಶೀಲನೆ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಕಳೆದ ವರ್ಷ ಈ ಕೃತಕ ಬಣ್ಣದ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಬಾರಿಯೂ ಸಹ ಕಲ್ಲಂಗಡಿಗೆ ಬಣ್ಣ ಹಾಕಲಾಗುತ್ತದೆ ಎಂಬ ಅನುಮಾನ ಮೂಡಿದೆ. ಇಂಜೆಕ್ಷನ್ ಕೊಟ್ಟ ಕಲ್ಲಂಗಡಿ ಹಣ್ಣಿನಲ್ಲಿ ನೈಟ್ರೇಟ್ ಮತ್ತು ಕೃತಕ ಡೈ ಕಾರ್ಬೈಡ್, ಆಕ್ಸಿಟಾಸಿನ್ ಇರಬಹುದು ಎಂದು ತಿಳಿದುಬಂದಿದ್ದು, ಇದು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ಎಚ್ಚರಿಸಲಾಗಿದೆ. ಇಷ್ಟೇ ಅಲ್ಲದೆ ಕಲ್ಲಂಗಡಿ ಹಣ್ಣು ಬೇಗನೆ ಬೆಳೆಯಲು ನಿಟ್ರೋಜನ್ ಅನ್ನು ಬಳಕೆ ಮಾಡಲಾಗುತ್ತದೆ. ಇತ್ತ ಕ್ರೋಮೇಟ್, ಮೆಂಥಾಲ್ ಯಲ್ಲೋ ಮತ್ತು ಸುಡಾನ್ ರೆಡ್ ಬಣ್ಣವು ಕಲ್ಲಂಗಡಿಗೆ ಗಾಢವಾದ ಬಣ್ಣ ನೀಡುತ್ತದೆ. ಇದರಿಂದ ನಿಮ್ಮ ಕಿಡ್ನಿಗೆ ಗಂಭೀರ ಅಪಾಯ ಉಂಟಾಗುತ್ತದೆ.
ಬಣ್ಣ ಹಾಕಿದ ಕಲ್ಲಂಗಡಿ ಪತ್ತೆ ಮಾಡುವುದು ಹೇಗೆ?
ಇದಕ್ಕೆ ನೀವು ಹೆಚ್ಚು ಶ್ರಮ ಪಡುವ ಅಗತ್ಯ ಇಲ್ಲ. ಸಾಮಾನ್ಯವಾಗಿ ಇಂಜೆಕ್ಷನ್ ನೀಡಲಾಗುವ ಕಲ್ಲಂಗಡಿ ಗಾಢ ಬಣ್ಣ ಹೊಂದಿರುತ್ತದೆ. ಇದನ್ನು ಎರಡು ಹೋಳುಗಳಾಗಿ ಅದನ್ನು ಟಿಶ್ಯೂ ಅಥವಾ ಕಾಟನ್ ಪೇಪರ್ನಲ್ಲಿ ಒರೆಸಿ. ಈಗ ಕೆಂಪು ಬಣ್ಣ ಹತ್ತಿದರೆ ಅದಕ್ಕೆ ಕೃತಕ ಬಣ್ಣ ಬಳಕೆ ಮಾಡಿದ್ದಾರೆ ಎಂದು ಅರ್ಥ.

ನೋಡಿರಿ

