RCB ಫ್ಯಾನ್ಸ್ ಗೆ ಮತ್ತೊಂದು ಗುಡ್ ನ್ಯೂಸ್ – ಚಿನ್ನಸ್ವಾಮಿ ಪಂದ್ಯಗಳ ಅಧಿಕೃತ ಟಿಕೆಟ್ ಇದ್ರೆ ಮೆಟ್ರೋ ಪ್ರಯಾಣ ಫ್ರೀ

RCB ಫ್ಯಾನ್ಸ್ ಗೆ ಮತ್ತೊಂದು ಗುಡ್ ನ್ಯೂಸ್ – ಚಿನ್ನಸ್ವಾಮಿ ಪಂದ್ಯಗಳ ಅಧಿಕೃತ ಟಿಕೆಟ್ ಇದ್ರೆ ಮೆಟ್ರೋ ಪ್ರಯಾಣ ಫ್ರೀ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಈಗ ಒಂದರ ಹಿಂದೆ ಒಂದರಂತೆ ಬಂಪರ್ ಸುದ್ದಿಗಳೇ ಬರ್ತಿವೆ. ಮೊದಲಿಗೆ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳನ್ನ ಆಡಲ್ಲ ಅಂದ್ರು. ಆ ನಂತ್ರದಲ್ಲಿ ಹೋಂ ಮ್ಯಾಚ್ ಗಳಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಉದ್ಘಾಟನಾ ಪಂದ್ಯ ಫೈನಲ್ ಪಂದ್ಯವೂ ಇಲ್ಲೇ ನಡೆಯಲಿದೆ. ಈಗ ಚಿನ್ನಸ್ವಾಮಿ ಮೈದಾನಕ್ಕೆ ಪಂದ್ಯಗಳನ್ನ ನೋಡಲು ಹೋಗೋರಿಗೆ ನಮ್ಮ ಮೆಟ್ರೋದಿಂದ ಭರ್ಜರಿ ಆಫರ್ ಸಿಕ್ಕಿದೆ. ಮ್ಯಾಚ್ ಟಿಕೆಟ್ ನಿಮ್ಮತ್ರ ಇದ್ರೆ ಮೆಟ್ರೋದಲ್ಲಿ ಫ್ರೀಯಾಗಿ ಟ್ರಾವೆಲ್ ಮಾಡಬಹುದು.

ಇದನ್ನೂ ಓದಿ : ರಾಜಸ್ಥಾನ್ ರಾಯಲ್ಸ್   ತಂಡಕ್ಕೆ ಬಿಗ್‌ ಶಾಕ್ -IPLನಿಂದ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್  OUT

ಮಾರ್ಚ್ 28ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೇ ಸನ್ ರೈಸರ್ಸ್ ಹೈದ್ರಾಬಾದ್ ನಡುವಿನ ಪಂದ್ಯದೊಂದಿಗೆ ಈ ಬಾರಿಯ ಐಪಿಎಲ್ ಆರಂಭವಾಗಲಿದೆ. ಚಿನ್ನಸ್ವಾಮಿ ಮೈದಾನದಲ್ಲಿ ಮೊದಲ ಪಂದ್ಯ ನಡೆಉಲಿದೆ. ತವರಿನ ಪಂದ್ಯಗಳನ್ನು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಅನುಮತಿ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ಈ ಬಾರಿ ಅಧಿಕೃತವಾಗಿ ಪಂದ್ಯಗಳ ಟಿಕೆಟ್ ಖರೀದಿಸಿದವರಿಗೆ ‘ನಮ್ಮ ಮೆಟ್ರೋ’ದಲ್ಲಿ ಉಚಿತ ಪ್ರಯಾಣದ ಅವಕಾಶ ಸಿಗಲಿದೆ. ಪಂದ್ಯಗಳ ವೀಕ್ಷಣೆಗೆ ಟಿಕೆಟ್ ಖರೀದಿಸಿದವರಿಗೆ ಅದರ ಜೊತೆಗೆ ಮೆಟ್ರೋ ಪ್ರಯಾಣದ ಕ್ಯೂಆರ್ ಕೋಡ್ ಸಹ ಲಭ್ಯವಾಗಲಿದೆ. ಟಿಕೆಟ್ ಹೊಂದಿರುವವರು ಮೆಟ್ರೋ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಬಳಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಉಚಿತ ಪ್ರಯಾಣದ ಸೌಲಭ್ಯ  ಪಡೆದುಕೊಳ್ಳಬಹುದು.

