ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ 50% ಟ್ರಾಫಿಕ್ ಫೈನ್ ಡಿಸ್ಕೌಂಟ್! – 13 ದಿನಗಳಲ್ಲಿ 35.72 ಕೋಟಿ ರೂ. ಸಂಗ್ರಹ!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ 50% ಟ್ರಾಫಿಕ್ ಫೈನ್ ಡಿಸ್ಕೌಂಟ್! – 13 ದಿನಗಳಲ್ಲಿ 35.72 ಕೋಟಿ ರೂ. ಸಂಗ್ರಹ!

ಬೆಂಗಳೂರು ಟ್ರಾಫಿಕ್ ಪೊಲೀಸರು ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ಬಾಕಿ ಟ್ರಾಫಿಕ್ ದಂಡಗಳಿಗೆ 50% ರಿಯಾಯಿತಿ ಘೋಷಿಸಿದ್ದು, ಈ ಯೋಜನೆಗೆ ವಾಹನ ಸವಾರರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಂಚಾರಿ ನಿಯಮ ಉಲ್ಲಂಘಿಸಿದ ಹಳೇ ಪ್ರಕರಣಗಳನ್ನ ಕ್ಲಿಯರ್ ಮಾಡಿಕೊಳ್ಳಲು ವಾಹನ ಮಾಲೀಕರು ಮುಗಿಬಿದ್ದು ದಂಡ ಪಾವತಿ ಮಾಡುತ್ತಿದ್ದು, ಕೇವಲ 13 ದಿನಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಹರಿದುಬಂದಿದೆ.

ಇದನ್ನೂ ಓದಿ: ಬಿಗ್‌ಬಾಸ್‌ 12 ಗೆ ಗಿಲ್ಲಿನಟ ಫಿಕ್ಸ್?‌ – ‌ಡೀಲ್‌ ಫೈನಲ್‌.. ಶೋಗಳಿಂದ ನಾಪತ್ತೆ 

ಬೆಂಗಳೂರು ಸಂಚಾರಿ ಪೊಲೀಸರು ವಾಹನ ಸವಾರರಿಗೆ ಆ.23ರಿಂದ ದಂಡ ಪಾವತಿಸಲು 50% ರಿಯಾಯಿತಿ ರಿಯಾಯಿತಿ ನೀಡಿದ್ದರು. ಅದರ ಬೆನ್ನಲ್ಲೇ ಬಾಕಿಯಿದ್ದ 12,70,950 ಕೇಸ್‌ಗಳ ದಂಡ ಪಾವತಿಯಾಗಿದ್ದು. ಈವರೆಗೂ 35.72 ಕೋಟಿ ರೂ. ಸಂಗ್ರಹವಾಗಿದೆ.

ಈ ಕುರಿತು ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಅವರು ಆದೇಶ ಹೊರಡಿಸಿ, ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ಆ.23ರಿಂದ ಸೆ.12ರವರೆಗೂ ದಂಡದ ಕೇವಲ ಶೇ.50ರಷ್ಟನ್ನು ಪಾವತಿಸುವಂತೆ ರಿಯಾಯಿತಿ ಘೋಷಿಸಿದ್ದರು. ಇದಕ್ಕೂ ಮುನ್ನ ರಾಜ್ಯ ಸರ್ಕಾರ ಇದೇ ರೀತಿ ರಿಯಾಯಿತಿ ಘೋಷಿಸಿ ಭಾರೀ ಮೊತ್ತದ ದಂಡ ಸಂಗ್ರಹಿಸಿತ್ತು. ಇನ್ನೂ ಸೆ.12ರವರೆಗೆ ದಂಡ ಪಾವತಿ ಮಾಡಲು ಕಾಲಾವಕಾಶವಿದ್ದು, ಕೇವಲ ಬೆಂಗಳೂರು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಮಾತ್ರ ದಂಡ ಪಾವತಿಸಲು ಅವಕಾಶವಿರುತ್ತದೆ.

Shwetha M