ಬೆಂಗಳೂರು ಪೊಲೀಸರಿಂದ ಹೊಸ ಸೇವೆ – ಇನ್ಮುಂದೆ ವಾಟ್ಸ್ಆ್ಯಪ್ ಮೂಲಕವೂ ದೂರು ಸಲ್ಲಿಸಬಹುದು!

ಬೆಂಗಳೂರು ಪೊಲೀಸರಿಂದ ಹೊಸ ಸೇವೆ – ಇನ್ಮುಂದೆ ವಾಟ್ಸ್ಆ್ಯಪ್ ಮೂಲಕವೂ ದೂರು ಸಲ್ಲಿಸಬಹುದು!

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಜನರಿಗೆ ಸಿಹಿ ಸುದ್ದಿಯೊಂದಿದೆ. ನಗರದ ಜನರಿಗೆ ಸಹಾಯಕವಾಗಬಲ್ಲ ಹೊಸ ಸೇವೆಯೊಂದನ್ನು ಪೊಲೀಸರು ಆರಂಭಿಸಿದ್ದಾರೆ. ಇನ್ನು ಮುಂದೆ ಬೆಂಗಳೂರಿನ ಜನರು ತುರ್ತು ಸಂದರ್ಭದಲ್ಲಿ ವಾಟ್ಸ್ಆ್ಯಪ್ ಮೆಸೇಜ್‌ ಮಾಡುವ ಮೂಲಕ ಪೊಲೀಸರಿಗೆ ದೂರು ಸಲ್ಲಿಸಬಹುದು.

ಹೌದು, ಇಂತಹದೊಂದು ಸಾರ್ವಜನಿಕ ಸ್ನೇಹಿ ಸಂಪರ್ಕ ವ್ಯವಸ್ಥೆಯನ್ನು ಬೆಂಗಳೂರು ಪೊಲೀಸ್‌ ಇಲಾಖೆ ಅಳವಡಿಸಿಕೊಂಡಿದೆ. ಮಧ್ಯರಾತ್ರಿ, ನಗರದ ಹೊರಭಾಗಗಳಲ್ಲಿ, ಜನದಟ್ಟಣೆ ಅಥವಾ ವಾಹನ ಹೆಚ್ಚಿರುವ, ಸಂಚಾರದ ವೇಳೆ ತಾವು ಇರುವ ಪ್ರದೇಶಗಳಲ್ಲಿ ಅಪಾಯಕ್ಕೆ ಸಿಲುಕಿದ್ದರೆ ವಾಟ್ಸ್ಆ್ಯಪ್ ನಲ್ಲಿಯೇ ಮೆಸೆಜ್‌ ಮಾಡಿ ದೂರು ನೀಡಬಹುದು. ಪೊಲೀಸರ ನೆರವು ಅತೀ ಶೀಘ್ರವಾಗಿ ಸಂತ್ರಸ್ತರಿಗೆ ಸಿಗಬೇಕು ಎಂಬ ಉದ್ದೇಶದಿಂದ ವಾಟ್ಸ್ಆ್ಯಪ್ ದೂರು ವ್ಯವಸ್ಥೆಯನ್ನು ಮಾಡಲಾಗಿದೆ.

ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದರೆ ಹುಷಾರ್ – ಫೇಕ್ ನ್ಯೂಸ್ ಮೂಲ ಪತ್ತೆ ಹಚ್ಚಲು ಸಿಎಂ ಖಡಕ್ ಸೂಚನೆ

ಈ ಕುರಿತು ಮಾಹಿತಿ ನೀಡಿದರುವ ನಗರ ಪೊಲೀಸ್‌ ಆಯುಕ್ತ ದಯಾನಂದ್‌,  ಪೊಲೀಸರಿಗೆ ವಾಟ್ಸ್ಆ್ಯಪ್ ಮೂಲಕ ಸಂದೇಶ ಕಳುಹಿ ಸಿದರೆ ತಕ್ಷಣವೇ ಸಂಕಷ್ಟದಲ್ಲಿ ಸಿಲುಕಿದ ಜನರಿಗೆ ಪೊಲೀಸರ ನೆರವು ಸಿಗುವವ್ಯವಸ್ಥೆಯನ್ನು ಮಾಡಲಾಗಿದೆ. ಈ ಮೊದಲು ಸಹ ವಾಟ್ಸ್ಆ್ಯಪ್ ನಲ್ಲಿ ದೂರು ಸ್ವೀಕರಿಸುವ ವ್ಯವಸ್ಥೆ ಜಾರಿಯಲ್ಲಿತ್ತು. ಆದರೆ ಆ ವ್ಯವಸ್ಥೆ ಹಳೇಯದಾಗಿದ್ದು, ಸದ್ಯ ಹೆಚ್ಚಿನ ತಂತ್ರಜ್ಞಾನ ಬಳಸಿ ಸುಧಾರಿಸಲಾಗಿದೆ. ವಾಟ್ಸ್ಆ್ಯಪ್ ದೂರು ವ್ಯವಸ್ಥೆಯನ್ನು ಪೊಲೀಸ್‌ 24*7 ಸಹಾಯವಾಣಿ 112 ಪೊಲೀಸ್ ನಿಯಂತ್ರಣ ಕೊಠಡಿ ಜೋಡಿಸಲಾಗಿದೆ. ಹೀಗಾಗಿ, 112ಕ್ಕೆ ಕರೆ ಬದಲಿಗೆ ವಾಟ್ಸ್ಆ್ಯಪ್ ಕೂಡಾ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.

