ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಎಳೆದೊಯ್ದ ಚಾಲಕ ಅರೆಸ್ಟ್!‌

ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಎಳೆದೊಯ್ದ ಚಾಲಕ ಅರೆಸ್ಟ್!‌

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಗಾಡಿ ಟಚ್‌ ಆಗಿದ್ದಕ್ಕೆ ಕಾರು ಚಾಲಕ ಗೂಡ್ಸ್‌ ಚಾಲಕನನ್ನು ಎಳೆದೊಯ್ದಿರುವ ಘಟನೆ ನಡೆದಿದ್ದು, ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ! – ಇನ್ಮುಂದೆ ನೀರು ಪೋಲು ಮಾಡಿದ್ರೆ 5,000 ದಂಡ ಫಿಕ್ಸ್!‌  

ಬೆಚ್ಚಿಬೀಳಿಸುವ ಘಟನೆ ಬೆಂಗಳೂರಿನ ಹೆಚ್‌ಎಎಲ್‌ನಲ್ಲಿ ನಡೆದಿದೆ. ಕಾರು ಮತ್ತು ಗೂಡ್ಸ್ ವಾಹನ ಚಾಲಕರ ನಡುವೆ ಸಣ್ಣ ಗಲಾಟೆ ನಡೆದಿದೆ. ಗಾಡಿ ಟಚ್ ಆಗಿದ್ದಕ್ಕೆ ಕೆಎ 03 ಎನ್‌ಎನ್ 4501 ನೋಂದಣಿಯ ಮಾರುತಿ ಸುಜುಕಿ ಘಿಐ6 ಕಾರು ಚಾಲಕ ದುರ್ವರ್ತನೆ ತೋರಿದ್ದಾನೆ. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ವಾಗ್ವಾದ ನಡೆಸುತ್ತಾ ಗೂಡ್ಸ್ ಚಾಲಕ ಕಾರಿನ ಬ್ಯಾನೆಟ್ ಮೇಲೆ ಕುಳಿತಿದ್ದಾನೆ. ಸಿಟ್ಟಿನಿಂದ ಕಾರು ಚಾಲಕ ಹಾಗೆಯೇ ಕಾರು ಚಲಾಯಿಸಿ, ಗೂಡ್ಸ್ ಚಾಲಕನನ್ನು ಎಳೆದೊಯ್ದಿದ್ದಾನೆ. ವ್ಯಕ್ತಿ ಕಿರುಚಾಡಿದ್ರೂ ಕಾರು ನಿಲ್ಲಿಸಿದೇ ಒಂದು ಕಿಲೋಮೀಟರ್ ತನಕ ಎಳೆದುಕೊಂಡು ಹೋಗಿದ್ದಾನೆ.

ಘಟನೆಯ ದೃಶ್ಯವನ್ನು ಅಲ್ಲಿಯೇ ಇದ್ದ ಇನ್ನೋರ್ವ ಕಾರು ಚಾಲಕ ವಿಡಿಯೋ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾರು ಚಾಲಕ ಸುರೇಶ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಕಾರನ್ನು ಸೀಜ್ ಮಾಡಲಾಗಿದ್ದು, ಆರೋಪಿಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Shwetha M

Leave a Reply

Your email address will not be published. Required fields are marked *