ಹೋಳಿ ಹಬ್ಬಕ್ಕೆ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗಗಳಿಗೆ ವಿಶೇಷ ರೈಲು!

ಹೋಳಿ ಹಬ್ಬಕ್ಕೆ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗಗಳಿಗೆ ವಿಶೇಷ ರೈಲು!

ಹೋಳಿ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಸಾಲು ಸಾಲು ರಜೆಗಳು ಎದುರಾಗುವ ಹಿನ್ನೆಲೆ ಬೆಂಗಳೂರಿನಿಂದ ಬೇರೆ ಬೇರೆ ಕಡೆಗಳಲ್ಲಿ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ಪ್ರಯಾಣಿಕರಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ನೈಋತ್ಯ ರೈಲ್ವೆ ಬೆಂಗಳೂರಿನಿಂದ ವಿವಿಧ ನಗರಗಳಿಗೆ ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆ ಮಾಡಿದೆ.

ಇದನ್ನೂ ಓದಿ: ರೀಲ್ಸ್ ಮಾಡೋರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ! – ಇನ್ಮುಂದೆ ಈ ಸ್ಥಳಗಳಲ್ಲಿ ರೀಲ್ಸ್‌ ಮಾಡುವಂತಿಲ್ಲ!

ಹೋಳಿ ಹಬ್ಬದ ಹಿನ್ನೆಲೆ ರೈಲ್ವೇ ಇಲಾಖೆ ಬೆಂಗಳೂರು, ಕಲಬುರಗಿ, ಬೀದರ್ ಮತ್ತು ಕೋಲ್ಕತ್ತಾ ನಡುವೆ ಹೆಚ್ಚುವರಿ ರೈಲು ಸೇವೆಗಳನ್ನು ಘೋಷಿಸಿದೆ. ಈ ವಿಶೇಷ ರೈಲುಗಳು ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ. ಇದರಿಂದಾಗಿ ಅವರು ಯಾವುದೇ ತೊಂದರೆಯಿಲ್ಲದೆ ತಮ್ಮ ಮನೆಗಳಿಗೆ ಅಥವಾ ಹಬ್ಬದ ನಿರ್ದಿಷ್ಟ ಸ್ಥಳಗಳಿಗೆ ತಲುಪಬಹುದು.