ವಾಟ್ಸ್ಆ್ಯಪ್ ನಲ್ಲಿ ದೂರು ದಾಖಲಿಸುತ್ತಿದ್ದಂತೆಯೇ ಆ ದೂರಿನ ಸಂದೇಶವನ್ನು ದೂರುದಾರರು ಇರುವ ಪ್ರದೇಶದಲ್ಲಿ ಗಸ್ತು ತಿರುಗುತ್ತಿರುವ ಪೊಲೀಸ್‌ ಹೊಯ್ಸಳ ವಾಹನ ಸಿಬ್ಬಂದಿಗೆ ಕಳುಹಿಸಲಾಗುತ್ತದೆ. ಇದರಿಂದ ತಕ್ಷಣವೇ ಸಂಕಷ್ಟದಲ್ಲಿದ್ದವರಿಗೆ ಪೊಲೀಸರು ನೆರವು ಸಿಗಲಿದೆ ಎಂದು ಆಯುಕ್ತ ಬಿ ದಯಾನಂದ್‌ ಅವರು ತಿಳಿಸಿದರು.

112 ಮತ್ತಷ್ಟು ಉನ್ನತೀಕರಣ ಇತ್ತೀಚೆಗೆ ನಗರದಲ್ಲಿ ಹೊಯ್ಸಳ ವಾಹನದಲ್ಲಿ ಪೊಲೀಸ್‌ ಆಯುಕ್ತರಾದ ದಯಾನಂದ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಗಸ್ತು ನಡೆಸುವ ಮೂಲಕ 112 ಕಾರ್ಯನಿರ್ವಹಣೆ ಕುರಿತು ಮಾಹಿತಿ ಪಡೆದಿದ್ದರು. ಆ ಸಂದರ್ಭದಲ್ಲಿ ಗಮನಿಸಿದ ಹಲವು ಅಂಶಗಳನ್ನು ಸೇರಿಸಿ 112 ವ್ಯವಸ್ಥೆಯನ್ನು ಸುಧಾರಣೆಗೆ ಮುಂದಾಗಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ವ್ಯಾಟ್ಸಪ್‌ ಸಂಖ್ಯೆಯನ್ನು 112 ಸಹಾಯವಾಣಿ ಜತೆ ಲಿಂಕ್‌ ಮಾಡಲಾಗಿದೆ. ದೂರುದಾರರು 9480801000 ಈ ವಾಟ್ಸ್ಆ್ಯಪ್ ನಂಬರ್‌ ಗೆ ದೂರು ಕಳುಹಿಸಬಹುದು ಅಥವಾ 112 ಕರೆ ಮಾಡಬಹುದು ಎಂದು ಹೇಳಿದ್ದಾರೆ.

ಹೇಗೆ ದೂರು ನೀಡಬೇಕು ?

ಸಾರ್ವಜನಿಕರು ತಮಗಾಗುತ್ತಿರುವ ಸಮಸ್ಯೆಯ ಬಗ್ಗೆ ಬರೆದು 9480801000 ನಂಬರ್‌ಗೆ ಕಳುಹಿಸಿದರೆ ಆಯ್ತು. ವಿಳಾಸ, ಮೊಬೈಲ್‌ ಫೋನ್‌ ನಂಬರ್‌ ನೀಡಿದರೆ ಅಥವಾ ಲೊಕೇಶನ್‌ ಶೇರ್‌ ಮಾಡಬಹುದು. ಅಥವಾ ದೂರಿಗೆ ಸಂಬಂಧಿಸಿದ ವಿಡಿಯೋ ಅಥವಾ ವಾಯ್ಸ್‌ ಮೆಸೇಜ್‌ಗಳನ್ನು ಕೂಡಾ ಕಳುಹಿಸಬಹುದು. ದೂರುದಾರಿಂದ ಮೆಸೇಜ್‌ ಸ್ವೀಕರಿಸಿಕೊಂಡ ಕೂಡಲೇ ಸಹಾಯವಾಣಿ ಸಿಬ್ಬಂದಿಗಳು ಪ್ರತಿಕ್ರಿಯೆ ನೀಡುತ್ತಾರೆ ಎಂದು ಪೊಲೀಸ್‌ ಸಹಾಯ ಕೇಂದ್ರ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

suddiyaana