ಬೆಂಗಳೂರು ಮೆಟ್ರೋದಲ್ಲಿ ಡಿಜಿಟಲ್ ಕ್ರಾಂತಿ- ಟಿಕೆಟ್ ಬುಕ್ಕಿಂಗ್ ಸುಲಭ, ಟೈಂ ಉಳಿತಾಯ

ಬೆಂಗಳೂರು ಮೆಟ್ರೋದಲ್ಲಿ ಡಿಜಿಟಲ್ ಕ್ರಾಂತಿ-  ಟಿಕೆಟ್ ಬುಕ್ಕಿಂಗ್ ಸುಲಭ, ಟೈಂ ಉಳಿತಾಯ

ಬೆಂಗಳೂರು ಪ್ರಯಾಣಿಕರಿಗೆ ನಮ್ಮ ಮೆಟ್ರೋ ಗುಡ್‌ನ್ಯೂಸ್ ಕೊಟ್ಟಿದೆ. ಇನ್ಮುಂದೆ ಸಾರ್ವಜನಿಕ ಸಾರಿಗೆಯ ಮೂಲಕ ಬೆಂಗಳೂರಿನ ಸುತ್ತಲೂ ಓಡಾಡುವುದು ಸುಲಭವಾಗಲಿದೆ.  ಬಿಎಂಆರ್‌ಸಿಎಲ್  ಜನಪ್ರಿಯ ಮೊಬಿಲಿಟಿ ಅಪ್ಲಿಕೇಶನ್‌ಗಳ ಮೂಲಕ ಮೆಟ್ರೋ ಟಿಕೆಟ್ ಬುಕ್ ಮಾಡಲು ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ.

ಈ ಯೋಜನೆ ಸಮಗ್ರ ಸಾರ್ವಜನಿಕ ಸಾರಿಗೆಯತ್ತ ಮಹತ್ವದ ಹೆಜ್ಜೆಯಾಗಿದ್ದು, ಜನರಿಗೆ ವಿವಿಧ ಹಂತಗಳ ಸಂಚಾರವನ್ನು ಸಂಪರ್ಕಿಸುವಲ್ಲಿ ನೆರವಾಗಲಿದೆ. ಮೆಟ್ರೋ ಟಿಕೆಟ್ ಖರೀದಿ, ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಅಥವಾ ಬಸ್ ಪಾಸ್ ಪಡೆಯುವ ಎಲ್ಲವನ್ನೂ ಒಂದು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಸುಲಭವಾಗಿ ಮಾಡಬಹುದಾಗಿದೆ. ಮೆಟ್ರೋ ಟಿಕೆಟ್ ವ್ಯವಸ್ಥೆಯನ್ನು ಬಹು ಅಪ್ಲಿಕೇಶನ್‌ಗಳಿಗೆ ತರಲು ಖಾಸಗಿ ತಂತ್ರಜ್ಞಾನ ಕಂಪನಿಯೊಂದಿಗಿನ ಪಾಲುದಾರಿಕೆ ಮೂಲಕ ಬಿಎಂಆರ್‌ಸಿಎಲ್ ಈಗಾಗಲೇ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಇದೆ.

ಈ ಹಿಂದೆ ವಾಟ್ಸಾಪ್ ಮೂಲಕ QR ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆಯನ್ನು 2022ರಲ್ಲಿ ಪ್ರಾರಂಭಿಸಲಾಗಿತ್ತು. ಜೊತೆಗೆ Paytm ಹಾಗೂ Amazon Pay ಜೊತೆಗೆ ಸ್ಮಾರ್ಟ್ ಕಾರ್ಡ್ ಟಾಪ್‌ಅಪ್ ಮತ್ತು ಮೊಬೈಲ್ ಟಿಕೆಟಿಗ್‌ಗಾಗಿ ಸಹಕಾರವೂ ಆರಂಭಿಸಲಾಗಿದೆ.   ಈ ಡಿಜಿಟಲ್ ಬದಲಾವಣೆಯಿಂದ ಪ್ರಯಾಣಿಕರಿಗೆ ಟೈಂ ಜೊತೆ ಸಾಕಷ್ಟು ಸುಲಭ ಆಗಲಿದೆ.

 

Kishor KV