ಶಾಲೆ ಆರಂಭಕ್ಕೂ ಮುನ್ನವೇ ಪೋಷಕರಿಗೆ ಬಿಗ್‌ ಶಾಕ್!‌ – 10 ರಿಂದ 15% ಶುಲ್ಕ ಹೆಚ್ಚಿಸಿದ ಖಾಸಗಿ ಶಾಲೆಗಳು!

ಶಾಲೆ ಆರಂಭಕ್ಕೂ ಮುನ್ನವೇ ಪೋಷಕರಿಗೆ ಬಿಗ್‌ ಶಾಕ್!‌ – 10 ರಿಂದ 15% ಶುಲ್ಕ ಹೆಚ್ಚಿಸಿದ ಖಾಸಗಿ ಶಾಲೆಗಳು!

ಶೈಕ್ಷಣಿಕ ವರ್ಷ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಎಲ್ಲಾ ಶಾಲೆಗಳು ಈಗಾಗಲೇ ದಾಖಲಾತಿ ಆರಂಭಿಸಿವೆ. ಇದೀಗ ಖಾಸಗಿ ಶಾಲೆಗಳು ಶುಲ್ಕವನ್ನು ದುಪ್ಟಟ್ಟು ಮಾಡಿದ್ದು, ಪೋಷಕರಿಗೆ ತಲೆನೋವು ಶುರುವಾಗಿದೆ.

ಹೌದು, ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಶಾಲಾ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೆಲವು ಶಾಲೆಗಳು ಕನಿಷ್ಠ 15 ರಿಂದ 20 ರಷ್ಟು ಶುಲ್ಕ ಏರಿಕೆ ಮಾಡಿವೆ. ಖಾಸಗಿ ಶಾಲೆಗಳಲ್ಲಿ 1.5 ಲಕ್ಷದಿಂದ 2 ಲಕ್ಷದಷ್ಟು ಶುಲ್ಕ ಇದೆ ಈ ಶುಲ್ಕವನ್ನು ಒಂದೇ ಕಂತಿನಲ್ಲಿ ಕಟ್ಟುವಂತೆ ಖಾಸಗಿ ಶಾಲೆಗಳು ಒತ್ತಾಯ ಹೇರುತ್ತಿವೆ. ಇದು ಪೋಷಕರ ಚಿಂತೆಗೆ ಕಾರಣವಾಗಿದೆ.

ಇದನ್ನೂ ಓದಿ: ಕೊಹ್ಲಿ‌ ಓದಿದ್ದೆಷ್ಟು‌ ಗೊತ್ತಾ? – ಅನುಷ್ಕಾಗೆ ಬೆಂಗಳೂರಿನ‌ ನಂಟೇನು?

ಮೊದಲೆಲ್ಲ ಶುಲ್ಕ ಕಟ್ಟಲು ಪೋಷಕರಿಗೆ ಮೂರರಿಂದ ನಾಲ್ಕು ಬಾರಿ ಅವಕಾಶ ನೀಡುತ್ತಿದ್ದವು. ಕೆಲ ಪೋಷಕರು ಶೈಕ್ಷಣಿಕ ಮದ್ಯಭಾಗದಲ್ಲಿ ಶುಲ್ಕ ಕಟ್ಟುವುದಿಲ್ಲ.  ಶಾಲೆ ಬದಲಾಸುತ್ತಾರೆ. ಆಗ ಶಾಲಾ ಆಡಳಿತ ಮಂಡಳಿಗೆ ಲಾಸ್ ಆಗುತ್ತೆ ಅಂತ ಈಗಲೇ ಪೋಷಕರು ಪೂರ್ತಿ ಶುಲ್ಕ ಕಟ್ಟುವಂತೆ ಒತ್ತಾಯ ಮಾಡುತ್ತಿವೆ. ಶುಲ್ಕ ಕಟ್ಟಲಾಗದ ಶಾಲೆಗಳಿಗೆ ಕೆಲವು ಶಾಲೆಗಳು ಲೋನ್ ಆಫರ್ ಕೂಡ ನೀಡುತ್ತಿವೆ. ಆದರೆ ಎರಡು ಲಕ್ಷದ ಶುಲ್ಕವನ್ನ ಪೋಷಕರು ಒಂದೇ ಸರಿ ಕಟ್ಟುವುದು ಹೇಗ ಅಂತ ಪೋಷಕರು ಟೆನ್ಷನ್ ಆಗಿದ್ದಾರೆ.

ಇನ್ನು ಶುಲ್ಕ ಏರಿಕೆಗೆ ಶಾಲೆಗಳು ಮುಂದಾಗಿದ್ದರೂ, ಶಿಕ್ಷಣ ಇಲಾಖೆ ಮಾತ್ರ ಗಪ್ ಚುಪ್ ಅಂತಿದೆ. ಖಾಸಗಿ ಶಾಲೆಗಳು ಶುಲ್ಕದ ಜೊತೆ ಲಕ್ಷ ಲಕ್ಷ ಶುಲ್ಕ ಒಂದೆ ಸರಿ ಕಟ್ಟಿಸಿಕೊಂಡು ಮಕ್ಕಳನ್ನ ಬೇರೆ ಶಾಲೆಗೆ ಹೊಗದ್ದಂತೆ ತಡೆ ಹಿಡಿಯಲು ಮುಂದಾಗಿದೆ. ಇದನ್ನು ತಡೆಯಬೇಕು. ಮತ್ತು ಮಕ್ಕಳು ಹಾಗೂ ಪೋಷಕರಿಗೆ ಒತ್ತಡ ನೀಡುವ ಶಾಲೆಗಳಿಗೆ ನೋಟಿಸ್ ನೀಡುವಂತೆ ಮಕ್ಕಳ ಹಕ್ಕುಗಳ ಆಯೋಗ ಅಧ್ಯಕ್ಷ ಅಧ್ಯಕ್ಷ ನಾಗನಗೌಡ್​ ಶಾಲಾ ಶಿಕ್ಷಣ ಇಲಾಖೆಗೆ ಒತ್ತಾಯಿಸಿದ್ದಾರೆ.

Shwetha M