ನಮ್ಮ ಮೆಟ್ರೋ ನೇರಳೆ ಮಾರ್ಗದ ಪ್ರಯಾಣಿಕರಿಗೆ ಸಿಹಿಸುದ್ದಿ – ಸೆ. 15 ರ ನಂತರ ಈ ಎರಡು ಮಾರ್ಗಗಳಲ್ಲಿ ಸಂಚಾರ ಆರಂಭ?

ನಮ್ಮ ಮೆಟ್ರೋ ನೇರಳೆ ಮಾರ್ಗದ ಪ್ರಯಾಣಿಕರಿಗೆ ಸಿಹಿಸುದ್ದಿ – ಸೆ. 15 ರ ನಂತರ ಈ ಎರಡು ಮಾರ್ಗಗಳಲ್ಲಿ ಸಂಚಾರ ಆರಂಭ?

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಜನರಿಗೆ ಬಿಎಂಆರ್‌ಸಿಎಲ್ ಸಿಹಿಸುದ್ದಿಯೊಂದನ್ನು ನೀಡಿದೆ. ಬೈಯಪ್ಪನಹಳ್ಳಿ-ಕೆ.ಆರ್‌. ಪುರ, ನಡುವೆ 2.5 ಕಿಲೋಮೀಟರ್‌ ಹಾಗೂ ಕೆಂಗೇರಿ-ಚಲ್ಲಘಟ್ಟದ ಮಾರ್ಗದಲ್ಲಿ ನಡೆಯುತ್ತಿರುವ ವಿವಿಧ ಪರೀಕ್ಷೆಗಳು ಕೊನೆ ಹಂತ ತಲುಪಿದೆ. ನೇರಳೆ ಮಾರ್ಗದ ನಮ್ಮ ಮೆಟ್ರೋ ರೈಲುಗಳ ಸಂಚಾರ ಸೆಪ್ಟೆಂಬರ್ 15ರ ಬಳಿಕ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದೆ.

ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿ-ಕೆ.ಆರ್‌. ಪುರ, ನಡುವೆ 2.5 ಕಿಲೋಮೀಟರ್‌ ಹಾಗೂ ಕೆಂಗೇರಿ-ಚಲ್ಲಘಟ್ಟದ ನಡುವೆ 1.9 ಕಿ.ಮೀ ಕಾಮಗಾರಿಗಳು ಬಾಕಿ ಉಳಿದಿದ್ದವು. ಸದ್ಯ ಮೆಟ್ರೋ ಮಾರ್ಗ ಸಂಪೂರ್ಣ ಸಿದ್ಧವಾಗಿದ್ದು ಚಾಲನೆ ಸಿಕ್ಕರೆ ನೇರಳೆ ಮಾರ್ಗವು ಪೂರ್ವ ಬೆಂಗಳೂರು ನಗರದ ಬಹುತೇಕ ಭಾಗಗಳಿಗೆ ಸಂಪರ್ಕಿಸುತ್ತದೆ.

ಇದನ್ನೂ ಓದಿ: ಸ್ವಂತ ವಾಹನದಲ್ಲಿ ಪ್ರಯಾಣಿಸುವುದ್ದಕ್ಕಿಂತ ಮೆಟ್ರೋ ಓಡಾಟವೇ ಬೆಸ್ಟ್‌! – ಬೆಂಗಳೂರಿನ ಶೇ.95 ರಷ್ಟು ಜನತೆಗೆ ನಮ್ಮ ಮೆಟ್ರೋ ಅಚ್ಚುಮೆಚ್ಚು!

ಬಿಎಂಆರ್‌ಸಿಎಲ್‌ ಮೆಟ್ರೋ ರೈಲು ಸುರಕ್ಷತೆಯ ಆಯುಕ್ತರಿಗೆ ಸಾಧ್ಯವಾದಷ್ಟು ಬೇಗ ಬಾಕಿ ಉಳಿದಿರುವ ಎರಡು ವಿಸ್ತರಿತ ನಿಲ್ದಾಣಗಳನ್ನು ಪರಿಶೀಲಿಸಲು ಮನವಿ ಮಾಡಿದ್ದು CMRS ನಮಗೆ ಕೆಲವು ಸ್ಪಷ್ಟೀಕರಣಗಳನ್ನು ಕೇಳಿದೆ, ನಾವು ಅವುಗಳನ್ನು ಸೆಪ್ಟೆಂಬರ್ 7 ರಂದು ಸಲ್ಲಿಸುತ್ತೇವೆ. ನಾವು ಸೆಪ್ಟೆಂಬರ್ 15 ರೊಳಗೆ ತಪಾಸಣೆ ಮತ್ತು ಇತರ ಸಣ್ಣ ಬಾಕಿಯಿರುವ ಕೆಲಸಗಳನ್ನು ಪೂರ್ಣಗೊಳಿಸುತ್ತೇವೆ. ಅದರ ನಂತರ ಎರಡೂ ವಿಸ್ತರಿತ ಮಾರ್ಗಗಳನ್ನು ಉದ್ಘಾಟಿಸುತ್ತೇವೆ. ಈಗಾಗಲೇ ನೇರಳೆ ಮಾರ್ಗದ ಎರಡೂ ವಿಸ್ತರಣೆಗಳಲ್ಲಿ ಪ್ರಾಯೋಗಿಕ ಚಾಲನೆಗಳನ್ನು ಈಗಾಗಲೇ ನಡೆಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಎಂಡಿ ಅಂಜುಮ್ ತಿಳಿಸಿದ್ದಾರೆ.

ಜುಲೈ ಮಧ್ಯದಲ್ಲಿ ಕೆಆರ್ ಪುರಂ-ಬೈಯಪ್ಪನಹಳ್ಳಿ ಮಾರ್ಗವನ್ನು ಉದ್ಘಾಟಿಸುವ ಗುರಿ ಇದೆ ಎಂದು ಬಿಎಂಆರ್‌ಸಿಎಲ್ ಈ ಹಿಂದೆ ಘೋಷಿಸಿತ್ತು. ಒಮ್ಮೆ ಈ ಮಾರ್ಗ ಉದ್ಘಾಟನೆಗೊಂಡರೆ, ಭಾರೀ ಅನುಕೂಲ ಆಗಲಿದ್ದು ಬೆಂಗಳೂರಿನ ಜನ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸುವ ನಿರೀಕ್ಷೆಯಿದೆ. ಏಕೆಂದರೆ ವೈಟ್‌ಫೀಲ್ಡ್ ಹಲವಾರು ಟೆಕ್ ಪಾರ್ಕ್‌ಗಳನ್ನು ಹೊಂದಿದೆ ಮತ್ತು ನಗರದ ವಿವಿಧ ಭಾಗಗಳ ಉದ್ಯೋಗಿಗಳು ಅಲ್ಲಿ ಕೆಲಸ ಮಾಡುತ್ತಾರೆ. ಹೀಗಾಗಿ ಇದು ಅನುಕೂಲ ಆಗಲಿದೆ.

suddiyaana