ನಮ್ಮ ಮೆಟ್ರೋ ಪಿಂಕ್ ಲೈನ್ ಬಗ್ಗೆ ಬಿಗ್ ಅಪ್ಡೇಟ್! – ಗುಲಾಬಿ ಬಣ್ಣದ ಮಾರ್ಗ ಉದ್ಘಾಟನೆ ಯಾವಾಗ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿತ್ಯ ಲಕ್ಷಾಂತರ ಮಂದಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಇದೀಗ ಬಹುನೀರಿಕ್ಷಿತ ಪಿಂಕ್ ಲೈಕ್ ಕೂಡ ಸಂಚಾರಕ್ಕೆ ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪಿಂಕ್ ಲೈನ್ ನಮ್ಮ ಮೆಟ್ರೋಗೆ ಚಾಲನೆ ನೀಡಲಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ಭಾರತಕ್ಕೆ ಫಸ್ಟ್ ಬ್ಯಾಟಿಂಗ್ ಭಯ – 250 ರನ್ಸ್ ಇದ್ರೂ ಡಿಫೆನ್ಸ್ ಕಷ್ಟ
ನಮ್ಮ ಮೆಟ್ರೋ ಇದೀಗ ಮತ್ತೊಂದು ಹೊಸ ಮೈಲುಗಲ್ಲನ್ನು ಸಾಧಿಸುವತ್ತ ಹೆಜ್ಜೆಯಿಟ್ಟಿದೆ. ಇದರ ಭಾಗವಾಗಿ ನಮ್ಮ ಮೆಟ್ರೋ ಜಾಲದ ಬಹುನಿರೀಕ್ಷಿತ ಪಿಂಕ್ ಲೈನ್ ಮಾರ್ಗದ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಎತ್ತರಿಸಿದ ವಿಭಾಗದಲ್ಲಿ ಮೆಟ್ರೋ ರೈಲ್ವೆ ವಾಣಿಜ್ಯ ಸಂಚಾರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.ಈಗಾಗಲೇ ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸೇಫ್ಟಿಯಿಂದ (CMRS) ಪಿಂಕ್ ಲೈನ್ನ ಮೇಲ್ಸೇತುವೆ (ಎಲಿವೇಟೆಡ್) ಮಾರ್ಗದ ಸುರಕ್ಷತಾ ಅನುಮತಿಯನ್ನು (Clearance) ಪಡೆಯಲಾಗಿದೆ.
ನಮ್ಮ ಮೆಟ್ರೋದ ಗುಲಾಬಿ ಮಾರ್ಗವು ಸದ್ಯಕ್ಕೆ 6 ನಿಲ್ದಾಣಗಳನ್ನು ಆರಂಭದಲ್ಲಿ ಶುರುಮಾಡಲಿದೆ. ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ (ಇಂಟರ್ಚೇಂಜ್ ನಿಲ್ದಾಣ), ತಾವರೆಕೆರೆ ನಿಲ್ದಾಣಗಳಾಗಿದೆ. ಒಟ್ಟು 7.5 ಕಿ.ಮೀ. ಎತ್ತರಿಸಿದ ಮಾರ್ಗ ಇದಾಗಿರಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 15ರಂದು ಬೆಂಗಳೂರಿಗೆ ಆಗಮಿಸಲಿದ್ದು, ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ ಎನ್ನಲಾಗ್ತಿದೆ. ಇದರೊಂದಿಗೆ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗ ಪಿಂಕ್ ಮೆಟ್ರೋ ಸಂಚಾರಕ್ಕೆ ಕೌಂಡ್ ಡೌನ್ ಆರಂಭವಾಗಿದೆ. ಪಿಂಕ್ ಮೆಟ್ರೋ ಮಾರ್ಗ ಕಾಳೇನ ಅಗ್ರಹಾರ ದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗವೂ ಒಟ್ಟು ಉದ್ದ ಸುಮಾರು 21.25 ಕಿ.ಮೀ ಇದ್ದು, ಒಟ್ಟು 18 ನಿಲ್ದಾಣಗಳಿದೆ. ಆದರೆ ಮೊದಲ ಹಂತದಲ್ಲಿ ಕೇವಲ 7.5 ಕಿ.ಮೀ. ಎತ್ತರಿಸಿದ ಮಾರ್ಗದಲ್ಲಿ 6 ನಿಲ್ದಾಣಗಳು ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದ್ದು, ಉಳಿದ ಮಾರ್ಗವು ಮುಂದಿನ ವರ್ಷ ಉದ್ಘಾಟನೆಯಾಗಲಿದೆ. ಅಂದರೆ ಉಳಿದ 13.76 ಕಿ.ಮೀ. ಭೂಗತ ಸುರಂಗ ಮಾರ್ಗ ಕಾಮಗಾರಿಯಲಿದ್ದು, ಈ ಮಾರ್ಗ ಮುಂದಿ ವರ್ಷ ಉದ್ಘಾಟನೆ ಆಗುವ ಸಾಧ್ಯತೆ ಇದೆ. ಡೈರಿ ಸರ್ಕಲ್ನಿಂದ ನಾಗವಾರ, ಶಿವಾಜಿನಗರ ಹಾಗೂ ಕಂಟೋನ್ಮೆಂಟ್ ಮೂಲಕ ನಾಗವಾರ ವರೆಗೂ ಸಂಪರ್ಕ ಕಲ್ಪಿಸಲಿದೆ.
ಇನ್ನು, ಪಿಂಕ್ ಲೈನ್ ಉದ್ಘಾಟನೆ ಮೂಲಕ ನಮ್ಮ ಮೆಟ್ರೋ ಸಂಚಾರದ ಒಟ್ಟು ಉದ್ದ 100 km ದಾಟಲಿದೆ. ಸದ್ಯ 96.1 ಕಿಮೀ ಮೆಟ್ರೋ ಮಾರ್ಗ ಇದೆ. ಇದರೊಂದೊಗೆ ದೆಹಲಿ ಬಿಟ್ಟರೆ ದೇಶದ 2ನೇ ಅತೀ ಉದ್ದ ಮೆಟ್ರೋ ಮಾರ್ಗ ಎಂಬ ಹೆಗ್ಗಳಿಕೆಗೆ ನಮ್ಮ ಮೆಟ್ರೋ ಪಾತ್ರವಾಗಲಿದೆ.

ನೋಡಿರಿ

