ಪ್ರೇಮಿಗಳ ದಿನದಂದೇ ಕತ್ತಲಲ್ಲಿ ಬೆಂಗಳೂರು – ಈ  ಏರಿಯಾಗಳಲ್ಲಿ ಇವತ್ತು ಕರೆಂಟ್ ಕಟ್

ಪ್ರೇಮಿಗಳ ದಿನದಂದೇ ಕತ್ತಲಲ್ಲಿ ಬೆಂಗಳೂರು – ಈ  ಏರಿಯಾಗಳಲ್ಲಿ ಇವತ್ತು ಕರೆಂಟ್ ಕಟ್

ಇಂದು ಬೆಂಗಳೂರಿನ ಹಲವು ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಕಡಿತ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.   ಜಾಲಹಳ್ಳಿ ವಿಭಾಗದ 66/11 ಕೆವಿಎ ಗೋಕುಲ ಉಪಕೇಂದ್ರ ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಬೆಂಗಳೂರು ನಗರದ ಹಲವೆಡೆ ಇಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಹೆಚ್‌ಎಂಟಿ ಇಂಡಸ್ಟ್ರಿಯಲ್ ಎಸ್ಟೇಟ್, ಪ್ರೆಸ್ಟೀಜ್ ವೆಲ್ಲಿಂಗ್ಟನ್ ಮತ್ತು ಪ್ರೆಸ್ಟೀಜ್ ಕೆನ್ಸಿಂಗ್ಟನ್ ಅಪಾರ್ಟ್‌ಮೆಂಟ್‌, ಮುತ್ಯಾಲನಗರ, ಚಾಮುಂಡೇಶ್ವರಿ ಲೇಔಟ್, ನಂಜಪ್ಪ ಲೇಔಟ್, ಸಿ. ರಾಮಯ್ಯ ಲೇಔಟ್, ಗೋಕುಲ ಎಕ್ಸ್‌ಟಿಎನ್, ಎಚ್‌ಎಂಆರ್‌ ಲೇಔಟ್ ಎಂಆರ್‌ಟಿಡಿಸಿ, ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಆಮೆ ಉಂಗುರ ಹಾಕುತ್ತೀರಾ? – ಈ ನಿಯಮ ಕಡ್ಡಾಯವಾಗಿ ಪಾಲಿಸಿ

ಮಧ್ಯಾಹ್ನ 3 ಗಂಟೆವರೆಗೆ ಪವರ್ ಕಟ್: 66/11ಕೆ.ವಿ ಅಮರಜ್ಯೋತಿ ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ಕೈಗೊಳ್ಳುವುದರಿಂದ ನಗರದ ಈ ಭಾಗಗಳಲ್ಲಿ ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ದೊಮ್ಮಲೂರು 2ನೇ ಹಂತ, ಕೊಡಿಹಳ್ಳಿ, ದೊಮ್ಮಲೂರು ಗ್ರಾಮ, ಯೋಗಾನಂದ ಲೇಔಟ್, ಪರಮಹಂಸ ರಸ್ತೆ, ಧೂಪನಹಳ್ಳಿ, ಎಚ್ಎಎಲ್ 2ನೇ ಹಂತ, ಇಎಸ್ಐ ಆಸ್ಪತ್ರೆ, 100 ಫೀಟ್ ರಸ್ತೆ, ಸಾಲರ್ಪುರಿಯಾ ಟೆಕ್ ಪಾರ್ಕ್, ಜೆಆರ್‌ಆರ್‌ ಲೇಔಟ್, ಡೈಮಂಡ್ ಡಿಸ್ಟ್ರಿಕ್ಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ ಎಂದು ಬೆಸ್ಕಾಂ ತಿಳಿಸಿದೆ. 66/11ಕೆ.ವಿ ಎನ್.ಜಿ.ಇ.ಎಫ್‌ ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ಕೈಗೊಳ್ಳುವುದರಿಂದ ಜೋಗುಪಾಳ್ಯ, ಕಾರ್ ಸ್ಟ್ರೀಟ್, ಬಜಾರ್ ಸ್ಟ್ರೀಟ್, ಜೋಗುಪಾಳ್ಯ ಮುಖ್ಯ ರಸ್ತೆ, ರಾಂಕಾ ಕೋರ್ಟ್, ಆರ್ಟಿಲರಿ ರಸ್ತೆ, ಗೌತಮ್‌ಪುರ, ಕ್ಯಾಂಬ್ರಿಜ್ ರಸ್ತೆ, ಆರ್‌ಎಂಝಡ್‌ ಮಿಲ್ಲೇನಿಯಾ, ಹಲಸೂರು, ಹಲಸೂರು ರಸ್ತೆ, ಕೆನರಾ ಬ್ಯಾಂಕ್, ಅಜಂತಾ ಟ್ರಿನಿಟಿ ಸರ್ಕಲ್, ಇಂದಿರಾನಗರ 1ನೇ ಹಂತ, ಹೆಚ್ಎಎಲ್ 2ನೇ ಹಂತ, ಓಲ್ಡ್ ಮದ್ರಾಸ್ ರಸ್ತೆ. ಬೆನ್ನಿಗನಹಳ್ಳಿ, ಎ ನಾರಾಯಣಪುರ, ಬಿ ನಾರಾಯಣಪುರ, ಕಗ್ಗದಾಸಪುರ, ಆಕಾಶನಗರ, ಪೈ ಲೇಔಟ್, ಉದಯನಗರ, ಬೈರಸಂದ್ರ, ಸಿ.ವಿ.ರಾಮನ್ ನಗರ, ಎನ್‌ಜಿಇಎಫ್ ಲೇಔಟ್ ಪೂರ್ವ ಭಾಗ, ಸದಾನಂದನಗರ, ಕಸ್ತೂರಿನಗರ, ಭುವನೇಶ್ವರಿ ನಗರ, ವರ್ತೂರು ರಸ್ತೆ, ನಾಗವಾರಪಾಳ್ಯ, ನಾಗಪ್ಪ ರೆಡ್ಡಿ ಲೇಔಟ್, ಅಬ್ಬಯ್ಯ ರೆಡ್ಡಿ ಲೇಔಟ್, ಬಾಲಾಜಿ ಲೇಔಟ್, ಧರ್ಮರಾಜಪಾಳ್ಯ, ವಿಜಯನಗರ ಪೈ ಲೇಔಟ್, ಉದಯನಗರ, ಗಂಗಪ್ಪ ಲೇಔಟ್.

Kishor KV

Leave a Reply

Your email address will not be published. Required fields are marked *