ನಾಳೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕತ್ತಲು – ಈ ಏರಿಯಾಗಳಲ್ಲಿ ಕರೆಂಟ್ ಕಟ್

ನಾಳೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕತ್ತಲು – ಈ ಏರಿಯಾಗಳಲ್ಲಿ ಕರೆಂಟ್ ಕಟ್

66/11 ಕೆವಿ ಕುಂಬಳಗೋಡು ಸ್ಟೇಷನ್‌ನಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ  ನಾಳೆ (  ಡಿ.23ರಂದು ಮಂಗಳವಾರ )  ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ  ಉಂಟಾಗಲಿದೆ ಎಂದು  BESCOM  ಮಾಹಿತಿ ನೀಡಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು

ಭೀಮನಕುಪ್ಪೆ ವಿಲೇಜ್, ವಿನಾಯಕ ನಗರ, ಫೀಶ್ ಫ್ಯಾಕ್ಟರಿ, ಗೇರುಪಾಳ್ಯ, ಒಂದನೇ ಮೈಲುಕಲ್ಲು, ಡೆಕ್ಕನ್ ಹೆರಾಲ್ಡ್, ಅಂಚೆಪಾಳ್ಯ, ಪ್ರಾವಿಡೆಂಟ್, ಹೊಸಪಾಳ್ಯ, ಕಣ್‌ಮಿಣಿಕೆ, ಕುಂಬಳಗೋಡು ಇಂಡಸ್ಟ್ರೀಯಲ್ ಏರಿಯಾ, ಕಂಬಿಪುರ, ಕಾರುಬೆಲೆ, ತಗಚಗುಪ್ಪೆ, ಗುಡಿಮಾವು, ದೇವಗೆರೆ, ಗಂಗಸಂದ್ರ, ಆನೆಪಾಳ್ಯ, ದೊಡ್ಡಿಪಾಳ್ಯ, ಗೋಣಿಪುರ, ಗೊಲ್ಲಹಳ್ಳಿ, ತಿಟ್ಟೂರು, ಚಿನ್ನಕುರ್ಚಿ, ಅಂಚೆಪಾಳ್ಯ, ಬಾಬಸಾಬ್‌ಪಾಳ್ಯ, ದೊಡ್ಡಬೆಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

 220/66 ಕೆ.ವಿ ‘ಎ’ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಡಿ.23ರಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಇದನ್ನೂ ಓದಿ: ಕಪ್ ಗೆದ್ದು ಬಾಲ ಬಿಚ್ಚಿದ PAK – ಬೌಲರ್ ಗೆ ಶೂ ತೋರಿಸಿದ ವೈಭವ್

ಟಿಸಿಎಸ್, ಹಾಲಿಡೇ ಇನ್, ಶೇಷಾದ್ರಿ ರಸ್ತೆ, ಕುರುಬರ ಸಂಘ ವೃತ್ತ, ಗಾಂಧಿನಗರ 1ನೇ ಮುಖ್ಯ ರಸ್ತೆ, 1ನೇ ಮತ್ತು 2ನೇ ಕ್ರಾಸ್ನ ಭಾಗ, ಕ್ರೆಸೆಂಟ್ ರಸ್ತೆ, ಇಂಧನ ಹಾಗೂ ಗೃಹ ಸಚಿವರ ನಿವಾಸಗಳು, ವೆಸ್ಟ್ ಎಂಡ್ ಹೋಟೆಲ್, ಕರ್ನಾಟಕ ಪವರ್ ಕಾರ್ಪೊರೇಷನ್, ಫರ‍್ಫೀಲ್ಡ್ ಲೇಔಟ್, ಎಲ್ಎಲ್ಆರ್‌ ಬಿ.ಡಬ್ಲ್ಯು.ಎಸ್.ಎಸ್.ಬಿ, ಶಿವಾನಂದ ಉದ್ಯಾನ, ಶೇಷಾದ್ರಿಪುರಂ, ವಿನಾಯಕ ವೃತ್ತ, ಕುಮಾರ ಪಾರ್ಕ್‌ ಈಸ್ಟ್, ಕಾವೇರಿ ಭವನ, ಕೆಎಚ್ಬಿ, ಬಿ.ಡಬ್ಲ್ಯು.ಎಸ್.ಎಸ್.ಬಿ, ಕಂದಾಯ ಭವನ, ಗಾಂಧಿನಗರದ ಸಿನೆಮಾ ಚಿತ್ರಮಂದಿರಗಳು, ಟ್ಯಾಂಕ್ ಬಂಡ್ ರಸ್ತೆ, ಎಸ್.ಸಿ. ರಸ್ತೆ, ಕೆ.ಜಿ. ರಸ್ತೆಯ ಭಾಗ, ಆಸ್ಪತ್ರೆ ರಸ್ತೆಯ ಭಾಗ, ಕುಬ್ಬನ್‌ಪೇಟೆ 6ನೇ ಹಾಗೂ 10ನೇ ಕ್ರಾಸ್, ಲೋಡ್ ಡಿಸ್ಪ್ಯಾಚ್ ಸೆಂಟರ್, ಆನಂದ ರಾವ್ ವೃತ್ತದಲ್ಲಿರುವ ಕೆಪಿಟಿಸಿಎಲ್ ಕಚೇರಿಗಳು, ಅವಿನಾಶ್ ಪೆಟ್ರೋಲ್ ಬಂಕ್ ಪ್ರದೇಶ, ವಸಂತನಗರ, ಪಿಡಬ್ಲ್ಯುಡಿ ಕಚೇರಿ ಹಾಗೂ ಪೊಲೀಸ್ ವಸತಿ ಪ್ರದೇಶ, ಬ್ರಿಗೇಡ್ ಪ್ಲಾಜಾ, ಖನಿಜ ಭವನ, ಚಾಲುಕ್ಯ ವೃತ್ತ, ಬಿ.ಡಬ್ಲ್ಯು.ಎಸ್.ಎಸ್.ಬಿ ನೀರು ಪಂಪ್, ಹೈ ಗ್ರೌಂಡ್ಸ್, ಮಾಧವನಗರ, ತುಳಸಿತೋಟ, ಬಿವಿಕೆ ಐಯಂಗಾರ್ ರಸ್ತೆ, ಚಿಕ್ಕಪೇಟೆ, ಮಜೆಸ್ಟಿಕ್, ಕಾಟನ್‌ಪೇಟೆ, ಆರ್.ಟಿ. ರಸ್ತೆ, ಕೆ.ಆರ್. ವೃತ್ತ, ನೃಪತುಂಗ ರಸ್ತೆ, ಬನ್ನಪ್ಪ ಪಾರ್ಕ್‌, ಸಿ.ಟಿ. ರಸ್ತೆ, ಚೌಲಗಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Kishor KV