ಬೆಂಗಳೂರಿನಿಂದ ಮಂತ್ರಾಲಯ ಹೋಗುವವರಿಗೆ ಗುಡ್ ನ್ಯೂಸ್! – ಸರ್ಕಾರದಿಂದ ಟೂರ್ ಪ್ಯಾಕೇಜ್!

ದೇಶದ ಅತ್ಯಂತ ಪ್ರಮುಖ ಪುಣ್ಯ ಕ್ಷೇತ್ರಗಳ ಪೈಕಿ ಮಂತ್ರಾಲಯವು ಒಂದು. ಮಂತ್ರಾಲಯವು ಆಂಧ್ರಪ್ರದೇಶದಲ್ಲಿ ಇದ್ದರೂ ಕೂಡ ಇಲ್ಲಿಗೆ ಕರ್ನಾಟಕದಿಂದ ಹೋಗುವ ಭಕ್ತಾದಿಗಳ ಸಂಖ್ಯೆಯೇ ಹೆಚ್ಚು. ದಿನೇ ದಿನೇ ಮಂತ್ರಾಲಯಕ್ಕೆ ಹೋಗುವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರವು ಮಂತ್ರಾಲಯಕ್ಕೆ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ.
ಇದನ್ನೂ ಓದಿ : ಉಡುಪಿ ಶ್ರೀಕೃಷ್ಣ ಮಠದಲ್ಲಿ ಡ್ರೆಸ್‌ಕೋಡ್! – ಇನ್ಮುಂದೆ ಶಾರ್ಟ್ಸ್, ಟೈಟ್ ಪ್ಯಾಂಟ್ ಧರಿಸುವಂತಿಲ್ಲ!
ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವವರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವಿಶೇಷ ಪ್ಯಾಕೇಜ್ ಒಂದನ್ನು ಬಿಡುಗಡೆ ಮಾಡಿದೆ. ಪ್ರತಿ ಬುದ್ಧವಾರ ಮತ್ತು ಶುಕ್ರವಾರ ಈ ಪ್ಯಾಕೇಜ್ ಇರುತ್ತದೆ. ರಾಘವೇಂದ್ರ ಸ್ವಾಮಿ ಮಠ ಮಾತ್ರವಲ್ಲದೆ. ಇತರ ಸ್ಥಳಗಳಿಗೂ ಇರಲಿ ಕರೆದುಕೊಂಡು ಹೋಗಲಾಗುತ್ತದೆ. ಜತಗೆ ಈ ಎಲ್ಲ ಸೌಲಭ್ಯಗಳು ಇದೆ.
ರಾಘವೇಂದ್ರ ಸ್ವಾಮಿ ದರ್ಶನಕ್ಕೆ ವಿಶೇಷ ಪ್ಯಾಕೇಜ್ ಮೂಲಕ ಭಕ್ತರಿಗೆ ದರ್ಶನ ಭಾಗ್ಯ ಸಿಗಲಿದೆ. ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ಮಂತ್ರಾಲಯಕ್ಕೆ ತಲುಪಲಿದೆ. ಇದರ ಜತೆಗೆ ಪಂಚಮುಖಿ ಆಂಜನೇಯ ದೇವಸ್ಥಾನ ಕೂಡ ದರ್ಶನ ಮಾಡಬಹುದು. ದೇವರ ದರ್ಶನಕ್ಕೆ ಅನುಕೂಲ ಆಗುವಂತೆ ಈ ದಿನದಂದು ಪ್ಯಾಕೇಜ್ನ್ನು ಬಿಡುಗಡೆ ಮಾಡಲಾಗಿದೆ.
ವಿಷೇಶ ಪ್ಯಾಕೇಜ್‌ನಲ್ಲಿ ಏನೆಲ್ಲಾ ಇದೆ?
ದಿನ 1: ರಾತ್ರಿ 8.00 ಗಂಟೆಗೆ ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಯಿಂದ ನಿರ್ಗಮನ.
ದಿನ 2: ಬೆಳಿಗ್ಗೆ 4.30 – 6.00 ಫ್ರೆಶ್ ಅಪ್
ಬೆಳಿಗ್ಗೆ 6.30 – 10.00 ರಾಘವೇಂದ್ರ ಸ್ವಾಮಿಯ ದರ್ಶನ
ಬೆಳಿಗ್ಗೆ 11.00 – ಮಧ್ಯಾಹ್ನ 12 ಪಂಚಮುಖಿ ಆಂಜನೇಯ ದೇವಸ್ಥಾನ
ಮಧ್ಯಾಹ್ನ 1.00 – 2.00 ದಾರಿಯಲ್ಲಿ ಊಟ
ರಾತ್ರಿ 9.00 ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಗೆ
ಪ್ಯಾಕೇಜ್ ದರ ಹೇಗೆ?
ಈ ವಿಶೇಷ ಪ್ಯಾಕೇಜ್‌ನಲ್ಲಿ ಎಲ್ಲ ಸೌಲಭ್ಯಗಳು ಸೇರಿದಂತೆ ಒಬ್ಬರಿಗೆ 2780 ಇರುತ್ತದೆ. ಜತೆಗೆ ಮರುಪಾವತಿ ಸೌಲಭ್ಯ ಕೂಡ ಇದೆ. 48 ಗಂಟೆಗಳ ಮೊದಲು ಟಿಕೆಟ್ ರದ್ದು ಮಾಡಿದರೆ – 10%, 24 ಗಂಟೆಗಳ ಮೊದಲು ಟಿಕೆಟ್ ರದ್ದು ಮಾಡಿದರೆ – 25% ಕಡಿತಗೊಳಿಸಲಾಗಿದೆ. 24 ಗಂಟೆಗಳ ಒಳಗೆ ಟಿಕೆಟ್ ರದ್ದು ಮಾಡಿದರೆ ಯಾವುದೇ ಮರುಪಾವತಿ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವೆಬ್ ಸೈಟ್ಗೆ ಭೇಟಿ ನೀಡಿ ಪರಿಶೀಲನೆ ಮಾಡಬಹುದು.

ನೋಡಿರಿ

