ಬೆಂಗಳೂರು ಟ್ರಾಫಿಕ್ ಜಾಮ್‌ನಲ್ಲಿ ದೇಶಕ್ಕೆ ಫಸ್ಟ್! – ವಿಶ್ವದಲ್ಲೇ ನಂಬರ್ ಎರಡನೇ ಸ್ಥಾನವೂ ಬೆಂಗಳೂರಿಗೆ!

ನಮ್ಮ ಬೆಂಗಳೂರು ಟ್ರಾಫಿಕ್ ಜಾಮ್‌ನಲ್ಲೂ ದಾಖಲೆ ಬರೆದಿದೆ. ಯಾಕೆಂದರೆ ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್ ಜಾಮ್‌ನಲ್ಲೂ ದೇಶದಲ್ಲೇ ನಂಬರ್ ಒನ್ ಪ್ಲೇಸ್‌ನಲ್ಲಿದೆ. ಜೊತೆಗೆ ವಿಶ್ವದಲ್ಲೇ ಅತಿಹೆಚ್ಚು ಟ್ರಾಫಿಕ್ ಇರುವ ನಗರಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ:ಖಾಸಗಿ ಶಾಲೆಗಳ ಡೊನೇಷನ್ ದಂಧೆ ಆಟಕ್ಕೆ ಬ್ರೇಕ್ – ರೂಲ್ಸ್ ಫಾಲೋ ಮಾಡದಿದ್ರೆ 10 ಪಟ್ಟು ಫೈನ್
ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ಮಿತಿಮೀರಿದೆ. ಒಂದು ಪ್ಲೇಸ್‌ನಿಂದ ಮತ್ತೊಂದು ಜಾಗಕ್ಕೆ ಹೋಗಬೇಕೆಂದರೆ, ಟ್ರಾಫಿಕ್‌ನಲ್ಲಿ ಗಂಟೆಗಟ್ಟಲೆ ನಿಲ್ಲಬೇಕು. ಅದರಲ್ಲೂ ರೋಗಿಗಳು, ಗರ್ಭಿಣಿಯರ ಪಾಡಂತೂ ಹೇಳತೀರದಾಗಿದೆ. 400 ಕಿಲೋಮೀಟರ್ ಊರಿಂದಾದರೂ ಪ್ರಯಾಣ ಮಾಡಿಬರಬಹುದು. ಆದರೆ, ಬೆಂಗಳೂರು ಸಿಟಿ ಎಂಟ್ರಿಯಾದ ಮೇಲೆ ಮನೆ ತಲುಪಲು ಗಂಟೆಗಟ್ಟಲೆ ಕಾಯಬೇಕು. ಅಂಥಾ ಟ್ರಾಫಿಕ್ ಟೆನ್ಷನ್ ಬೆಂಗಳೂರಲ್ಲಿದೆ. ಇನ್ನೇನಾದರೂ ಸಾಲು ಸಾಲು ರಜಾ ದಿನಗಳು ಬಂದರಂತೂ ಕೇಳೋದೇ ಬೇಡ. ಸಿಟಿ ಹೊರಗೆ ಹೋಗಲು ವಾಹನ ಸವಾರರ ಪಾಡು ಯಾರಿಗೂ ಬೇಡ. ಇದೀಗ ಬೆಂಗಳೂರು ಟ್ರಾಫಿಕ್ ಬಗ್ಗೆ ಶಾಕಿಂಗ್ ನ್ಯೂಸ್ ಕೂಡಾ ಸಿಕ್ಕಿದೆ. ಖಾಸಗಿ ಸಂಸ್ಥೆಯ ವರದಿಯ ಪ್ರಕಾರ ಬೆಂಗಳೂರು ಟ್ರಾಫಿಕ್ ನಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. ಅತಿ ಹೆಚ್ಚು ಟ್ರಾಫಿಕ್ ಜಾಮ್ ಆಗುವ ನಗರಗಳ ಸಾಲಿನಲ್ಲಿ, ಬೆಂಗಳೂರು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಎರಡನೇ ಸ್ಥಾನವನ್ನು ಕೊಲ್ಕತ್ತಾ ಪಡೆದುಕೊಂಡಿದೆ. ಪುಣೆ ಮೂರನೇ ಸ್ಥಾನ ಪಡೆದುಕೊಂಡಿದೆ.
ಇನ್ನೂ ಒಂದು ಶಾಕಿಂಗ್ ವಿಚಾರ ಏನೆಂದರೆ, ವಿಶ್ವದಲ್ಲೇ ಅತಿಹೆಚ್ಚು ಟ್ರಾಫಿಕ್ ಇರುವ ನಗರಗಳಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ ಸಿಕ್ಕಿದೆ. ನಗರದಲ್ಲಿ ಪ್ರತಿದಿನ 3 ಸಾವಿರ ಹೊಸ ವಾಹನಗಳು ರೋಡಿಗಿಳಿಯುತ್ತಿರುವುದೆ ಇದಕ್ಕೆ ಕಾರಣ ಎನ್ನಲಾಗ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಒಂದೂವರೆ ಕೋಟಿ ವಾಹನಗಳಿವೆ. ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಸಂಚಾರ ವ್ಯವಸ್ಥೆ ಮತ್ತಷ್ಟೂ ಕಷ್ಟಕರವಾಗಲಿದೆ.

ನೋಡಿರಿ

