ಶಿವರಾತ್ರಿ ಹಬ್ಬದ ಹಿನ್ನೆಲೆ ಬೆಂಗಳೂರಿನ ಶಿವ ದೇವಸ್ಥಾನಗಳಲ್ಲಿ ಹೈ ಅಲರ್ಟ್ – ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ!
ನಾಡಿನೆಲ್ಲೆಡೆ ಸಂಭ್ರಮದಿಂದ ಶಿವರಾತ್ರಿ ಆಚರಿಸಲಾಗುತ್ತಿದೆ. ಶಿವರಾತ್ರಿ ಹಿನ್ನೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶಿವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ಹಮ್ಮಿಕೊಳ್ಳಲಾಗಿದೆ. ಮತ್ತೊಂದೆಡೆ ಇತ್ತೀಚೆಗೆ ನಗರದ ರಾಮೇಶ್ವರಂ ಕೆಫೆಯಲ್ಲಿ ಆದ ಬಾಂಬ್ ಬ್ಲಾಸ್ಟ್ನಿಂದ ಎಚ್ಚೆತ್ತ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ರಾಮೇಶ್ವರಂ ಕೆಫೆ ಸ್ಫೋಟದ ಬೆನ್ನಲ್ಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹೆಚ್ಚಿನ ಶಿವ ಭಕ್ತರು ಸೇರುವ ಶಿವ ದೇವಸ್ಥಾನಗಳಿಗೆ ಮುನ್ನೆಚ್ಚರಿಕ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಶುಕ್ರವಾರ ಬೆಳಗಿನ ಜಾವದಿಂದಲೇ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ನಗರದ ಎಲ್ಲ ಠಾಣೆಗಳ ಇನ್ಸ್ಪೆಕ್ಟರ್, ಸಿಬ್ಬಂದಿ ಗಸ್ತಿನಲ್ಲಿರುವಂತೆ ಸೂಚನೆ ನೀಡಲಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ನಂತರ ಹೈಅಲರ್ಟ್ ಆಗಿರುವ ಪೊಲೀಸರು ಯಾವುದೇ ವಿಧ್ವಂಸಕ ಕೃತ್ಯ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮಹಿಳಾ ದಿನಾಚರಣೆಗೆ ಪ್ರಧಾನಿ ಮೋದಿ ಗಿಫ್ಟ್! – ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ದರ 100 ರೂ. ಇಳಿಕೆ
ಇನ್ನು ಮತ್ತೊಂದೆಡೆ ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು ಸಂಚಾರಿ ಮಾರ್ಪಾಡು ಮಾಡಿದ್ದಾರೆ. ನಗರದಲ್ಲಿ ಇಂದು ಕೆಲ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ. ಜೀವನಹಳ್ಳಿ, ಚಾರ್ಲ್ಸ್ ಕ್ಯಾಂಬೇಜ್ ಮುಖ್ಯರಸ್ತೆ, ಬೈಯ್ಯಪ್ಪನಹಳ್ಳಿ ರಸ್ತೆ, ಕಲ್ಲಲ್ಲಿ ಸ್ಮಶಾನದ ರಸ್ತೆ, ಗರುಡಾಚಾರಪಾಳ್ಯ ಜಂಕ್ಷನ್ನಿಂದ ರಾಯಣ್ಣ ಸರ್ಕಲ್, ಗೋಶಾಲ ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ವರೆಗೆ ಸಂಚಾರ ನಿರ್ಬಂಧ ಇರಲಿದೆ.
ಮಧ್ಯಾಹ್ನ 12 ಗಂಟೆಯಿಂದ ಸಿಎಂಹೆಚ್ ರಸ್ತೆಯ ಆದರ್ಶ ಜಂಕ್ಷನ್ನಿಂದ ಶಾಂತಿ ಸಾಗರ್ ಜಂಕ್ಷನ್ವರೆಗೆ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10ರವರೆಗೆ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ. ಬಜಾರ್ ಸ್ಟ್ರೀಟ್ ಬೇಗಂ ಮಾಲ್ನಿಂದ ರಾಮಯ್ಯ ಜಂಕ್ಷನ್ವರೆಗೆ ನಿರ್ಬಂಧ ಇರಲಿದೆ.
ಓ.ಎಂ.ಸರ್ಕಾರಿ ಕಾಲೇಜ್ ರಸ್ತೆ ಬೆಳಗ್ಗೆ 6ರಿಂದ ನಾಳೆ ಬೆಳಗ್ಗೆ 6ರವರೆಗೆ ನಿರ್ಬಂಧ ಹೇರಲಾಗಿದೆ. ಯಮಲೂರು ಓಂ ಶಕ್ತಿ ದೇಗುಲದಿಂದ ಸರ್ಕಾರಿ ಶಾಲೆವರೆಗಿನ ರಸ್ತೆ ನಿರ್ಬಂಧ. ಕೆಲ ರಸ್ತೆಗಳಲ್ಲಿ ನಿರ್ಬಂಧ ಹಿನ್ನೆಲೆ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ
ದೊಡ್ಡಗುಂಟೆ ಸರ್ಕಲ್, ಕೆನ್ಸಿಂಗ್ಟನ್ ರಸ್ತೆ ಮೂಲಕ ಬೈಯ್ಯಪ್ಪನಹಳ್ಳಿ ಓವರ್ ಬ್ರಿಡ್ಜ್ ಎಡರಸ್ತೆ, ಹೂಡಿ ಕೃಷ್ಣ ಟೆಂಪಲ್. ITPL ರಸ್ತೆ, ಬಿಎಂಶ್ರೀ ಜಂಕ್ಷನ್ನಿಂದ ಆದರ್ಶ ಜಂಕ್ಷನ್ ಮೂಲಕ ತೆರಳಬಹುದು. ಬಜಾರ್ ಸ್ಟ್ರೀಟ್ ಸವಾರರಿಗೆ ಗುರುದ್ವಾರ ಜಂಕ್ಷನ್. ರಾಮಯ್ಯ ಜಂಕ್ಷನ್ ಸವಾರರಿಗೆ ಟ್ರಿನಿಟಿ ಜಂಕ್ಷನ್. ಓ.ಎಂ.ರಸ್ತೆ ಸವಾರರಿಗೆ K.R.ಪುರಂ ಎಕ್ಸ್ಟೆನ್ಷನ್ ರಸ್ತೆ ಬಳಸುವಂತೆ ಮನವಿ ಮಾಡಲಾಗಿದೆ.
ಬೆಂಗಳೂರಿನಲ್ಲಿ ವಾಹನ ನಿಲುಗುಡೆಗೆ ನಿರ್ಬಂಧಿಸಲಾದ ರಸ್ತೆಗಳು
CMH ರಸ್ತೆ, ಆದರ್ಶ ಜಂಕ್ಷನ್, ಶಾಂತಿ ಸಾಗರ್ ರಸ್ತೆಯ ಎರಡು ಬದಿ, ಓಲ್ಡ್ ಏರ್ಪೋರ್ಟ್ ರಸ್ತೆಯ ಎರಡು ಬದಿ, ಗೊರಗುಂಟೆಪಾಳ್ಯ ಸರ್ವಿಸ್ ರಸ್ತೆ, ಮೆಜೆಸ್ಟಿಕ್, ಮಲ್ಲೇಶ್ವರಂ ಸಂಪಿಗೆ ರಸ್ತೆ, ಮಿಲ್ಕ್ ಕಾರ್ನರ್ ಬಳಿ ನಿಲುಗಡೆಗೆ ನಿರ್ಬಂಧ ಹೇರಲಾಗಿದೆ.