ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ದರ ಹೆಚ್ಚಳ

ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ದರ ಹೆಚ್ಚಳ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಶಾಕಿಂಗ್‌ ಸುದ್ದಿಯೊಂದಿದೆ. ಈ ಹೆದ್ದಾರಿಯಲ್ಲಿ ಸಂಚರಿಸುವ ಕಾರುಗಳಿಗೆ ಟೋಲ್‌ ದರ ಹೆಚ್ಚಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ: ಚುನಾವಣೆ ಗೆಲ್ಲಲು ಬಿಜೆಪಿ ನನ್ನ ಹೆಣ ಬೀಳಿಸೋಕು ರೆಡಿ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಪ್ರಕಟಣೆ ಹೊರಡಿಸಲಿದೆ. ಟ್ರಕ್, ಬಸ್‌ಗಳ ಒಂದೇ ಪ್ರಯಾಣಕ್ಕೆ 15 ರೂಪಾಯಿ ಹೆಚ್ಚಳ ಮಾಡಲಾಗಿದೆ. ಬೆಂಗಳೂರೂ-ಮೈಸೂರು ಹೆದ್ದಾರಿಯನ್ನು ಬಳಸುವ ಕಾರುಗಳಿಗೆ ಟೋಲ್‌ ದರದಲ್ಲಿ 10 ರೂ. ಹೆಚ್ಚಿಸಲಾಗಿದೆ. ಏಪ್ರಿಲ್‌ 1 ರಿಂದ ಹೊಸ ದರ ಅನ್ವಯವಾಗಲಿದೆ. ಕಣಿಮಿಣಿಕೆ ಮತ್ತು ಶೇಷಗಿರಿ ಟೋಲ್ ಪ್ಲಾಜಾಗಳಲ್ಲಿ ಸಂಗ್ರಹಿಸಲಾದ ಟೋಲ್ ಶುಲ್ಕ ಪರಿಷ್ಕರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ.

ಕಣಿಮಿಣಿಕೆ ಮತ್ತು ಶೇಷಗಿರಿ ಟೋಲ್ ಪ್ಲಾಜಾ

  • ನಾಲ್ಕು ಚಕ್ರವಾಹನ

ಏಕಮುಖ ಪ್ರಯಾಣ – 170 ರೂ‌.

ದ್ವಿಮುಖ ಪ್ರಯಾಣ – 255 ರೂ.

ತಿಂಗಳ ಪಾಸ್ – 5,715

ಲೋಕಲ್ ತಿಂಗಳ ಪಾಸ್ – 340

  • ಎಲ್‌ಸಿವಿ, ಎಲ್‌ಜಿವಿ/ಮಿನಿಬಸ್

ಏಕಮುಖ ಪ್ರಯಾಣ – 275 ರೂ‌.

ದ್ವಿಮುಖ ಪ್ರಯಾಣ – 415 ರೂ.

ತಿಂಗಳ ಪಾಸ್ – 9,230 ರೂ.

ಲೋಕಲ್ ತಿಂಗಳ ಪಾಸ್ – 340 ರೂ.

  • ಟ್ರಕ್, ಬಸ್ 2 ಎಕ್ಸೆಲ್

ಏಕಮುಖ ಪ್ರಯಾಣ – 580 ರೂ.

ದ್ವಿಮುಖ ಪ್ರಯಾಣ – 870 ರೂ.

ತಿಂಗಳ ಪಾಸ್ – 19,345 ರೂ.

ಲೋಕಲ್ ತಿಂಗಳ ಪಾಸ್ – 340 ರೂ.

  • 3 ಎಕ್ಸೆಲ್ ವೆಹಿಕಲ್

ಏಕಮುಖ ಪ್ರಯಾಣ – 635 ರೂ.‌

ದ್ವಿಮುಖ ಪ್ರಯಾಣ – 950 ರೂ.

ತಿಂಗಳ ಪಾಸ್ – 21,100 ರೂ.

ಲೋಕಲ್ ತಿಂಗಳ ಪಾಸ್ – 340 ರೂ.

  • ಮಲ್ಟಿ ಎಕ್ಸೆಲ್ ವೆಹಿಕಲ್, ಹೆವಿ ಕನ್ಸಟ್ರಕ್ಷನ್, ಮಿಷನರಿ ಮೂವಿಂಗ್ ವೆಹಿಕಲ್

ಏಕಮುಖ ಪ್ರಯಾಣ – 910 ರೂ.

ದ್ವಿಮುಖ ಪ್ರಯಾಣ – 1,365 ರೂ.

ತಿಂಗಳ ಪಾಸ್ – 30,335 ರೂ.

  • ಓವರ್ ಸೈಜ್ ವೆಹಿಕಲ್ 7 ಕ್ಕಿಂತ ಹೆಚ್ಚು ಎಕ್ಸೆಲ್ ವೆಹಿಕಲ್

ಏಕಮುಖ ಪ್ರಯಾಣ – 1,110 ರೂ.

ದ್ವಿಮುಖ ಪ್ರಯಾಣ – 1,660 ರೂ.

ತಿಂಗಳ ಪಾಸ್ – 36,930 ರೂ.

Shwetha M