ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ – ಜುಲೈನಲ್ಲಿ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ – ಜುಲೈನಲ್ಲಿ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತ

ಸಿಲಿಕಾನ್‌ ಸಿಟಿ ಜನರಿಗೆ ನಮ್ಮ ಮೆಟ್ರೋ ಜೀವಾಳವಾಗಿದೆ. ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸ್ತಿದ್ದಾರೆ. ಇದೀಗ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಇದೆ. ಇದೇ ಜುಲೈಯೊಳಗೆ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ.

ಇದನ್ನೂ ಓದಿ: RCBಗೆ ಸವಾಲಾಗುತ್ತಾ MI ಬೇಟೆ – ಗೆಲುವಿನ ಟ್ರ್ಯಾಕ್ ಗೆ ಏನೆಲ್ಲಾ ಟ್ರಿಕ್ಸ್?

ಈಗಾಗಲೇ ಹಲವು ಬಾರಿ ಯೆಲ್ಲೋ ಮಾರ್ಗ ಸಂಚಾರ ಮುಕ್ತವಾಗಲಿದೆ ಎಂದು ಹೇಳಿದ್ದ ದಿನಾಂಕದಿಂದ ಮುಂದೂಡಿಕೆಯಾಗಿತ್ತು. ಇದ್ರಿಂದ ಜನ ರೋಸಿ ಹೋಗಿದ್ದರು. ಈ ಮಧ್ಯೆ ಆದಷ್ಟು ಬೇಗ ಮಾರ್ಗ ಓಪನ್ ಮಾಡಬೇಕು ಎಂದು ಬಿಎಂಆರ್‌ಸಿಎಲ್ ತೀವ್ರಗತಿಯಲ್ಲಿ ಕೆಲಸ ಆರಂಭಿಸಿದೆ. ಈ ಮಾರ್ಗದಲ್ಲಿ ಡ್ರೈವರ್‌ ಲೆಸ್ ಮೆಟ್ರೋಗಳು ಓಡಾಡಲಿದ್ದು. ಟ್ರೈನ್‌ಗಳ ಬರುವಿಕೆ ತಡವಾಗಿದ್ದ ಕಾರಣದಿಂದಲೇ ಪ್ರಯಾಣ ಆರಂಭಿಸಲು ಸಾಧ್ಯವಾಗಿರಲಿಲ್ಲ. ಈಗಲೂ ಕೂಡ ಪೂರ್ಣ ಪ್ರಮಾಣದ ರೈಲುಗಳು ಬಿಎಂಆರ್ಸಿಎಲ್ ಕೈ ಸೇರಿಲ್ಲ. ಸದ್ಯ ತಮ್ಮ ಬಳಿ ಇರುವ ಎರಡು ರೈಲುಗಳಿಗೆ, ಶೀಘ್ರದಲ್ಲೇ ಇನ್ನೆರೆಡು ರೈಲು ಸೇರಿಸಿ ಮಾರ್ಗವನ್ನು ಸಂಚಾರ ಮುಕ್ತ ಮಾಡಲು ತಯಾರಿ ಶುರು ಮಾಡಿದೆ.

ಇದೇ ತಿಂಗಳ ಅಂತ್ಯಕ್ಕೆ ಒಂದು ರೈಲು ಬಿಎಂಆರ್‌ಸಿಎಲ್ ಕೈ ಸೇರಲಿದೆ. ಜೂನ್ ಮೊದಲ ವಾರಕ್ಕೆ ಮತ್ತೊಂದು ರೈಲು ಸಿಗಲಿದೆ. ಅಲ್ಲಿಗೆ ಒಟ್ಟು 4 ರೈಲು ಈ ಮಾರ್ಗಕ್ಕೆ ಸಿಗಲಿದೆ. ಬಳಿಕ ಸಂಪೂರ್ಣ ಮಾರ್ಗ ಪರಿಶೀಲನೆ ಮಾಡಿ, ಜುಲೈ ಮೊದಲ ವಾರದಲ್ಲಿ ಈ ನಾಲ್ಕು ರೈಲುಗಳ ಮೂಲಕವೇ ಮಾರ್ಗ ಸಂಚಾರ ಮುಕ್ತ ಮಾಡುವುದು ಬಹುತೇಕ ಖಚಿತವಾಗಿದೆ. ಪ್ರತಿ 30 ನಿಮಿಷಕ್ಕೊಂದು ರೈಲಿನಂತೆ, ಸಂಚಾರ ಮಾಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ಒಟ್ಟು ನಿಲ್ದಾಣಗಳ ಪೈಕಿ 3 ಅಥವಾ 5 ನಿಲ್ದಾಣಕ್ಕೊಂದು ಸ್ಟಾಪ್‌ನಂತೆ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯಚರಣೆ ಮಾಡಲು ಪ್ಲ್ಯಾನ್ ಕೂಡ ಮಾಡಲಾಗಿದೆ.

ಇನ್ನೂ ಮಾರ್ಗ ಓಪನ್ ಸಂಬಂಧ 4ನೇ ಟ್ರೈನ್ ಬರುತ್ತಿದ್ದಂತೆ ಮತ್ತೊಮ್ಮೆ ಕೇಂದ್ರ ರೈಲ್ವೆ ಸುರಕ್ಷತಾ ಅಧಿಕಾರಿಗಳನ್ನ ಮತ್ತೊಮ್ಮೆ ಮಾರ್ಗ ಪರಿಶೀಲನೆಗೆ ಬಿಎಂಆರ್‌ಸಿಎಲ್ ಆಹ್ವಾನಿಸಲಿದೆ. ಅದರಂತೆ ಅಧಿಕಾರಿಗಳು ಭೇಟಿ ನೀಡಿ, ಮತ್ತೆ ಸಿಗ್ನಲಿಂಗ್ ಪರೀಕ್ಷೆ ನಡೆಸಿ ಮಾರ್ಗ ಓಪನ್‌ಗೆ ಗ್ರೀನ್ ಸಿಗ್ನಲ್ ನೀಡಲಿದೆ. ಕೂಡಲೇ ಸರ್ಕಾರಕ್ಕೆ ಪತ್ರ ಬರೆದು ಅನುಮತಿ ಪಡೆದು ಜುಲೈ ಅಂತ್ಯದೊಳಗೆ ಮಾರ್ಗ ಓಪನ್ ಆಗುವ ಸಾಧ್ಯತೆ ಇದೆ.

Shwetha M

Leave a Reply

Your email address will not be published. Required fields are marked *