ಸೆನ್ಸಾರ್ ಸರಿ ಇಲ್ಲ.. ಬ್ಲೂಪರ್ ಬಿದ್ದು ಕಾರಿನ ಗ್ಲಾಸ್ ಛಿದ್ರ – ಟೋಲ್ ಶುರುವಾದ ಮೊದಲ ದಿನವೇ ರಗಳೆ!

ಸೆನ್ಸಾರ್ ಸರಿ ಇಲ್ಲ.. ಬ್ಲೂಪರ್ ಬಿದ್ದು ಕಾರಿನ ಗ್ಲಾಸ್ ಛಿದ್ರ – ಟೋಲ್ ಶುರುವಾದ ಮೊದಲ ದಿನವೇ ರಗಳೆ!

ಕಳೆದ ಭಾನುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನ ಲೋಕಾರ್ಪಣೆಗೊಳಿಸಿದ್ದಾರೆ. ಇವತ್ತಿನಿಂದ ಟೋಲ್ ಸಂಗ್ರಹ ಕೂಡ ಆರಂಭವಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ.

ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ. ಆದ್ರೆ ಟೋಲ್ ಸಂಗ್ರಹ ಆರಂಭವಾದ ಮೊದಲ ದಿನವೇ ಹೈಡ್ರಾಮಾ ನಡೆದಿದೆ. ಟೋಲ್​ಗಳು ಅವ್ಯವಸ್ಥೆಯ ಆಗರವಾಗಿವೆ. ಕಣಮಿಣಕಿ ಟೋಲ್ ಬಳಿ ಕಾರ್ ಗ್ಲಾಸ್ ಮೇಲೆ ಬ್ಲೂಪರ್ ಬಿದ್ದು ಕಾರಿನ ಗ್ಲಾಸ್ ಒಡೆದುಹೋಗಿದೆ. ಇದ್ರಿಂದ ಕೆರಳಿದ ಕಾರು ಮಾಲೀಕ ಗ್ಲಾಸ್ ಹಾಕಿಸಿಕೊಡುವಂತೆ ಆಗ್ರಹಿಸಿದ್ದು ಆತನ ಮನವೊಲಿಸಲು ಪೊಲೀಸರು ಹರಸಾಹಸಪಡಬೇಕಾಯ್ತು.

ಇದನ್ನೂ ಓದಿ : ರಸ್ತೆಯಲ್ಲಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿದ ರಾಕ್ಷಸ – ವ್ಯಾಪಕ ಆಕ್ರೋಶ

ಹಾಗೇ ಶೇಷಗಿರಿಹಳ್ಳಿ ಟೋಲ್​ನಲ್ಲೂ ಸೆನ್ಸಾರ್ ಸರಿಯಿಲ್ಲದೇ ವಾಹನಗಳಿಗೆ ಡ್ಯಾಮೇಜ್ ಆಯ್ತು. ಆದ್ದರಿಂದ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕಿದ್ರು.  ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಸೇರಿದಂತೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಟೋಲ್ ಗೇಟ್ ಮುರಿದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರು, ಕಾಂಗ್ರೆಸ್​​​ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯಾಗಿದ್ದು, ಕಾಂಗ್ರೆಸ್​​ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ ಟ್ರಾಫಿಕ್​ ಜಾಮ್​​ ಉಂಟಾಗಿತ್ತು. ಹೀಗಾಗಿ ಸ್ಥಳದಲ್ಲಿ ರಾಮನಗರ ಡಿವೈಎಸ್​​ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು..

suddiyaana