2025ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಆರ್ ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿ 11 ಜನ ಪ್ರಾಣ ಬಿಟ್ಟಿದ್ರು. ಹೀಗಾಗಿ ಈ ಸಲ ಚಿನ್ನಸ್ವಾಮಿಯಲ್ಲೇ ಪಂದ್ಯಗಳು ನಡೆದ್ರೂ 80 ಪರ್ಸೆಂಟ್ ವೀಕ್ಷಕರಿಗೆ ಮಾತ್ರವೇ ಪಂದ್ಯಗಳನ್ನ ನೋಡಲು ಅವಕಾಶ ಸಿಗಲಿದೆ. ಹಾಗೇ ಆರ್‌ಸಿಬಿ ತಂಡದ ತವರಿನ ಪಂದ್ಯಗಳಿಗೆ ಆನ್‌ಲೈನ್ ಟಿಕೆಟ್‌ಗಳಿಗೆ ಮಾತ್ರವೇ ಆದ್ಯತೆ ನೀಡಲಾಗಿದೆ. ತಂಡದ ಅಧಿಕೃತ ವೆಬ್‌ಸೈಟ್‌ (SHOP.ROYALCHALLENGERS.COM) ಅಥವಾ ಆ್ಯಪ್ ಮೂಲಕ ಅಭಿಮಾನಿಗಳು ಟಿಕೆಟ್ ಖರೀದಿಸಬಹುದು. ಶೀಘ್ರದಲ್ಲೇ ಟಿಕೆಟ್ ಮಾರಾಟದ ದಿನಾಂಕ ಪ್ರಕಟವಾಗಲಿದೆ. ಯಾವುದೇ ಇತರ ವೆಬ್‌ಸೈಟ್ ಅಥವಾ ವ್ಯಕ್ತಿಯು ಟಿಕೆಟ್ ಮಾರಾಟದ ಹಕ್ಕು ಹೊಂದಿಲ್ಲ. ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ. ಟಿಕೆಟ್‌ ಖರೀದಿಸುವವರು ಸೀಮಿತವಾದ ವಾಹನ ಪಾರ್ಕಿಂಗ್ ಸ್ಥಳಗಳನ್ನು ಮುಂಗಡವಾಗಿ ಬುಕ್ ಮಾಡಬಹುದು. ಪಾರ್ಕಿಂಗ್ ಸ್ಥಳದಿಂದ ಕಬ್ಬನ್ ರಸ್ತೆಯವರೆಗೆ ಪಿಕ್ ಅಪ್ ಮತ್ತು ಡ್ರಾಪ್ ಶಟಲ್ ಸೇವೆ ಲಭ್ಯವಿರಲಿದೆ ಎಂದು ಆರ್‌ಸಿಬಿ ಫ್ರಾಂಚೈಸಿ ತಿಳಿಸಿದೆ.

ಬಿಸಿಸಿಐ ಬಿಡುಗಡೆ ಮಾಡಿರುವ ಐಪಿಎಲ್ ನ ಮೊದಲ ಹಂತದ ಪಂದ್ಯಗಳಲ್ಲಿ ಆರ್ ಸಿಬಿಯ ವೇಳಾಪಟ್ಟಿ ಈ ಕೆಳಗಿನಂತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಗಳು!

ಮಾರ್ಚ್​ 28 – RCB vs SRH – ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

ಏಪ್ರಿಲ್ 5 – RCB vs CSK – ​ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

ಏಪ್ರಿಲ್​ 10 – RR vs RCB – ಬರ್ಸಪಾರ ಕ್ರೀಡಾಂಗಣ, ಗುವಾಹಟಿ

ಏಪ್ರಿಲ್​ 12- MI vs RCB – ವಾಂಖೆಡೆ ಮೈದಾನ, ಮುಂಬೈ

Shantha Kumari