ಬೆಂಗಳೂರಿನಿಂದ ವಿಶೇಷ ರೈಲು

  • ರೈಲು ಸಂಖ್ಯೆ 06539 SMVT ಬೆಂಗಳೂರು ಟು ಬೀದರ್ ಎಕ್ಸ್‌ಪ್ರೆಸ್ ವಿಶೇಷ ರೈಲು ಶುಕ್ರವಾರ ಮತ್ತು ಭಾನುವಾರದಂದು ಕಾರ್ಯನಿರ್ವಹಿಸಲಿದ್ದು, ಮಾರ್ಚ್ 29ರ ವರೆಗೆ ಚಲಿಸಲಿದೆ.
  • ರೈಲು ಸಂಖ್ಯೆ 06540 ಬೀದರ್ ಟು ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಶನಿವಾರ ಮತ್ತು ಸೋಮವಾರದಂದು ಕಾರ್ಯನಿರ್ವಹಿಸಲಿದ್ದು, ಇದನ್ನು ಮಾರ್ಚ್ 30ರ ವರೆಗೆ ವಿಸ್ತರಿಸಲಾಗಿದೆ.
  • ಶನಿವಾರದಂದು ಕಾರ್ಯನಿರ್ವಹಿಸುವ ಬೆಂಗಳೂರು ಕಂಟೋನ್ಮೆಂಟ್-ಕಲಾಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಖ್ಯೆ 06207 ಅನ್ನು ಮಾರ್ಚ್ 28ರ ವರೆಗೆ ವಿಸ್ತರಿಸಲಾಗಿದೆ.
  • ಭಾನುವಾರದಂದು ಕಾರ್ಯನಿರ್ವಹಿಸುವ ಕಲಬುರಗಿ ಟು ಬೆಂಗಳೂರು ಕಂಟೋನ್ಮೆಂಟ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಖ್ಯೆ 06208 ಅನ್ನು ಮಾರ್ಚ್ 29 ರವರೆಗೆ ವಿಸ್ತರಿಸಲಾಗಿದೆ.
  • ಗುರುವಾರದಂದು ಕಾರ್ಯನಿರ್ವಹಿಸುವ ಸಂತ್ರಗಚಿ ಟು ಯೆಲಹಂಕಾ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಮಾರ್ಚ್ 26ರ ವರೆಗೆ ಚಲಿಸುತ್ತದೆ.
  • ಶನಿವಾರದಂದು ಕಾರ್ಯನಿರ್ವಹಿಸುವ ಯಲಹಂಕ ಟು ಸಂತ್ರಗಚಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಖ್ಯೆ 02864 ಅನ್ನು ಮಾರ್ಚ್ 28ರ ವರೆಗೆ ವಿಸ್ತರಿಸಲಾಗಿದೆ.
  • ರೈಲು ಸಂಖ್ಯೆ 06565 SMVT ಬೆಂಗಳೂರು – ಮಾಲ್ಡಾ ಟೌನ್ ಎಕ್ಸ್‌ಪ್ರೆಸ್ ವಿಶೇಷ ರೈಲು (ಜೋಲಾರಪೆಟ್ಟೈ ಮತ್ತು ಕಟ್ಪಾಡಿ ಮೂಲಕ) ಫೆಬ್ರವರಿ 22, ಮಾರ್ಚ್ 01 ಮತ್ತು ಮಾರ್ಚ್ 08, 2026 ರಂದು (ಭಾನುವಾರ) ರಾತ್ರಿ 11.40 ಕ್ಕೆ SMVT ಬೆಂಗಳೂರಿನಿಂದ ಹೊರಡಲಿದೆ.
  • ರೈಲು ಸಂಖ್ಯೆ 06566 ಮಾಲ್ಡಾ ಟೌನ್ – SMVT ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು (ಕಟ್ಪಾಡಿ ಮತ್ತು ಜೋಲರ್‌ಪೆಟ್ಟೈ ಮೂಲಕ) ಫೆಬ್ರವರಿ 25, ಮಾರ್ಚ್ 04 ಮತ್ತು 11, 2026 ರಂದು (ಬುಧವಾರ) ಮಾಲ್ಡಾ ಟೌನ್‌ನಿಂದ ಸಂಜೆ 4.00 ಗಂಟೆಗೆ ಹೊರಡಲಿದೆ.

ಮೈಸೂರು ಟು ಬೆಳಗಾವಿ ರೈಲು

ಇನ್ನು, ಮೈಸೂರು ಟು ಬೆಂಗಳಾವಿ ರೈಲು ಸಮಯದಲ್ಲಿ ಪರಿಷ್ಕರಣೆ ಮಾಡಿದ್ದು, ಮೈಸೂರು ಟು ಬೆಳಗಾವಿಗೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್ ರೈಲು (17326) ಮೈಸೂರಿನಿಂದ ಈ ಮೊದಲು ಬೆಳಗ್ಗೆ 7 ಗಂಟೆಗೆ ಹೊರಡುತ್ತಿತ್ತು. ಅದರ ಸಮಯ ಬದಲಾವಣೆಯಾಗಿ ಇದೀಗ ಬೆಳಗ್ಗೆ 08.45ಕ್ಕೆ ಸಂಚಾರ ಮಾಡಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ತಿಳಿಸಿದೆ.

ವಿಶೇಷ ರೈಲುಗಳ ಮಾಹಿತಿಗೆ ಸಹಾಯವಾಣಿ

ಈ ವಿಶೇಷ ರೈಲುಗಳು ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲಿವೆ. ವಿಸ್ತರಣೆಗೊಂಡ ರೈಲುಗಳ ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು https://enquiry.indianrail.gov.in/mntes/ ಗೆ ಭೇಟಿ ನೀಡಬಹುದು. ಅಲ್ಲದೇ ಹೆಚ್ಚಿನ ಮಾಹಿತಿಗಾಗಿ 139 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shwetha M

Leave a Reply

Your email address will not be published. Required fields are marked *